ಕರ್ನಾಟಕ

karnataka

ETV Bharat / business

ಡಿಸೆಂಬರ್​ನಲ್ಲಿ ಚಿಲ್ಲರೆ ಹಣದುಬ್ಬರ ದರ ಶೇ.4.59ಕ್ಕೆ ಇಳಿಕೆ

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವು ನವೆಂಬರ್‌ನಲ್ಲಿ ಶೇ.6.93ರಷ್ಟಿತ್ತು. ಡಿಸೆಂಬರ್​ನಲ್ಲಿ ಶೇ. 4.59ಕ್ಕೆ ತಲುಪಿದೆ..

By

Published : Jan 12, 2021, 7:02 PM IST

Retail
ಚಿಲ್ಲರೆ ಹಣದುಬ್ಬರ

ನವದೆಹಲಿ :ಆಹಾರ ಬೆಲೆಗಳು ಕುಸಿಯುತ್ತಿರುವ ಕಾರಣ ಚಿಲ್ಲರೆ ಹಣದುಬ್ಬರವು ಡಿಸೆಂಬರ್‌ನಲ್ಲಿ ಶೇ.4.59ಕ್ಕೆ ಇಳಿಕೆಯಾಗಿದೆ ಎಂದು ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ.

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವು ನವೆಂಬರ್‌ನಲ್ಲಿ ಶೇ.6.93ರಷ್ಟಿತ್ತು. ಡಿಸೆಂಬರ್​ನಲ್ಲಿ ಶೇ. 4.59ಕ್ಕೆ ತಲುಪಿದೆ.

ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ ಆಹಾರ ಹಣದುಬ್ಬರವು 2020ರ ಡಿಸೆಂಬರ್‌ನಲ್ಲಿ ಶೇ.3.41ಕ್ಕೆ ಇಳಿದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ತನ್ನ ಹಣಕಾಸು ನೀತಿ ನಿರ್ಧರಿಸುವಾಗ ಚಿಲ್ಲರೆ ಹಣದುಬ್ಬರವನ್ನು ಗಮದಲ್ಲಿರಿಸಿಕೊಂಡು ಬಡ್ಡಿ ದರ ನಿಗದಿಪಡಿಸುತ್ತದೆ.

ABOUT THE AUTHOR

...view details