ಮುಂಬೈ: ಅಕ್ಟೋಬರ್ ಮಾಸಿಕದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಾಟ್ ಮಾರುಕಟ್ಟೆಯಿಂದ 15.64 ಬಿಲಿಯನ್ ಡಾಲರ್ ಖರೀದಿಸಿ, ಅಮೆರಿಕ ಕರೆನ್ಸಿಯ ನಿವ್ವಳ ಖರೀದಿದಾರನಾಗಿ ಉಳಿದುಕೊಂಡಿದೆ.
ಅಕ್ಟೋಬರ್ ತಿಂಗಳಲ್ಲಿ ಆರ್‌ಬಿಐ ಯಾವುದೇ ಅಮೆರಿಕನ್ ಕರೆನ್ಸಿಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿಲ್ಲ ಎಂಬುದು ಆರ್‌ಬಿಐ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಿದ ಮಾಸಿಕ ಬುಲೆಟಿನ್ನಿಂದ ತಿಳಿದುಬಂದಿದೆ.
2019ರ ಅಕ್ಟೋಬರ್ನಲ್ಲಿ ಆರ್‌ಬಿಐ ನಿವ್ವಳವಾಗಿ 7.102 ಬಿಲಿಯನ್ ಡಾಲರ್ ಖರೀದಿಸಿತ್ತು. 7.302 ಬಿಲಿಯನ್ ಡಾಲರ್ ಖರೀದಿಸಿ 200 ಮಿಲಿಯನ್ ಡಾಲರ್ ಅನ್ನು ಸ್ಪಾಟ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಿತ್ತು.