ನವದೆಹಲಿ :ಜಾಗತಿಕ ತೈಲ ಮಾರುಕಟ್ಟೆ ಬೆಲೆಗಳಲ್ಲಿ ನಿಯಮಿತವಾಗಿ ವ್ಯತ್ಯಾಸವಾಗುತ್ತಿದ್ದರೂ ದೇಶದಲ್ಲಿ ಇಂಧನ ಬೆಲೆಗಳು 17 ದಿನಗಳಿಂದ ಸ್ಥಿರವಾಗಿವೆ.
ಬುಧವಾರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 91.17 ರೂ. ಮತ್ತು ಡೀಸೆಲ್ 81.47 ರೂ.ಯಲ್ಲಿ ಮಾರಾಟ ಆಗುತ್ತಿವೆ. ಕಳೆದ 17 ದಿನಗಳಿಂದ ದರದಲ್ಲಿ ಯಾವುದೇ ಪರಿಷ್ಕರಣೆ ಆಗದೆ ಯಥಾವತ್ತಾಗಿವೆ.
ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬದಲಾಗದೆ ಉಳಿದಿದೆ. ಆದರೆ, ಈ ಸ್ಥಗಿತವು ದೇಶದ ಹಲವು ಭಾಗಗಳಲ್ಲಿ ಪ್ರತಿ ಲೀಟರ್‌ಗೆ 100 ರೂ. (ಪೆಟ್ರೋಲ್) ಗಡಿ ದಾಟಿದ ಬೆಲೆ ತಗ್ಗಿಸಲು ನೆರವಾಗಿಲ್ಲ.
ಇದನ್ನೂ ಓದಿ: ಬನಾರಸ್ ಹಿಂದೂ ವಿವಿಗೆ ನೀತಾ ಅಂಬಾನಿ ಸಂದರ್ಶನ ಪ್ರಾಧ್ಯಾಪಕಿಯೇ?.. ರಿಲಯನ್ಸ್ ಸ್ಪಷ್ಟನೆ ಹೀಗಿದೆ..
ಫೆಬ್ರವರಿ 6ರಿಂದಲೂ ಕಚ್ಚಾ ಬ್ಯಾರೆಲ್‌ಗೆ 7 ಡಾಲರ್ಗಿಂತ ಹೆಚ್ಚಾಗಿತ್ತು. ಅದು 14 ಬಾರಿ ಇಂಧನ ಬೆಲೆ ಹೆಚ್ಚಿಸಲು ಒಎಂಸಿಗಳನ್ನು ತಳ್ಳಿತ್ತು. ಆಗಿನಿಂದ ದೆಹಲಿಯಲ್ಲಿ ಪೆಟ್ರೋಲ್ ಮೇಲೆ ಪ್ರತಿ ಲೀಟರ್‌ಗೆ 4.22 ರೂ. ಮತ್ತು ಡೀಸೆಲ್‌ಗೆ 4.34 ರೂ.ಯಷ್ಟು ಹೆಚ್ಚಳವಾಗಿದೆ. ಈಗ ಕಚ್ಚಾ ತೈಲ ಬ್ಯಾರೆಲ್‌ಗೆ 69 ಡಾಲರ್ನಷ್ಟಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು 2021ರಲ್ಲಿ 26ಪಟ್ಟು ಹೆಚ್ಚಾಗಿದೆ. ಎರಡೂ ಆಟೋ ಇಂಧನಗಳು ಈ ವರ್ಷ ಈವರೆಗೆ ಕ್ರಮವಾಗಿ 7.46 ಮತ್ತು 7.60 ರೂ.ಯಷ್ಟು ಏರಿಕೆಯಾಗಿವೆ.