ETV Bharat Karnataka

ಕರ್ನಾಟಕ

karnataka

ETV Bharat / business

ಸಣ್ಣ ಉಳಿತಾಯಕ್ಕೆ ತಕ್ಕಂತೆ ಬಡ್ಡಿ ದರ ಹೊಂದಿಸಿ... ಹಣಕಾಸು ಸಚಿವಾಲಯಕ್ಕೆ ಆರ್‌ಬಿಐ ಸೂಚನೆ - ಸಣ್ಣ ಉಳಿತಾಯ ದರ

ಸಣ್ಣ ಉಳಿತಾಯ ದರ ಜೋಡಣೆ ಅಗತ್ಯತೆಗಳ ಬಗ್ಗೆ ಸಚಿವಾಲಯವು ಆಂತರಿಕ ಸಂವಹನ ನಡೆಸಿದೆ. ಬಡ್ಡಿ ದರ ಜೋಡಣೆಗೆ ಸಂಬಂಧಿಸಿದಂತೆ ಬ್ಯಾಂಕ್​ಗಳ ಪ್ರತಿಕ್ರಿಯೆಯನ್ನು ಆರ್‌ಬಿಐ ಸರ್ಕಾರಕ್ಕೆ ತಿಳಿಸಿದ್ದು, ಇದೊಂದು ಸರ್ಕಾರದ ಕರೆಯಾಗಿದೆ ಎಂದು ಮೂಲಗಳು ತಿಳಿಸಿವೆ.

RBI
ಆರ್​ಬಿಐ
author img

By

Published : Dec 27, 2019, 4:59 PM IST

ನವದೆಹಲಿ:ಡಿಸೆಂಬರ್ 31ರೊಳಗೆ ಜನವರಿ - ಮಾರ್ಚ್ ತ್ರೈಮಾಸಿಕದಲ್ಲಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಪ್ರಕಟಿಸುವ ಮುನ್ನ, ಬಡ್ಡಿ ದರಗಳನ್ನು ಮಾರುಕಟ್ಟೆ ದರಗಳೊಂದಿಗೆ ಹೊಂದಿಸುವಂತೆ ಹಣಕಾಸು ಸಚಿವಾಲಯಕ್ಕೆ ಆರ್‌ಬಿಐ ಸೂಚಿಸಿದೆ.

ಸಣ್ಣ ಉಳಿತಾಯ ದರ ಜೋಡಣೆ ಅಗತ್ಯತೆಗಳ ಬಗ್ಗೆ ಸಚಿವಾಲಯವು ಆಂತರಿಕ ಸಂವಹನ ನಡೆಸಿದೆ. ಬಡ್ಡಿ ದರ ಜೋಡಣೆಗೆ ಸಂಬಂಧಿಸಿಂದತೆ ಬ್ಯಾಂಕ್​ಗಳ ಪ್ರತಿಕ್ರಿಯೆಯನ್ನು ಆರ್‌ಬಿಐ ಸರ್ಕಾರಕ್ಕೆ ತಿಳಿಸಿದ್ದು, ಇದೊಂದು ಸರ್ಕಾರದ ಕರೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿ ತ್ರೈಮಾಸಿಕದಲ್ಲಿ ಸಣ್ಣ ಉಳಿತಾಯ ದರಗಳನ್ನು ಪರಿಷ್ಕರಿಸಲಾಗುತ್ತದೆ. ದರಗಳಲ್ಲಿ ಯಾವುದೇ ಬದಲಾವಣೆಗಳು ಇಲ್ಲದಿದ್ದರೆ ಹಣಕಾಸು ಸಚಿವಾಲಯವು ಅಸ್ತಿತ್ವದಲ್ಲಿರುವ ದರಗಳನ್ನು ಉಳಿಸಿಕೊಳ್ಳುತ್ತದೆ. ಬ್ಯಾಂಕ್​ಗಳು, ಕೈಗಾರಿಕೆಗಳು ಮತ್ತು ಸಣ್ಣ ಉಳಿತಾಯ ಯೋಜನೆಗಳು, ನಿವೃತ್ತ ಸರ್ಕಾರಿ ನೌಕರರು, ಮಧ್ಯಮ ವರ್ಗ, ರೈತರು, ಮಹಿಳೆಯರ ಸಣ್ಣ ಉಳಿತಾಯ ದರಗಳತ್ತ ಗಮನ ಹರಿಸುವಂತೆ ಸಲಹೆ ನೀಡಿದೆ.

ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳು (ಪಿಎಸ್‌ಬಿ) ಸಂಪೂರ್ಣ ಬಡ್ಡಿದರ ಕಡಿತವನ್ನು (ರೆಪೊ ದರ ಕಡಿತ) ಚಿಲ್ಲರೆ ಸಾಲಗಳಿಗೆ ರವಾನಿಸಲು ಸಚಿವಾಲಯವು ಆರ್‌ಬಿಐಗೆ ಒತ್ತಾಯಿಸುತ್ತಿದೆ. 'ಸಾಲದ ದರಗಳಿಗೆ ಸಂಬಂಧಿಸಿರುವ ಠೇವಣಿ ದರವನ್ನು ಕಡಿತಗೊಳಿಸಲು ಬ್ಯಾಂಕ್​ಗಳು ಮಿತಿ ಮೀರಿ ವರ್ತಿಸಲು ಸಾಧ್ಯವಿಲ್ಲ' ಎಂದು ಇತ್ತೀಚೆಗೆ ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಹೇಳಿದ್ದಾರೆ.

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು ವಾಣಿಜ್ಯ ಬ್ಯಾಂಕ್​ಗಳಿಂದ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ದರಗಳಿಗಿಂತ ಸರಾಸರಿ 100 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿವೆ ಎಂದು ಮೂಲಗಳು ತಿಳಿಸಿವೆ. ಸಣ್ಣ ಉಳಿತಾಯದ ಮೇಲಿನ ಆಡಳಿತಾತ್ಮಕ ಬಡ್ಡಿದರಗಳನ್ನು ತರುವ ಮೂಲಕ ಅವುಗಳನ್ನು ವಿತ್ತೀಯ ನೀತಿ ಪ್ರಸರಣಕ್ಕೆ ಸಹಕಾರಿ ಆಗುವಂತಿರಬೇಕು.

ABOUT THE AUTHOR

...view details