ಮುಂಬೈ :ಭಾರತೀಯ ರಿಸರ್ವ್ ಬ್ಯಾಂಕ್ (RBI) ಡಿಜಿಟಲ್ ಕರೆನ್ಸಿ ತರುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದೆ. ಈ ವರ್ಷದ ಅಂತ್ಯದ ವೇಳೆಗೆ ಡಿಜಿಟಲ್ ಕರೆನ್ಸಿ ಕಾರ್ಯಾಚರಣೆಗಳ ಮಾದರಿ ಅನಾವರಣಗೊಳಿಸಬಹುದು ಎಂದು ಆರ್‌ಬಿಐ ಉಪ ಗವರ್ನರ್ ಟಿ ರವಿಶಂಕರ್ ಹೇಳಿದ್ದಾರೆ. ಅವರು ದ್ವೈಮಾಸಿಕ ನೀತಿ ಪರಿಶೀಲನಾ ನಿರ್ಧಾರಗಳ ಅನಾವರಣದ ಸಮಯದಲ್ಲಿ ಈ ವಿಷಯ ಬಹಿರಂಗಪಡಿಸಿದರು.
ಡಿಸೆಂಬರ್‌ಗೆ ದೇಶದಲ್ಲಿ ಡಿಜಿಟಲ್ ಕರೆನ್ಸಿ ನಿರೀಕ್ಷೆ : ಆರ್‌ಬಿಐ ಉಪ ಗವರ್ನರ್ ಟಿ.ರವಿಶಂಕರ್ - ಡಿಜಿಟಲ್ ಕರೆನ್ಸಿ
ಆರ್ಥಿಕತೆಯ ಚೇತರಿಕೆಗಾಗಿ ಪ್ರಮುಖ ದರಗಳನ್ನು ದಾಖಲೆಯ ಕನಿಷ್ಠ ಮಟ್ಟದಲ್ಲೇ ಇರಿಸಲು ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) ಸರ್ವಾನುಮತದಿಂದ ನಿರ್ಧಾರ ಕೈಗೊಂಡಿದೆ. ಕೋವಿಡ್ ಪರಿಣಾಮದ ಪ್ರಭಾವವನ್ನು ತಗ್ಗಿಸಲು ಆರ್‌ಬಿಐ ಈವರೆಗೆ 100ಕ್ಕೂ ಹೆಚ್ಚು ಕ್ರಮಗಳನ್ನು ತೆಗೆದುಕೊಂಡಿದೆ..
ಡಿಸೆಂಬರ್‌ಗೆ ದೇಶದಲ್ಲಿ ಡಿಜಿಟಲ್ ಕರೆನ್ಸಿ ನಿರೀಕ್ಷೆ: ಆರ್‌ಬಿಐ ಉಪ ಗವರ್ನರ್ ಟಿ.ರವಿಶಂಕರ್
ಆರ್ಥಿಕತೆಯ ಚೇತರಿಕೆಗಾಗಿ ಪ್ರಮುಖ ದರಗಳನ್ನು ದಾಖಲೆಯ ಕನಿಷ್ಠ ಮಟ್ಟದಲ್ಲೇ ಇರಿಸಲು ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) ಸರ್ವಾನುಮತದಿಂದ ನಿರ್ಧಾರ ಕೈಗೊಂಡಿದೆ. ಕೋವಿಡ್ ಪರಿಣಾಮದ ಪ್ರಭಾವವನ್ನು ತಗ್ಗಿಸಲು ಆರ್‌ಬಿಐ ಈವರೆಗೆ 100ಕ್ಕೂ ಹೆಚ್ಚು ಕ್ರಮಗಳನ್ನು ತೆಗೆದುಕೊಂಡಿದೆ.