ನವದೆಹಲಿ: ನೂರರ ಗಡಿ ದಾಟಿದ ಈರುಳ್ಳಿ ಬೆಲೆ ಏರಿಕೆ ಬಳಿಕ ಈಗ ಮತ್ತೊಂದು ಆಹಾರ ಪದಾರ್ಥ ದರದಲ್ಲಿ ಹೆಚ್ಚಳವಾಗಿದೆ.
ಈರುಳ್ಳಿ ಆಯ್ತು ಈಗ ಬೇಳೆಗಳ ಬೆಲೆ ಭಾರಿ ಏರಿಕೆ... ಗ್ರಾಹಕರಿಗೆ ಬಿಗ್ ಶಾಕ್..! - ನಗರಗಳಲ್ಲಿ ಬೇಳೆಗಳ ದರ ಏರಿಕೆ
ಇತ್ತೀಚೆಗೆ ವಿಪರೀತವಾಗಿ ಸುರಿದ ಮಳೆಯಿಂದ ತರಕಾರಿ ಮತ್ತು ಧಾನ್ಯಗಳನ್ನು ಬೆಳೆಯುವ ರಾಜ್ಯಗಳಲ್ಲಿ ಇಳುವರಿಯ ಪ್ರಮಾಣ ಕುಸಿದ ಪರಿಣಾಮ ಮಾರುಕಟ್ಟೆ ದರದಲ್ಲಿ ಹೆಚ್ಚಳವಾಗಿದೆ. ಕಳೆದ 15 ದಿನಗಳ ಅವಧಿಯಲ್ಲಿ ಬೇಳೆ ಕಾಳುಗಳ ಬೆಲೆಯಲ್ಲಿ ತೀವ್ರ ಏರಿಕೆಯಾಗಿದೆ.
ಮಾರುಕಟ್ಟೆ
ಉದ್ದಿನ ಬೇಳೆ ದರ ಶೇ. 40ರಷ್ಟು ಹೆಚ್ಚಳವಾಗಿದೆ. ಇದರ ಜೊತೆಗೆ ತೊಗರಿ ಬೇಳೆ ದರವೂ ಶೇ. 12ರಷ್ಟು, ಕಾಬೂಲ್ ಕಡಲೆ ದರ ಶೇ. 8ರಷ್ಟು ಏರಿಕೆ ದಾಖಲಿಸಿದೆ. ಭಾರಿ ಮಳೆಯಿಂದಾಗಿ ವ್ಯಾಪಕ ಪ್ರಮಾಣದ ಬೆಳೆ ಹಾಳಾಗಿರುವುದೇ ಬೇಳೆ ಕಾಳು ದರದಲ್ಲಿ ಹೆಚ್ಚಳಕ್ಕೆ ಕಾರಣ ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.