ನವದೆಹಲಿ: ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರವು ಆಗಸ್ಟ್ ತಿಂಗಳಲ್ಲಿ ಅಲ್ಪ ಏರಿಕೆಯಾಗಿದೆ ಎಂದು ಕೇಂದ್ರಿಯ ಸಾಂಖ್ಯಿಕ ಕಚೇರಿ (ಸಿಎಸ್ಒ) ತಿಳಿಸಿದೆ.
ಚಿಲ್ಲರೆ ಹಣದುಬ್ಬರದಲ್ಲಿ ಏರಿಕೆ, ಆಹಾರ ಪದಾರ್ಥಗಳ ಬೆಲೆಯೆಷ್ಟು ಗೊತ್ತೆ?
ಆಹಾರ ಪದಾರ್ಥಗಳ ಬೆಲೆಯು ಜುಲೈ ತಿಂಗಳಲ್ಲಿ ಶೇ 2.36ರಷ್ಟಿದ್ದರೆ ಆಗಸ್ಟ್ನಲ್ಲಿ ಶೇ 2.99ಕ್ಕೆ ತಲುಪಿವೆ. 2018ರ ಆಗಸ್ಟ್ ತಿಂಗಳಲ್ಲಿ ಸಿಪಿಐ ಹಣದುಬ್ಬರ ಶೇ 3.69ರಷ್ಟಿತ್ತು. ಚಿಲ್ಲರೆ ಮಾರುಕಟ್ಟೆಯ ಅಂಗಡಿ ಅಂತ್ಯದ ಬೆಲೆ ಮಾಪನ ಬದಲಾವಣೆಯಲ್ಲಿ ಸಿಪಿಐ ಆಧಾರಿತ ಹಣದುಬ್ಬರವು ಆರ್‌ಬಿಐ ಇರಿಸಿಕೊಂಡಿರುವ ಶೇ 4ರಷ್ಟು ಗುರಿಯಲ್ಲಿ ಮುಂದುವರಿದಿದೆ.
ಜುಲೈ ತಿಂಗಳಲ್ಲಿ ಶೇ 3.15ರಷ್ಟು ಇದ್ದ ಚಿಲ್ಲರೆ ಹಣದುಬ್ಬರ ಪ್ರಮಾಣವು ಆಗಸ್ಟ್ ತಿಂಗಳಿಗೆ ಶೇ 3.21ಕ್ಕೆ ತಲುಪಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಯ ಏರಿಳಿತ ಆಗುವುದರ ಜೊತೆಗೆ ಆಹಾರ ಧಾನ್ಯ, ಸರಕು ತಯಾರಿಕೆ ಉತ್ಪನ್ನಗಳ ಬೆಲೆಯಲ್ಲಿ ವ್ಯತ್ಯಾಸವಾಗಿದೆ.
ಆಹಾರ ಪದಾರ್ಥಗಳ ಬೆಲೆಯು ಜುಲೈ ತಿಂಗಳಲ್ಲಿ ಶೇ 2.36ರಷ್ಟು ಇದ್ದರೆ ಆಗಸ್ಟ್ನಲ್ಲಿ ಶೇ 2.99ಕ್ಕೆ ತಲುಪಿವೆ. 2018ರ ಆಗಸ್ಟ್ ತಿಂಗಳಲ್ಲಿ ಸಿಪಿಐ ಹಣದುಬ್ಬರ ಶೇ 3.69ರಷ್ಟಿತ್ತು. ಚಿಲ್ಲರೆ ಮಾರುಕಟ್ಟೆಯ ಅಂಗಡಿ ಅಂತ್ಯದ ಬೆಲೆ ಮಾಪನ ಬದಲಾವಣೆಯಲ್ಲಿ ಸಿಪಿಐ ಆಧಾರಿತ ಹಣದುಬ್ಬರವು ಆರ್‌ಬಿಐ ಇರಿಸಿಕೊಂಡಿರುವ ಶೇ 4ರಷ್ಟು ಗುರಿಯಲ್ಲಿ ಮುಂದುವರಿದಿದೆ.