ಮುಂಬೈ:ಭಾರತೀಯ ಷೇರು ಮಾರುಕಟ್ಟೆಗಳು ಶುಕ್ರವಾರ ಏರಿಕೆಯೊಂದಿಗೆ ದಿನ ಆರಂಭಿಸಿದರೂ ಕೊನೆಗೆ ಇಳಿಕೆಯೊಂದಿಗೆ ಮುಕ್ತಾಯಗೊಂಡವು. ಆರ್ಬಿಐ ಗವರ್ನರ್ ಇಂದು ರೆಪೊ ದರ ಕಡಿತ ಸೇರಿದಂತೆ ಇನ್ನೂ ಕೆಲ ಆರ್ಥಿಕ ಉತ್ತೇಜನ ಕ್ರಮಗಳನ್ನು ಘೋಷಿಸಿದರೂ ಅದರಿಂದ ಷೇರು ಮಾರುಕಟ್ಟೆಗಳು ಚೇತರಿಸಿಕೊಳ್ಳಲಿಲ್ಲ.
ಷೇರು ಮಾರುಕಟ್ಟೆಗೆ ಖುಷಿ ತರದ ರೆಪೊ ದರ ಕಡಿತ
ಕೊರೊನಾ ವೈರಸ್ ಲಾಕ್ಡೌನ್ನಿಂದಾದ ಹಣಕಾಸು ಬಿಕ್ಕಟ್ಟು ಶಮನಕ್ಕೆ ಆರ್ಬಿಐ ಇಂದು ಹಲವಾರು ಕ್ರಮಗಳನ್ನು ಘೋಷಿಸಿದರೂ ಅದರಿಂದ ಷೇರು ಮಾರುಕಟ್ಟೆಗಳಿಗೆ ಉತ್ತೇಜನ ದೊರಕಲಿಲ್ಲ. ಏರಿಕೆಯೊಂದಿಗೆ ಆರಂಭವಾದ ಷೇರು ಮಾರುಕಟ್ಟೆ ಇಳಿಕೆಯೊಂದಿಗೆ ಮುಕ್ತಾಯವಾಯಿತು.
RBI rate cut fails to cheer market
ಬಿಎಸ್ಇ ಸೆನ್ಸೆಕ್ಸ್ 131.18 ಅಂಕ ಕಳೆದುಕೊಂಡು 29815.59 ರಲ್ಲಿ ಹಾಗೂ ಎನ್ಎಸ್ಇ ನಿಫ್ಟಿ ಕೇವಲ 18.80 ಅಂಕ ಗಳಿಸಿ 8660.25 ರಲ್ಲಿ ಕೊನೆಗೊಂಡವು.
ಶೇ.9 ಕುಸಿತದೊಂದಿಗೆ ಬಜಾಜ್ ಫೈನಾನ್ಸ್ ಇಂದು ಅತಿ ಹೆಚ್ಚು ನಷ್ಟ ಅನುಭವಿಸಿತು. ಹೀರೊ ಮೊಟೊಕಾರ್ಪ್, ಇಂಡಸ್ ಇಂಡ್ ಬ್ಯಾಂಕ್, ಭಾರ್ತಿ ಏರಟೆಲ್, ಮಾರುತಿ, ಎಚ್ಸಿಎಲ್ ಟೆಕ್, ಎಚ್ಯುಎಲ್, ಟಾಟಾ ಸ್ಟೀಲ್, ಅಲ್ಟ್ರಾ ಸಿಮೆಂಟ್ಗಳು ಸಹ ಗಣನೀಯ ಕುಸಿತ ಕಂಡವು.