ಕರ್ನಾಟಕ

karnataka

By

Published : Jan 29, 2021, 2:24 PM IST

ETV Bharat / business

ಪೆಟ್ರೋಲ್, ಡೀಸೆಲ್​ ಮೇಲಿನ ವ್ಯಾಟ್ ಕಡಿತ: ದರ ತಗ್ಗಿಸುವಂತೆ ಕೇಂದ್ರಕ್ಕೂ ಗೆಹ್ಲೋಟ್​ ತಾಕೀತು

ರಾಜಸ್ಥಾನದ ಜನರಿಗೆ ಪರಿಹಾರ ಒದಗಿಸಲು ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಶೇ 2ರಷ್ಟು ಕಡಿತಗೊಳಿಸಿದೆ. ಸಾಮಾನ್ಯ ಜನರ ಮೇಲೆ ಆರ್ಥಿಕ ಹೊರೆ ಕಡಿಮೆಯಾಗುವಂತೆ ಕೇಂದ್ರ ಸರ್ಕಾರವು ಕಡಿತ ಘೋಷಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.

diesel
diesel

ಜೈಪುರ್ (ರಾಜಸ್ಥಾನ):ರಾಜಸ್ಥಾನ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಅನ್ನು ಶೇ 2ರಷ್ಟು ಕಡಿಮೆಗೊಳಿಸಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.

ರಾಜಸ್ಥಾನದ ಜನರಿಗೆ ಪರಿಹಾರ ಒದಗಿಸಲು ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಶೇ 2ರಷ್ಟು ಕಡಿತಗೊಳಿಸಿದೆ. ಸಾಮಾನ್ಯ ಜನರ ಮೇಲೆ ಆರ್ಥಿಕ ಹೊರೆ ಕಡಿಮೆಯಾಗುವಂತೆ ಕೇಂದ್ರ ಸರ್ಕಾರವು ಕಡಿತ ಘೋಷಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.

ಕಳೆದ ಮೂರು ದಿನಗಳಿಂದ ಜೈಪುರದಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 93.94 ರೂ. ಮತ್ತು ಡೀಸೆಲ್ 86.02 ರೂ.ಗೆ ಮಾರಾಟ ಆಗುತ್ತಿದೆ.

ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಎನ್ನುವುದು ಉತ್ಪಾದನೆಯಿಂದ ಮಾರಾಟದ ಹಂತದವರೆಗೆ ಪೂರೈಕೆ ಸರಪಳಿಯ ಪ್ರತಿಯೊಂದು ಹಂತದಲ್ಲೂ ಮೌಲ್ಯ ಸೇರಿಕೆಯೊಂದಿಗೆ ಉತ್ಪನ್ನದ ಮೇಲೆ ವಿಧಿಸುವ ಪರೋಕ್ಷ ತೆರಿಗೆಯಾಗಿದೆ. ವ್ಯಾಟ್ ದರಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ.

ಇದನ್ನೂ ಓದಿ: ಬಡವರು ಹಸಿವಿನಿಂದ ಬಳಲದಂತೆ ದೊಡ್ಡ ಆರ್ಥಿಕ ಪ್ಯಾಕೇಜ್ ನೀಡಲಾಗಿದೆ: ರಾಷ್ಟ್ರಪತಿ

ABOUT THE AUTHOR

...view details