ಮಾಸ್ಕೋ: ಉಕ್ರೇನ್ ಮೇಲೆ ಕಳೆದ 13 ದಿನಗಳಿಂದ ಯುದ್ಧ ನಡೆಸುತ್ತಿರುವ ರಷ್ಯಾದಿಂದ ತೈಲ ಆಮದಿಗೆ ಅಮೆರಿಕ ಸೇರಿದಂತೆ ಹಲವು ದೇಶಗಳು ಮುಂದಾಗಿವೆ. ಆದರೆ ಇದು ಜಾಗತಿಕವಾಗಿ ತೈಲ ಗಗನಕ್ಕೇರಲಿದೆ ಎನ್ನಲಾಗಿದೆ.
ಈ ವಿಚಾರವಾಗಿ ರಷ್ಯಾದ ಉಪ ಪ್ರಧಾನ ಮಂತ್ರಿ ಅಲೆಕ್ಸಾಂಡರ್ ನೊವಾಕ್, ರಷ್ಯಾದ ತೈಲವನ್ನು ಮಾರುಕಟ್ಟೆಯಲ್ಲಿ ಖರೀದಿಸದಿದ್ದರೆ ಇಂಧನ ಬೆಲೆಗಳು ಪ್ರತಿ ಬ್ಯಾರೆಲ್ ತೈಲಕ್ಕೆ 300 ಡಾಲರ್‌ಗೆ ಏರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ರಷ್ಯಾವು ಪಶ್ಚಿಮದ ದೇಶಗಳ ಮೇಲೆ ಅವಲಂಬಿತವಾಗಿಲ್ಲ. ಜೊತೆಗೆ ಬೇರೆ ದೇಶಗಳಿಗೆ ಸರಬರಾಜು ಮರುಮಾರ್ಗಗಳನ್ನು ಕಂಡುಕೊಳ್ಳಬಹುದು ಎಂದಿದ್ದಾರೆ.
ಇಂಧನ ನೀತಿಯ ಕೊರತೆಗಳಿ ರಷ್ಯಾವೇ ಕಾರಣ ಎಂದು ಯುರೋಪಿಯನ್ ದೇಶಗಳು ಮತ್ತೊಮ್ಮೆ ಆಪಾದಿಸಲು ಯತ್ನಿಸುತ್ತಿವೆ. ಮಾರುಕಟ್ಟೆಯಲ್ಲಿ ವಸ್ತುಗಳ ಬೆಲೆ ಏರಿಕೆಗೂ ರಷ್ಯಾಗೂ ಯಾವುದೇ ಸಂಬಂಧ. ರಷ್ಯಾ ಹಲವು ದಶಕಗಳಿಂದ ಯುರೋಪ್‌ಗೆ ವಿಶ್ವಾಸಾರ್ಹ ಪಾಲುದಾರ ಆಗಿದೆ. ಮಾಸ್ಕೋ ಯುರೋಪಿಯನ್ ರಾಷ್ಟ್ರಗಳಿಗೆ ಅವರ ಅಗತ್ಯತೆಯ ಸರಿಸುಮಾರು ಶೇ.40ರಷ್ಟು ಅನಿಲವನ್ನು ಪೂರೈಸುತ್ತಿದೆ ಎಂದು ನೊವಾಕ್ ಹೇಳಿದರು.
ಯುರೋಪ್‌ನಲ್ಲಿ ಅನಿಲ ಬೆಲೆಗಳು 1,000 ಘನ ಮೀಟರ್‌ಗೆ ಸುಮಾರು 3,900 ಡಾಲರ್ ದಾಖಲೆಯ ಗರಿಷ್ಠ ಮಟ್ಟ ತಲುಪಿದೆ. ಆದರೆ ಬ್ರೆಂಟ್ ಕಚ್ಚಾ ತೈಲದ ಬೆಲೆಯು 13 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರತಿ ಬ್ಯಾರೆಲ್‌ಗೆ 130 ಡಾಲರ್ ಮೀರಿದೆ.
ಇದನ್ನೂ ಓದಿ:ಉಕ್ರೇನ್ಗೆ 723 ಮಿಲಿಯನ್ ಡಾಲರ್ ಆರ್ಥಿಕ ಪ್ಯಾಕೇಜ್ ಘೋಷಿಸಿದ ವಿಶ್ವಬ್ಯಾಂಕ್