ಕರ್ನಾಟಕ

karnataka

ETV Bharat / business

2 ದಿನ 78 ಪೈಸೆ ಕುಸಿದ ಬಳಿಕ ಡಾಲರ್​ಗೆ ರೂಪಾಯಿಯ ಭರ್ಜರಿ ತಿರುಗೇಟು

ಬುಧವಾರದ ಸಾಗರೋತ್ತರ ಫಾರೆಕ್ಸ್ ಮಾರುಕಟ್ಟೆಯಲ್ಲಿ ಡಾಲರ್ ಎದುರು ಭಾರತೀಯ ಕರೆನ್ಸಿ ರೂಪಾಯಿ ಮೌಲ್ಯ 59 ಪೈಸೆ ಏರಿಕೆ ದಾಖಲಿಸಿದೆ. ಕಳೆದ ಎರಡು ಅವಧಿಯಲ್ಲಿ 78 ಪೈಸೆ ಕುಸಿದಿತ್ತು. ಇಂದಿನ ಆರಂಭಿಕ ವಹಿವಾಟಿನಲ್ಲಿ 29 ಪೈಸೆ ಏರಿಕೆ ಕಂಡು ₹ 71.49ರಲ್ಲಿ ವಹಿವಾಟು ನಡೆಸಿತ್ತು.

ಸಾಂದರ್ಭಿಕ ಚಿತ್ರ

By

Published : Sep 18, 2019, 8:22 PM IST

ಮುಂಬೈ: ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಬ್ಯಾಂಕ್​ಗಳು ಮತ್ತು ರಫ್ತುದಾರರು ಡಾಲರ್​ ಮಾರಾಟದತ್ತ ಹೆಚ್ಚಿನ ಆಸಕ್ತಿ ತಳೆದಿದ್ದರಿಂದ ಬುಧವಾರದ ವಹಿವಾಟಿನಲ್ಲಿ ರೂಪಾಯಿ ಮೌಲ್ಯ ಏರಿಕೆಯಾಗಿದೆ.

ಬುಧವಾರದ ಸಾಗರೋತ್ತರ ಫಾರೆಕ್ಸ್ ಮಾರುಕಟ್ಟೆಯಲ್ಲಿ ಡಾಲರ್ ಎದುರು ಭಾರತೀಯ ಕರೆನ್ಸಿ ರೂಪಾಯಿ ಮೌಲ್ಯ 59 ಪೈಸೆ ಏರಿಕೆ ದಾಖಲಿಸಿದೆ. ಕಳೆದ ಎರಡು ಅವಧಿಯಲ್ಲಿ 78 ಪೈಸೆ ಕುಸಿದಿತ್ತು. ಇಂದಿನ ಆರಂಭಿಕ ವಹಿವಾಟಿನಲ್ಲಿ 29 ಪೈಸೆ ಏರಿಕೆ ಕಂಡು ₹ 71.49ರಲ್ಲಿ ವಹಿವಾಟು ನಡೆಸಿತ್ತು.

ಆರಂಭದಲ್ಲಿ 54 ಪೈಸೆ ಏರಿಕೆ ಕಂಡು 71.24ಕ್ಕೆ ತಲುಪಿದೆ. ಸ್ಥಳೀಯ ಘಟಕವು ದಿನದಲ್ಲಿ ಗರಿಷ್ಠ 71.52 ಮತ್ತು ಕನಿಷ್ಠ 71.16ರಷ್ಟು ದಾಖಲಾಗಿದೆ. ಈ ಷೇರು ಮಾರುಕಟ್ಟೆಯಲ್ಲಿ ಇತರ ವಿಶ್ವ ಕರೆನ್ಸಿಗಳ ಎದುರು ಡಾಲರ್​ ದುರ್ಬಲಗೊಂಡ ಪರಿಣಾಮ ರೂಪಾಯಿ ಮೌಲ್ಯ ಅಲ್ಪ ಏರಿಕೆ ಕಂಡಿದೆ.

ABOUT THE AUTHOR

...view details