ನವದೆಹಲಿ: ಬಿಲಿಯನೇರ್ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ 200 ನಗರಗಳಲ್ಲಿ ಜಿಯೋಮಾರ್ಟ್ ಬ್ರಾಂಡ್ ಅಡಿ ತನ್ನ ದಿನಸಿ ವ್ಯವಹಾರದ ಆನ್‌ಲೈನ್ ಸೇವೆ ಆರಂಭಿಸಿದೆ.
200 ನಗರಗಳಲ್ಲಿ ರಿಲಯನ್ಸ್ ಜಿಯೋಮಾರ್ಟ್: ರಾಜ್ಯದ ಈ ಸಿಟಿಗಳಲ್ಲಿ ಮಾರ್ಟ್ ಸೇವೆ ಲಭ್ಯ - ವಾಣಿಜ್ಯ ಸುದ್ದಿಗಳು
ದೇಶದ ಮುಂಬೈ, ದೆಹಲಿ, ಬೆಂಗಳೂರು, ಕೋಲ್ಕತ್ತಾ ಪ್ರಮುಖ ಮಹಾನಗರಗಳು ಮತ್ತು ಮೈಸೂರು, ಭಟಿಂಡಾ ಮತ್ತು ಡೆಹ್ರಾಡೂನ್‌ನಂತಹ ಎರಡನೇ ಹಂತದ ನಗರಗಳಲ್ಲಿ ರಿಲಯನ್ಸ್ ಜಿಯೋಮಾರ್ಟ್ ಸೇವೆ ಲಭ್ಯವಾಗಲಿದೆ.
ಜಿಯೋ ಮಾರ್ಟ್
ದೇಶದ ಮುಂಬೈ, ದೆಹಲಿ, ಬೆಂಗಳೂರು, ಕೋಲ್ಕತ್ತಾ ಸೇರಿ ಪ್ರಮುಖ ಮಹಾನಗರಗಳು ಮತ್ತು ಮೈಸೂರು, ಭಟಿಂಡಾ ಮತ್ತು ಡೆಹ್ರಾಡೂನ್‌ನಂತಹ ಎರಡನೇ ಹಂತದ ನಗರಗಳಲ್ಲಿ ಈ ಸೇವೆಯನ್ನು ನೀಡಲಾಗುತ್ತಿದೆ. ಜಿಯೋಮಾರ್ಟ್ ಈಗ 200ಕ್ಕೂ ಹೆಚ್ಚು ನಗರಗಳಲ್ಲಿ ತಲುಪುತ್ತಿದೆ ಎಂದು ರಿಲಯನ್ಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಾಮೋದರ್ ಮಾಲ್ ಟ್ವೀಟ್ ಮಾಡಿದ್ದಾರೆ.
ಜಿಯೋಮಾರ್ಟ್ ಕಳೆದ ತಿಂಗಳು ಮುಂಬೈ ಸುತ್ತಮುತ್ತಲಿನ ಮೂರು ನೆರೆಹೊರೆಗಳಲ್ಲಿ ಬಳಕೆದಾರರಿಗೆ ಸೇವೆ ಸಲ್ಲಿಸುವ ಪ್ರಾಯೋಗಿಕ ಯೋಜನೆ ಆರಂಭಿಸಿತ್ತು.