ಮುಂಬೈ: ಜಾಗತಿಕ-ದೇಶಿ ಆರ್ಥಿಕ ಹಿಂಜರಿತ, ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಕಡಿತ ಪರಿಣಾಮ ಡಾಲರ್ ಎದುರು ರೂಪಾಯಿ 24 ಪೈಸೆ ಕುಸಿತ ದಾಖಲಿಸಿದೆ.
ಆರ್ಥಿಕ ಕುಸಿತದ ಗಾಯದ ಮೇಲೆ ಬರೆ; ಡಾಲರ್-ರೂಪಾಯಿ ನಡುವೆ ಜಿದ್ದಾಜಿದ್ದಿ - Dollar
ಆರ್ಥಿಕ ಮಂದಗತಿ ಮತ್ತು ಆರ್ಥಿಕ ವಲಯದ ನಿರಾಶಾದಾಯಕ ಚಟುವಟಿಕೆಯ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯದಲ್ಲಿ ಇಳಿಕೆಯಾಗಿ ಪ್ರತಿ ಡಾಲರ್ ಎದುರು ₹ 71.36 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ನಿನ್ನೆಯಷ್ಟೆ 59 ಪೈಸೆಯಷ್ಟು ಏರಿಕೆ ದಾಖಲಿಸಿದ ರೂಪಾಯಿ, ಇಂದು ಮತ್ತೆ ಕ್ಷೀಣಿಸಿದೆ. ಆರ್ಥಿಕ ಕುಸಿತದ ಆತಂಕದ ನಡುವೆ ಭಾರತೀಯ ಕರೆನ್ಸಿ ಮೌಲ್ಯದ ಇಳಿಕೆಯು ಗಾಯದ ಮೇಲೆ ಬರೆ ಎಂಬಂತಿದೆ.
ಆರ್ಥಿಕ ಮಂದಗತಿ ಮತ್ತು ಆರ್ಥಿಕ ವಲಯದ ನಿರಾಶಾದಾಯಕ ಚಟುವಟಿಕೆಯ ಕಾರಣ ರೂಪಾಯಿ ಮೌಲ್ಯದಲ್ಲಿ ಇಳಿಕೆಯಾಗಿ ಪ್ರತಿ ಡಾಲರ್ ಎದುರು ₹ 71.36 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ನಿನ್ನೆಯಷ್ಟೆ 59 ಪೈಸೆಯಷ್ಟು ಏರಿಕೆ ದಾಖಲಿಸಿದ ರೂಪಾಯಿ, ಇಂದು ಮತ್ತೆ ಕ್ಷೀಣಿಸಿದೆ. ಆರ್ಥಿಕ ಕುಸಿತದ ಆತಂಕದ ನಡುವೆ ಭಾರತೀಯ ಕರೆನ್ಸಿ ಮೌಲ್ಯದ ಇಳಿಕೆಯು ಗಾಯದ ಮೇಲೆ ಬರೆ ಎಂಬಂತೆ ಇದೆ.
ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿದರ ಕಡಿತಗೊಳಿಸುವ ನಿರ್ಣಯ ತೆಗೆದುಕೊಂಡಿದೆ. ತನ್ನ ಸಾಲದ ಮೇಲಿನ ಬಡ್ಡಿದರದಲ್ಲಿ ಶೇ 1.75ರಿಂದ 2.0ರಷ್ಟು (ಬೇಸಿಸ್ ಪಾಯಿಂಟ್) ಕಡಿತಗೊಳಿಸುವುದಾಗಿ ಹೇಳಿತ್ತು. ಇದರ ಪರಿಣಾಮವಾಗಿ ಡಾಲರ್ ಬೆಲೆ ಏರಿಕೆ ದಾಖಲಿಸಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.