ಮುಂಬೈ:ಸ್ಪಾಟ್ ಮಾರುಕಟ್ಟೆಯಿಂದ 10.261 ಬಿಲಿಯನ್ ಮೌಲ್ಯದ ಡಾಲರ್ ಖರೀದಿಸಿದ ನಂತರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನವೆಂಬರ್ನಲ್ಲಿ ಅಮೆರಿಕ ಕರೆನ್ಸಿಯ ನಿವ್ವಳ ಖರೀದಿದಾರನಾಗಿ ಮುಂದುವರೆದಿದೆ.
ವರದಿಯಾದ ತಿಂಗಳಲ್ಲಿ ಕೇಂದ್ರೀಯ ಬ್ಯಾಂಕ್ 14.289 ಬಿಲಿಯನ್ ಡಾಲರ್ ಖರೀದಿಸಿದೆ. 4.028 ಬಿಲಿಯನ್ ಡಾಲರ್ಗಳನ್ನು ಮಾರಾಟ ಮಾಡಿದೆ ಎಂದು ಆರ್‌ಬಿಐ ಜನವರಿಯಲ್ಲಿ ಬಿಡುಗಡೆ ಮಾಡಿದ ಮಾಸಿಕ ಬುಲೆಟಿನ್ನಲ್ಲಿ ತಿಳಿಸಿದೆ.
ಈ ವರ್ಷದ ಅಕ್ಟೋಬರ್‌ನಲ್ಲಿ ಆರ್‌ಬಿಐ ಸ್ಪಾಟ್ ಮಾರುಕಟ್ಟೆಯಿಂದ 15.64 ಬಿಲಿಯನ್ ಡಾಲರ್ ಖರೀದಿಸಿದ್ದರೂ ಅದು ಯುಎಸ್ ಕರೆನ್ಸಿಯನ್ನು ಮಾರಾಟ ಮಾಡಲಿಲ್ಲ. 2019ರ ನವೆಂಬರ್ನಲ್ಲಿ ಆರ್‌ಬಿಐ 7.458 ಬಿಲಿಯನ್ ಯುಎಸ್ ಡಾಲರ್ ಖರೀದಿಸಿತು. ಸ್ಪಾಟ್ ಮಾರುಕಟ್ಟೆಯಲ್ಲಿ 530 ಮಿಲಿಯನ್ ಡಾಲರ್ ಮಾರಾಟ ಮಾಡಿತು.