ಮುಂಬೈ: ಜಿಯೋ ಹಾಗೂ ಪ್ಯಾನಸೊನಿಕ್ ಏವಿಯೋನಿಕ್ಸ್ ಕಾರ್ಪೊರೇಷನ್ ಅಂಗ ಸಂಸ್ಥೆಯಾದ ಏರೋಮೊಬೈಲ್ ಸಹಯೋಗದೊಂದಿಗೆ ಭಾರತದಲ್ಲಿ ಮೊದಲ ಬಾರಿಗೆ ವಿಮಾನದೊಳಗೆ ಸೇವೆ (ಇನ್-ಫ್ಲೈಟ್ ಸರ್ವೀಸ್) ದೊರೆಯಲಿದೆ.
ವಿದೇಶಗಳಿಗೆ ತೆರಳುವ ಭಾರತೀಯರಿಗೆ ವಿಮಾನದೊಳಗೆ ಧ್ವನಿ ಹಾಗೂ ಡೇಟಾ ಸೇವೆ, ಕೈಗೆಟುಕುವ ಬೆಲೆಯಲ್ಲಿ ದೊರೆಯುತ್ತದೆ. ಆ ಮೂಲಕ ತಮ್ಮ ಪ್ರೀತಿಪಾತ್ರರ ಜತೆಗೆ ನಿರಂತರ ಸಂಪರ್ಕದಲ್ಲಿ ಇರಬಹುದು. ಸದ್ಯಕ್ಕೆ, ವಿದೇಶಗಳಿಗೆ ತೆರಳುವ ವೇಳೆ ಭಾರತೀಯರಿಗೆ ಈ ಸೇವೆ ದೊರೆಯಲಿದೆ. ಒಮ್ಮೆ ಭಾರತದ ವಾಯು ಪ್ರದೇಶದಲ್ಲೂ ಈ ಸೇವೆ ಸಿಗಲು ಶುರುವಾದರೆ ಜಿಯೋದ ಎಲ್ಲ ಗ್ರಾಹಕರಿಗೂ ಲಭ್ಯವಾಗಲಿದೆ.
ವಿಮಾನದೊಳಗೆ ರೋಮಿಂಗ್ ಸೇವೆ ಜತೆ ಬರುತ್ತಿರುವ ಮೊದಲ ಭಾರತೀಯ ಆಪರೇಟರ್ ಜಿಯೋ. ಈ ಅಗ್ಗಳಿಕೆಯು ಮಾರುಕಟ್ಟೆಯಲ್ಲಿ ಹೊಸ ಆವಿಷ್ಕಾರ ತರುವಲ್ಲಿ ಹಾಗೂ ತಂತ್ರಜ್ಞಾನ ವಿಚಾರದಲ್ಲಿ ಜಿಯೋ ಸದಾ ಮುಂದು ಎಂಬುದನ್ನು ಮತ್ತಷ್ಟು ಗಟ್ಟಿ ಮಾಡುತ್ತದೆ.
ಜಿಯೋ ನಿರ್ದೇಶಕ ಆಕಾಶ್ ಅಂಬಾನಿ ಮಾತನಾಡಿ, ಜಿಯೋ ಪೋಸ್ಟ್ ಪೇಯ್ಡ್ ಪ್ಲಸ್ ಗ್ರಾಹಕರಿಗೆ ಅತ್ಯುತ್ಕೃಷ್ಟ ಅನುಭವ ನೀಡುತ್ತದೆ. ಇದೀಗ ಏರೋಮೊಬೈಲ್ ಸಹಯೋಗದೊಂದಿಗೆ ವಿಮಾನದೊಳಗೆ ರೋಮಿಂಗ್ ಸೇವೆ ನೀಡಲಿದ್ದೇವೆ. ಅದು ಕೂಡ ಅತ್ಯಾಕರ್ಷಕ ದರದಲ್ಲಿ. ನಮ್ಮ ಗ್ರಾಹಕರಿಗೆ ಈ ಹೊಸ ಸೇವೆ ನೀಡಲು ಸಂತೋಷವಾಗುತ್ತಿದೆ. 20 ಸಾವಿರ ಅಡಿ ಎತ್ತರದಲ್ಲಿ ಪ್ರಯಾಣಿಸುವಾಗಲೂ ಅಡೆತಡೆ ಇಲ್ಲದೆ, ಅತ್ಯುತ್ತಮ ಗುಣಮಟ್ಟದ ಹಾಗೂ ಸುರಕ್ಷಿತ ರೋಮಿಂಗ್ ಅನುಭವವನ್ನು ಗ್ರಾಹಕರು ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.
ಪ್ಯಾನಸೊನಿಕ್ ಏವಿಯೋನಿಕ್ಸ್ ಮೊಬಿಲಿಟಿ ನಿರ್ದೇಶಕ, ಏರೊಮೊಬೈಲ್ ಸಿಇಒ ಕೆವಿನ್ ರೋಜರ್ಸ್ ಮಾತನಾಡಿ, ಜಿಯೋ ಜತೆಗೆ ಸಹಭಾಗಿತ್ವ ಸಂತಸ ತಂದಿದೆ. ನಮ್ಮ ಸಂಪರ್ಕ ಸೇವೆ ಭಾರತದಾದ್ಯಂತ ವಿಸ್ತರಣೆ ಆಗಲಿದೆ. ಈ ಹೊಸ ವಿಮಾನದೊಳಗಿನ ರೋಮಿಂಗ್ ವ್ಯವಸ್ಥೆ ಜತೆಗೆ ಜಿಯೋ ಪೋಸ್ಟ್ ಪೇಯ್ಡ್ ಪ್ಲಸ್ ಗ್ರಾಹಕರು ಪ್ರಯಾಣದ ವೇಳೆಯೂ ಸಂಪರ್ಕದ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ. ಈ ಹೊಸ ಸೇವೆಯು ನಮ್ಮ ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸಬೇಕು ಎಂಬ ಬದ್ಧತೆಯನ್ನು ತೋರುತ್ತದೆ ಎಂದಿದ್ದಾರೆ.
ಇನ್- ಫ್ಲೈಟ್ ಪ್ಯಾಕ್ಗಳು: 499, 699 ಹಾಗೂ 999 ರೂ. ಆಫರ್ಗಳಿವೆ. ಮೂರರ ವ್ಯಾಲಿಡಿಟಿ 1 ದಿನವಾಗಿರುತ್ತದೆ. ದಿನಕ್ಕೆ 100 ಎಸ್ಎಂಎಸ್ ಸಿಗುತ್ತದೆ. ಡೇಟಾ ವಿಚಾರವಾಗಿ ಕ್ರಮವಾಗಿ 250 ಎಂಬಿ, 500 ಎಂಬಿ ಹಾಗೂ 1ಜಿಬಿ ಡೇಟಾ ದೊರೆಯಲಿದೆ.
ಯಾವಾಗ ಹಾಗೂ ಹೇಗೆ ಬಳಕೆ?: