ಮುಂಬೈ:ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ನಿನ್ನೆ (ಸೋಮವಾರ) ನಡೆದ ತಮ್ಮ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸೆಪ್ಟೆಂಬರ್ 5ರಂದು ಆರಂಭವಾಗಲಿರುವ ಜಿಯೋ ಫೈಬರ್ 100 ಎಂಬಿಪಿಎಸ್ ಸ್ಪೀಡ್ನ ಬೇಸ್ ಪ್ಲಾನ್ ಸೇರಿದಂತೆ ಫಸ್ಟ್ ಡೇ ಫಸ್ಟ್ ಶೋ ಪ್ಲಾನ್ಗಳು ಘೋಷಿಸಿದ ಮರು ದಿನದ ಷೇರು ಪೇಟೆಯಲ್ಲಿ ಷೇರು ಮೌಲ್ಯ ದಾಖಲೆ ಏರಿಕೆ ದಾಖಲಿಸಿದೆ.
ಮುಖೇಶ್ ಅಂಬಾನಿ ಅವರು ಮುಂದಿನ ತಿಂಗಳಿಂದ ಭಾರತದಾದ್ಯಂತ ಇಂಟರ್ನೆಟ್ ಸೇವೆಗಳ ಮೇಲಿನ ಶುಲ್ಕ ಕಡಿತಗೊಳಿಸುವ, ಟಿವಿ, ಚಲನಚಿತ್ರ ಸ್ಟ್ರೀಮಿಂಗ್, ಟಿವಿ ಸೆಟ್ ಟಾಪ್ ಬಾಕ್ಸ್ ನಂತಹ ಸೇವೆಗಳ ಘೋಷಣೆಯು ಎದುರಾಳಿ ಕಂಪನಿಗಳ ಮುಖ್ಯವಾಗಿ ಟೆಲಿಕಾಂ ಸಂಸ್ಥೆಗಳ ಷೇರಿನಲ್ಲಿ ಇಳಿಮುಖವಾಗಿದೆ.
ಮುಖೇಶ್ ಅಂಬಾನಿ ಅವರ ಪ್ಲಾನ್ಗಳ ಪಟ್ಟಿ ಹೊರಡಿಸಿದ ಮರುದಿನವೇ ರಿಲಯನ್ಸ್ ಷೇರುಗಳ ಮೌಲ್ಯದಲ್ಲಿ ಶೇ 12ರಷ್ಟು ಏರಿಕೆಯಾಗಿದೆ. 2009ರ ಜನವರಿ 14ರ ಬಳಿಕದ ಅತ್ಯಧಿಕ ಹೆಚ್ಚಳವಾಗಿದೆ. ಇಂದಿನ ವಹಿವಾಟಿನಲ್ಲಿ ರಿಲಯನ್ಸ್ ಭಾರತದ ಅತ್ಯಂತ ಮೌಲ್ಯಯುತ ಕಂಪನಿ ಎಂಬದನ್ನು ಪುನರ್ ಸಾಬೀತುಪಡಿಸಿದೆ. ರಿಲಯನ್ಸ್ ಗ್ರೂಪ್ನ ಷೇರುಗಳ ಮೌಲ್ಯವು ಅತಿ ಹೆಚ್ಚು ಷೇರು ಮೌಲ್ಯ ಹೊಂದಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ಗಿಂತ (ಟಿಸಿಎಸ್) 1 ಬಿಲಿಯನ್ ಡಾಲರ್ ಅಂತರದಲ್ಲಿ ಹಿಂದಿದೆ.
ಟೆಲಿಕಾಂ ಮಾರುಕಟ್ಟೆಯಲ್ಲಿ ರಿಲಯನ್ಸ್ ನೀಡಿದ ಏಟಿಗೆ ಎದುರಾಳಿ ಕಂಪನಿಗಳಾದ ಭಾರ್ತಿ ಏರ್ಟೆಲ್ ಶೇ 4 ಮತ್ತು ವೋಡಾಪೋನ್- ಐಡಿಯಾ ಷೇರುಗಳ ಮೌಲ್ಯದಲ್ಲಿ ಶೇ 5ರಷ್ಟು ಇಳಿಕೆಯಾಗಿದೆ. ಮಲ್ಟಿಫ್ಲೆಕ್ಸ್ ಚೈನ್ ಆಪರೇಟರ್ ಪಿವಿಆರ್ ಮತ್ತು ಐಷರಾಮಿ ಐನಾಕ್ಸ್. ಎನ್ಎಸ್ ಷೇರುಗಳಲ್ಲಿ ಕ್ರಮವಾಗಿ ಶೇ 8 ಮತ್ತು ಶೇ 10ರಷ್ಟು ಇಳಿಕೆಯಾಗಿದೆ.