ನವದೆಹಲಿ :ಕೆವೈಸಿ ವಿವರಗಳು ನವೀಕರಿಸುವ ನೆಪದಲ್ಲಿ ಬ್ಯಾಂಕಿಂಗ್ ವಲಯದಲ್ಲಿ ಗ್ರಾಹಕರಿಗೆ ಆಗುತ್ತಿರುವ ಮೋಸದ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್-ಆರ್‌ಬಿಐ ಎಚ್ಚರಿಕೆ ನೀಡಿದೆ. ಗ್ರಾಹಕರಿಂದ ವೈಯಕ್ತಿಕ ವಿವರಗಳನ್ನು ಕೇಳುವ ನೆಪದಲ್ಲಿ ಆಗುತ್ತಿರುವ ವಂಚನೆಗಳ ಬಗ್ಗೆ ಬ್ಯಾಂಕಿಂಗ್ ವಲಯ ನಿಯಂತ್ರಕರಿಗೆ ಸಾಕಷ್ಟು ದೂರು ಬರುತ್ತಿವೆ ಎಂದು ಆರ್‌ಬಿಐ ಹೇಳಿದೆ. ಲಾಗಿನ್ ಐಡಿ, ಪಾಸ್‌ವರ್ಡ್ ಹಾಗೂ ಒಟಿಪಿ ಪಡೆದ ಬಳಿಕ ಅದರಿಂದ ಗ್ರಾಹಕರ ಖಾತೆಯಲ್ಲಿ ಹಣ ಪಡೆಯುತ್ತಾರೆ. ಇದರ ಬಗ್ಗೆ ಜಾಗೃತರಾಗಿರಬೇಕು ಎಂದು ಎಚ್ಚರಿಸಿದೆ.
ಬ್ಯಾಂಕುಗಳು ಮತ್ತು ಇತರ ನಿಯಂತ್ರಿತ ಸಂಸ್ಥೆಗಳು ತಮ್ಮ ಗ್ರಾಹಕರ ಕೆವೈಸಿ ವಿವರಗಳನ್ನು ಆಗಾಗ ಅಪ್‌ಡೇಟ್ ಮಾಡುವ ಅಗತ್ಯವಿದೆ. ಆದರೆ, ಇಂತಹ ಸಂದರ್ಭಗಳಲ್ಲಿ ಸಾಮಾನ್ಯ ವಿಧಾನವು ಅನಾಪೇಕ್ಷಿತ ಕರೆಗಳು, ಎಸ್‌ಎಂಎಸ್ ಅಥವಾ ಇಮೇಲ್‌ಗಳನ್ನು ಒಳಗೊಂಡಿರುತ್ತದೆ.
ಬ್ಯಾಂಕ್ ಲಾಗಿನ್ ಐಡಿ, ಪಾಸ್‌ವರ್ಡ್, ಪಿನ್ ಅಥವಾ ಒಟಿಪಿಯಂತಹ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಲು ಗ್ರಾಹಕರನ್ನು ಒತ್ತಾಯಿಸುತ್ತದೆ ಅಥವಾ ಸಂವಹನದಲ್ಲಿ ಲಿಂಕ್‌ಗಳನ್ನು ಒದಗಿಸುವ ಮೂಲಕ ಕೆಲವು ಅನಧಿಕೃತ ಅಪ್ಲಿಕೇಶನ್‌ಗಳನ್ನು ಸ್ಥಾಪಿಸಲು ಕೇಳುತ್ತಾರೆ.
ಬ್ಯಾಂಕ್‌ಗೆ ಸಂಬಂಧಿಸಿದ ವಿವರಗಳನ್ನು ಹಂಚಿಕೊಳ್ಳದಿದ್ದರೆ ನಿಮ್ಮ ಖಾತೆ ಸ್ಥಗಿತಗೊಳಿಸುವಿಕೆ ಅಥವಾ ನಿರ್ಬಂಧಿಸಲಾಗುತ್ತದೆ ಎಂದು ವಂಚಕರು ಹೇಳುತ್ತಾರೆ. ಗ್ರಾಹಕರು ಒಮ್ಮೆ ಕರೆ, ಸಂದೇಶ ಅಥವಾ ಅನಧಿಕೃತ ಮೊಬೈಲ್ ಅಪ್ಲಿಕೇಶನ್ ಮೂಲಕ ಮಾಹಿತಿ ಹಂಚಿಕೊಂಡರೆ ವಂಚಕರು ಗ್ರಾಹಕರ ಖಾತೆಯಲ್ಲಿನ ಹಣ ಪಡೆದು ವಂಚಿಸುತ್ತಾರೆ. ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ವೈಯಕ್ತಿಕ ಮಾಹಿತಿ ಬಗ್ಗೆ ಕರೆಗಳು ಬಂದಾಗ ಗ್ರಾಹಕರು ತಮ್ಮ ಬ್ಯಾಂಕ್ ಶಾಖೆ ಸಂಪರ್ಕಿಸಲು ವಿನಂತಿಸಲಾಗಿದೆ ಎಂದು ಆರ್‌ಬಿಐ ತನ್ನ ಸಲಹೆಯಲ್ಲಿ ತಿಳಿಸಿದೆ.