ಕರ್ನಾಟಕ

karnataka

ETV Bharat / business

ಆರ್ಟಿಕಲ್​ 370 ವಿಧಿವಶದ ಬಳಿಕ ಕಾಶ್ಮೀರದಲ್ಲಿ ಸೈಟ್​ ಬೆಲೆ ಎಷ್ಟಾಗಿದೆ ಗೊತ್ತೆ? - ಆರ್ಟಿಕಲ್​ 370

ಆರ್ಟಿಕಲ್ 370 ಮತ್ತು ಆರ್ಟಿಕಲ್ 35 (ಎ) ಹಿಂತೆಗೆದುಕೊಳ್ಳುವ ಮೊದಲು ಜಮ್ಮು ಮತ್ತು ಕಾಶ್ಮೀರದಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆ ಸಪ್ಪೆಯಾಗಿತ್ತು. ಈ ರದ್ದತಿ ಭವಿಷ್ಯದಲ್ಲಿ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದು ಇಲ್ಲಿನವರಿಗೆ ಸಾಕಷ್ಟು ನಿರೀಕ್ಷೆ ಇದೆ ಎಂದು ರಿಯಲ್​ ಎಸ್ಟೇಟ್​ ಉದ್ಯಮ ವಲಯದವರು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Aug 13, 2019, 8:26 AM IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ 370 ವಿಧಿ ಹಿಂತೆಗೆದುಕೊಂಡ ಬಳಿಕ ಇಲ್ಲಿನ ಸ್ಥಿರ ಆಸ್ತಿಯ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಪ್ರಸ್ತುತ ಶ್ರೀನಗರದಲ್ಲಿ ಪ್ರತಿ ಚದರ ಅಡಿಗೆ 2,200ಯಿಂದ 4,000 ರೂ. ದರದಲ್ಲಿ ಮಾರಾಟ ಆಗುತ್ತಿದೆ. ಭದ್ರತಾ ಕಾಳಜಿಯ ದೃಷ್ಟಿಯಿಂದ ಪ್ರಸ್ತುತ ದರ ಯಥಾವತ್ತಾಗಿ ಉಳಿದರೂ ಮುಂದಿನ ದಿನಗಳಲ್ಲಿ ಏರಿಕೆ ಆಗಲಿದೆ ಎಂಬ ಆಶಾಭಾವನೆ ಇಲ್ಲಿನ ರಿಯಲ್ ಎಸ್ಟೇಟ್​ ಉದ್ಯಮಿಗಳು ಹೊಂದಿದ್ದಾರೆ.

ಆರ್ಟಿಕಲ್ 370 ಮತ್ತು ಆರ್ಟಿಕಲ್ 35 (ಎ) ಹಿಂತೆಗೆದುಕೊಳ್ಳುವ ಮೊದಲು ಜಮ್ಮು ಮತ್ತು ಕಾಶ್ಮೀರದಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆ ಸಪ್ಪೆಯಾಗಿತ್ತು. ಈ ರದ್ದತಿ ಭವಿಷ್ಯದಲ್ಲಿ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದು ಇಲ್ಲಿನವರಿಗೆ ಸಾಕಷ್ಟು ನಿರೀಕ್ಷೆ ಇದೆ ಎಂದು ರಿಯಲ್​ ಎಸ್ಟೇಟ್​ ಉದ್ಯಮಿ ಹೇಳಿದ್ದಾರೆ.

ದೇಶದಲ್ಲಿನ ಟೈರ್​-2 ನಗರಿಗಳಿಗೆ ಹೋಲಿಸಿದರೆ ಶ್ರೀನಗರದಲ್ಲಿ ಆಸ್ತಿಯ ಬೆಲೆ ತೀರ ಕಡಿಮೆ ಆಗಿದೆ. ಇಲ್ಲಿ ಪ್ರತಿ ಚದರ ಅಡಿ ₹ 2,200ರಿಂದ ₹4,000 ನಡುವೆ ಮಾರಾಟ ಆಗುತ್ತಿದೆ. ಕಾಶ್ಮೀರದ ಹೊರಗಿನವರಿಗೆ ಇಲ್ಲಿನ ಸ್ಥಿರ ಆಸ್ತಿಯ ಮೇಲೆ ಹೂಡಿಕೆ ಮಾಡಲು ಅವಕಾಶ ಸಿಗುವುದರಿಂದ ಬೆಲೆಯಲ್ಲಿ ಸಹಜವಾಗಿ ಏರಿಕೆ ಆಗಲಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details