ನವದೆಹಲಿ:ಕಳೆದ ಕೆಲವು ವಾರಗಳಲ್ಲಿ ಸಿಮೆಂಟ್ ಮತ್ತು ಉಕ್ಕಿನ ದರದಲ್ಲಿ ಶೇ 40-50ರಷ್ಟು ಹೆಚ್ಚಾಗಿದೆ ಎಂದು ರಿಯಾಲ್ಟರ್‌ಗಳ ಅತ್ಯುನ್ನತ ಸಂಘಟನೆ ಕ್ರೆಡೈ ಶನಿವಾರ ತಿಳಿಸಿದೆ.
ಈ ವಿಷಯದಲ್ಲಿ ತಮ್ಮ ಹಸ್ತಕ್ಷೇಪ ಕೋರಿ ಕಾನ್ಫೆಡರೇಶನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (ಕ್ರೆಡೈ) ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿಗೆ ಪತ್ರ ಬರೆದಿದೆ.
ಸಿಮೆಂಟ್ ಮತ್ತು ಉಕ್ಕು ತಯಾರಕರು ತಮ್ಮ ಮಾರಾಟದ ಬೆಲೆಯಲ್ಲಿ ಹಠಾತ್ ಹೆಚ್ಚಳ ಮಾಡುವ ಮೂಲಕ ಕಾರ್ಟೆಲೈಸೇಷನ್ ಬಗ್ಗೆ ನಿಮ್ಮ ಗಮನವನ್ನು ಸೆಳೆಯಲು ನಾವು ಬಯಸುತ್ತೇವೆ ಎಂದು ಕ್ರೆಡೈ ಪತ್ರದಲ್ಲಿ ಉಲ್ಲೇಖಿಸಿದೆ.
ವಿವಿಧ ರಾಜ್ಯಗಳಲ್ಲಿ ಒಂದು ಚೀಲ ಸಿಮೆಂಟ್‌ಗೆ 100-250 ರೂ. ಮತ್ತು ಪ್ರತಿ ಟನ್ ಸ್ಟೀಲ್‌ಗೆ ಸುಮಾರು 2,000-2,500 ರೂ. ಹೆಚ್ಚಳವಾಗಿದೆ ಎಂದು ಹೇಳಿದೆ.
ಕಳೆದ ಕೆಲವು ವಾರಗಳಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಹೊರತಾಗಿಯೂ ಅಗತ್ಯ ಕಚ್ಚಾ ವಸ್ತುಗಳಾದ ಸಿಮೆಂಟ್ ಮತ್ತು ಉಕ್ಕಿನ ಬೆಲೆಯಲ್ಲಿ 40-50ರಷ್ಟು ಏರಿಕೆ ಕಂಡುಬಂದಿದೆ. ಈಗಾಗಲೇ ಕಾರ್ಮಿಕರು ಲಭ್ಯವಿರುವ ತಾಣಗಳಲ್ಲಿ ನಿರ್ಮಾಣ ಕಾರ್ಯಗಳಿಗೆ ಕೇಂದ್ರ ಅವಕಾಶ ನೀಡಿದೆ.