ನವದೆಹಲಿ: ಆರ್‌ಬಿಐ ತಮಗೆ ಶೆಡ್ಯೂಲ್ಡ್ ಬ್ಯಾಂಕ್ ಸ್ಟೇಟಸ್ ನೀಡಿದೆ ಎಂದು ಡಿಜಿಟಲ್ ಪೇಮೆಂಟ್ ಪ್ಲಾಟ್ ಫಾರ್ಮ್ ಸಂಸ್ಥೆ ಪೇಟಿಎಂ ತಿಳಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ-1934ರ ಎರಡನೇ ವೇಳಾಪಟ್ಟಿಯಲ್ಲಿ ಪೇಟಿಎಂ ಅನ್ನು ಸೇರಿಸಲಾಗಿದೆ. ಈ ಅನುಮತಿಯಿಂದ ಪೇಟಿಎಂ ಮತ್ತಷ್ಟು ಹಣಕಾಸು ಸೇವೆಗಳು ನೀಡಲು ಸಹಾಯ ಮಾಡುತ್ತದೆ ಎಂದು ಹೇಳಿದೆ.
ಶೆಡ್ಯೂಲ್ಡ್ ಬ್ಯಾಂಕ್ ಸ್ಟೇಟಸ್‌ನಿಂದ ಪ್ರಾಥಮಿಕ ಹರಾಜುಗಳು, ಸ್ಥಿರ ದರಗಳು, ಸರ್ಕಾರ ಹಾಗೂ ಇತರ ದೊಡ್ಡ ನಿಗಮಗಳಲ್ಲಿ ಭಾಗವಹಿಸುವಿಕೆ ಸೇರಿದಂತೆ ಹೊಸ ವ್ಯಾಪಾರ ಅವಕಾಶಗಳನ್ನು ಪೇಟಿಎಂ ಬ್ಯಾಂಕ್ ಅನ್ವೇಷಿಸಬಹುದಾಗಿದೆ. ಇದರ ಜೊತೆಗೆ ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿಯಲ್ಲಿ ಭಾಗವಹಿಸಬಹುದಾಗಿದ್ದು, ಸರ್ಕಾರ ನಡೆಸುವ ಹಣಕಾಸು ಸೇರ್ಪಡೆ ಯೋಜನೆಗಳಲ್ಲಿ ಪಾಲುದಾರರಾಗಲು ಅರ್ಹವಾಗಿರುತ್ತದೆ.
ನಾವು ಡಿಜಿಟಲ್ ಬ್ಯಾಂಕಿಂಗ್ ಸೇವೆಗಳ ತ್ವರಿತ ಅಳವಡಿಕೆಗೆ ಸಾಕ್ಷಿಯಾಗಿದ್ದೇವೆ. ಬಳಕೆದಾರರು ಭಾರತದಲ್ಲಿ ಬ್ಯಾಂಕಿಂಗ್‌ನ ಹೊಸ ಯುಗವನ್ನು ಶ್ಲಾಘಿಸುತ್ತಿದ್ದಾರೆ.