ನವದೆಹಲಿ : ಮೇ ತಿಂಗಳಲ್ಲಿ ಭಾರತದ ಸರಕು ರಫ್ತು 32.27 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದ್ದು, 2020ರ ಮೇ ತಿಂಗಳಲ್ಲಿ ದಾಖಲಾದ 19.05 ಬಿಲಿಯನ್ ಡಾಲರ್‌ಗಿಂತ 69.35ರಷ್ಟು ಹೆಚ್ಚಾಗಿದೆ ಎಂದು ಅಧಿಕೃತ ಅಂಕಿ- ಅಂಶಗಳು ಮಂಗಳವಾರ ತಿಳಿಸಿವೆ.
ಭಾರತದ ಸರಕು ರಫ್ತು 32.27 ಬಿಲಿಯನ್ ಡಾಲರ್‌ಗೆ ಏರಿಕೆ
ಕಳೆದ ತಿಂಗಳು ಭಾರತದ ಸರಕು ರಫ್ತು 2019ರ ಮೇ ಮಟ್ಟಕ್ಕಿಂತ ಶೇ 8.11ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ..
Rising Trend: India's May exports up over $32 bn
ಕಳೆದ ತಿಂಗಳು ರಫ್ತು ಮೇ 2019ರ ಮಟ್ಟಕ್ಕಿಂತ ಶೇ.8.11ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಏಪ್ರಿಲ್ 2021ರಲ್ಲಿ ದೇಶದ ಸರಕು ರಫ್ತು 30.63 ಬಿಲಿಯನ್ಗೆ ಏರಿತ್ತು.
ಮೇ 2021ರಲ್ಲಿ ಪೆಟ್ರೋಲಿಯಂ ಅಲ್ಲದ ಮತ್ತು ರತ್ನೇತರ ಮತ್ತು ಆಭರಣ ರಫ್ತುಗಳ ಮೌಲ್ಯ 23.97 ಬಿಲಿಯನ್ ಡಾಲರ್ ಆಗಿದ್ದು, 2020ರ ಮೇ ತಿಂಗಳಲ್ಲಿ 16.36 ಬಿಲಿಯನ್ ಡಾಲರ್‌ಗಳಿಗೆ ಹೋಲಿಸಿದರೆ, ಇದು 46.50ರಷ್ಟು ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ.