ಕರ್ನಾಟಕ

karnataka

ETV Bharat / business

ದೀಪಾವಳಿಗೆ ರಿಲಯನ್ಸ್​ ಎಲೆಕ್ಟ್ರಾನಿಕ್ಸ್​ ಮೇಲೆ ಬಿಗ್​ ಆಫರ್​: ಇಂಥ ಕೊಡುಗೆ ಮತ್ತೆಂದೂ ಸಿಗದು! - ರಿಲಯನ್ಸ್ ಡಿಜಿಟಲ್ ಫೆಸ್ಟಿವಲ್ ಎಲೆಕ್ಟ್ರಾನಿಕ್ಸ್

ರಿಲಾಯನ್ಸ್‌ ಡಿಜಿಟಲ್, ಮೈ ಜಿಯೋ ಸ್ಟೋರ್‌ ಮತ್ತು www.reliancedigital.inನಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ ಡೆಬಿಟ್ ಕಾರ್ಡ್‌, ಕ್ರೆಡಿಟ್ ಕಾರ್ಡ್‌ ಮತ್ತು ಇಎಂಐ ಮೂಲಕ ಶೇ 10ರಷ್ಟು ಕ್ಯಾಶ್‌ಬ್ಯಾಕ್‌ ಪಡೆಯಬಹುದು. ಸಿಟಿಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಮತ್ತು ಕೋಟಕ್ ಮಹೀಂದ್ರ ಬ್ಯಾಂಕ್‌ ಡೆಬಿಟ್ ಕಾರ್ಡ್‌, ಕ್ರೆಡಿಟ್‌ ಕಾರ್ಡ್​ಗಳು ಮತ್ತು ಇಎಂಐನಲ್ಲಿ 4500 ರೂ. ವರೆಗೆ ರಿಯಾಯಿತಿ ಪಡೆಯಬಹುದು.

RELIANCE DIGITAL
ರಿಲಯನ್ಸ್​

By

Published : Nov 11, 2020, 5:49 PM IST

ನವದೆಹಲಿ:ದೀಪಾವಳಿ ಹಬ್ಬದ ವೇಳೆ ರಿಲಯನ್ಸ್ ಡಿಜಿಟಲ್‌ ತನ್ನ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಮಾರಾಟದ ಮೇಲೆ ಉತ್ತಮ ಆಫರ್‌ಗಳನ್ನು ಘೋಷಿಸಿದೆ. ಎಲೆಕ್ಟ್ರಾನಿಕ್ಸ್ ಸಾಮಗ್ರಿಗಳನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ಇದು ಅನುಕೂಲವಾಗಲಿದೆ.

ರಿಲಯನ್ಸ್‌ ಡಿಜಿಟಲ್, ಮೈ ಜಿಯೋ ಸ್ಟೋರ್‌ ಮತ್ತು www.reliancedigital.inನಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ ಡೆಬಿಟ್ ಕಾರ್ಡ್‌, ಕ್ರೆಡಿಟ್ ಕಾರ್ಡ್‌ ಮತ್ತು ಇಎಂಐ ಮೂಲಕ ಶೇ 10ರಷ್ಟು ಕ್ಯಾಶ್‌ಬ್ಯಾಕ್‌ ಪಡೆಯಬಹುದು. ಸಿಟಿಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಮತ್ತು ಕೋಟಕ್ ಮಹೀಂದ್ರ ಬ್ಯಾಂಕ್‌ ಡೆಬಿಟ್ ಕಾರ್ಡ್‌, ಕ್ರೆಡಿಟ್‌ ಕಾರ್ಡ್​ಗಳು ಮತ್ತು ಇಎಂಐನಲ್ಲಿ 4,500 ರೂ. ವರೆಗೆ ರಿಯಾಯಿತಿ ಪಡೆಯಬಹುದು.

ಅಮೆರಿಕನ್‌ ಎಕ್ಸ್‌ಪ್ರೆಸ್‌ ಗ್ರಾಹಕರು ಅಮೆರಿಕನ್‌ ಎಕ್ಸ್‌ಪ್ರೆಸ್‌ ಕಾರ್ಡ್‌ಗಳ ಮೇಲೆ 2000 ರೂ. ಫ್ಲಾಟ್ ಡಿಸ್ಕೌಂಟ್ ಪಡೆಯಬಹುದು. ರಿಲಯನ್ಸ್‌ ಡಿಜಿಟಲ್‌ನಿಂದ ಹಬ್ಬದ ಕೊಡುಗೆಯಾಗಿ 1000 ರೂ. ಮೌಲ್ಯದ ವೋಚರ್‌ ಸಹ ಇವೆ. 2020ರ ನವೆಂಬರ್ 16ರ ವರೆಗೆ ದೀಪಾವಳಿ ಸೇಲ್​ ಚಾಲ್ತಿಯಲ್ಲಿರಲಿದೆ.

ವಿವಿಧ ವಿಭಾಗಗಳಲ್ಲಿ ಆಕರ್ಷಕ ಕೊಡುಗೆಗಳು ಲಭ್ಯವಿರುತ್ತದೆ. ಮೊಬೈಲ್‌ ಫೋನ್‌ಗಳ ಮೇಲೆ ಕೊಡುಗೆಗಳ ಪೈಕಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌20 40,999 ರೂ. ರಿಯಾಯತಿ ದರದಲ್ಲಿ ಲಭ್ಯವಿದ್ದು, ಎಚ್‌ಡಿಎಫ್‌ಸಿ ಬ್ಯಾಂಕ್‌ ಕ್ಯಾಶ್‌ ಬ್ಯಾಕ್‌ ಒಳಗೊಂಡಿದೆ. ಹೊಸದಾಗಿ ಬಿಡುಗಡೆಯಾದ ಐಫೋನ್‌ 12 ಮತ್ತು ಐಫೋನ್‌ 12 ಪ್ರೋ ಮೇಲೂ ಕೊಡುಗೆಗಳಿವೆ. ಗ್ರಾಹಕರು ಮಾಸಿಕ 2,796 ರೂ. ದರದಲ್ಲಿ ಶೇ 40ರಷ್ಟರವರೆಗೆ ಖಚಿತ ಬೈಬ್ಯಾಕ್‌ ಅಡಿ ಐಫೋನ್‌ 11 ಪಡೆಯಬಹುದು. ವೇರೆಬಲ್‌ ವಿಭಾಗದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ ಎಲ್‌ಟಿಇ (42 ಎಂಎಂ) ರಿಯಾಯಿತಿ ದರ 13,950 ರೂ.ನಡಿ ಎಚ್‌ಡಿಎಫ್‌ಸಿ ಕ್ಯಾಶ್‌ ಬ್ಯಾಕ್‌ ಒಳಗೊಂಡಿದೆ.

ಎಸಸ್ ಥಿನ್ ಆ್ಯಂಡ್ ಲೈಟ್‌ ಲ್ಯಾಪ್‌ಟಾಪ್‌ಗಳ ಮೇಲಿನ ಆಕರ್ಷಕ ಡೀಲ್‌ ಪಡೆಯಬಹುದು. 18,999 ರೂ. ಬೆಲೆಯಲ್ಲಿ 2 ವರ್ಷ ವಾರಂಟಿ ಹಾಗೂ 6,800 ರೂ. ಮೌಲ್ಯದ ಲಾಭಗಳನ್ನು ಒಳಗೊಂಡಿದೆ. ಡೆಲ್‌ ಇಂಟೆಲ್‌ ಕೋರ್‌ ಐ3 ಲ್ಯಾಪ್‌ಟಾಪ್‌ 37,499 ರೂ.ಯಿಂದ ಆರಂಭವಾಗುತ್ತವೆ. ಎಚ್‌ಪಿ ಎಎಂಡಿ ರೈಝೆನ್‌ 5 ಲ್ಯಾಪ್‌ಟಾಪ್‌ 41,290 ರೂ.ಯಿಂದ ಶುರುವಾಗಲಿವೆ. ಇಂಟೆಲ್ 11ನೇ ಜೆನ್‌ ಲ್ಯಾಪ್‌ಟಾಪ್‌ ಎಂಎಸ್‌ ಆಫೀಸ್‌ ಪ್ರಿ ಇನ್‌ಸ್ಟಾಲ್‌ ಆಗಿ ಲಭ್ಯವಿದ್ದು, 47,999 ರೂ.ಯಿಂದ ಆರಂಭವಾಗುತ್ತವೆ. ಎಲ್ಲ ಗೇಮಿಂಗ್ ಲ್ಯಾಪ್‌ಟಾಪ್‌ಗಳ ಮೇಲೆ ಶೇ 10ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಸ್ಯಾಮ್‌ಸಂಗ್ ಟ್ಯಾಬ್‌ ವಿತ್‌ ಎಲ್‌ಟಿಇ ದರ 11,999 ರೂ.ಯಿಂದ ಆರಂಭವಾಗಲಿದೆ.

32 ಇಂಚಿನ ಸ್ಮಾರ್ಟ್‌ ಟಿವಿ (ಹೈಸೆನ್ಸ್, ತೊಶಿಬಾ, ಒನ್‌ಪ್ಲಸ್‌ ಮತ್ತು ಟಿಸಿಎಲ್‌) 3 ವರ್ಷದ ವಾರಂಟಿ ಸಮೇತ 12,490/ ರೂ.ಯಲ್ಲಿ ಲಭ್ಯವಿರುತ್ತದೆ. ಸ್ಯಾಮ್‌ಸಂಗ್‌ 50 ಇಂಚಿನ ಕ್ಯೂಎಲ್‌ಇಡಿ ಸ್ಮಾರ್ಟ್ ಟಿವಿ 64,990 ರೂ.ಯಲ್ಲಿ 3 ವರ್ಷ ವಾರಂಟಿ ಇದೆ. ಎಲ್‌ಜಿ ಒಎಲ್‌ಇಡಿ ಟಿವಿ ಖರೀದಿಸುವ ಗ್ರಾಹಕರು 64,990 ರೂ. ಮೌಲ್ಯದ 3 ವರ್ಷ ವಾರಂಟಿ ಸಹಿತ ಪಡೆಯುತ್ತಾರೆ ಜೊತೆಗೆ 3 ತಿಂಗಳವರೆಗೆ ಉಚಿತ ನೆಟ್‌ಫ್ಲಿಕ್ಸ್‌ ಸಬ್‌ಸ್ಕ್ರಿಪ್ಷನ್‌ ಇದೆ.

ಹೋಮ್ ಅಪ್ಲೈಯನ್ಸ್‌ ಖರೀದಿಸಲು ಇಚ್ಛಿಸುವವರು 49,990 ರೂ.ಯಿಂದ ಆರಂಭವಾಗುವ ಸೈಡ್ ಬೈ ಸೈಡ್ ರೆಫ್ರಿಜರೇಟರ್‌ಗಳು, 11,990 ರೂ. ಬೆಲೆಯ ಟಾಪ್‌ ಲೋಡ್ ವಾಶಿಂಗ್‌ ಮಶಿನ್‌ ಮತ್ತು 42,990 ರೂ.ಯಿಂದ ಆರಂಭವಾಗುವ ವಾಶರ್ ಡ್ರೈಯರ್‌ ಖರೀದಿಸಬಹುದು. ಸ್ಪೇಸ್‌ಮ್ಯಾಕ್ಸ್ ಫ್ಯಾಮಿಲಿ ಹಬ್‌ ಖರೀದಿ ಮಾಡುವ ಗ್ರಾಹಕರು ಉಚಿತವಾಗಿ 43,000 ರೂ. ಮೌಲ್ಯದ ನೋಟ್‌ 10 ಲೈಟ್‌ ಪಡೆಯಬಹುದಾಗಿದೆ.

ಸುಲಭ ಹಣಕಾಸು ಮತ್ತು ಇಎಂಐ ಆಯ್ಕೆಗಳೊಂದಿಗೆ ಈ ವರ್ಷದ ಫೆಸ್ಟಿವಲ್‌ ಆಫ್‌ ಎಲೆಕ್ಟ್ರಾನಿಕ್ಸ್‌ ಅನುಭವವು ಇನ್ನಷ್ಟು ಉತ್ತಮವಾಗಿರಲಿದೆ. ರಿಲಾಯನ್ಸ್ ಡಿಜಿಟಲ್‌, ಮೈ ಜಿಯೋ ಸ್ಟೋರ್‌ಗಳಲ್ಲಿ ಮತ್ತು www.reliancedigital.inನಲ್ಲಿ ಖರೀದಿ ಮಾಡಬಹುದು. ಕೆಲವು ಷರತ್ತು, ನಿಯಮಗಳು ಅನ್ವಯಿಸುತ್ತವೆ ರಿಲಯನ್ಸ್ ಡಿಜಿಟಲ್​ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details