ನವದೆಹಲಿ:ಟೊಯೋಟಾ ಇಂಡಿಯಾ ತನ್ನ ಬಹು ನಿರೀಕ್ಷೆಯ ಟೊಯೋಟಾ ಅರ್ಬನ್ ಕ್ರೂಸರ್ ಎಸ್‌ಯುವಿ ಬುಕಿಂಗ್ ಪ್ರಾರಂಭಿಸಿದೆ.
ಹೊಚ್ಚಹೊಸ ಟೊಯೋಟಾ ಅರ್ಬನ್ ಕ್ರೂಸರ್ನ ಬುಕ್ಕಿಂಗ್ 2020ರ ಆಗಸ್ಟ್ 22ರಿಂದ ಆರಂಭಿಸುವುದಾಗಿ ಕಂಪನಿಯು ತಿಳಿಸಿದೆ. ಕಾರು ಖರೀದಿ ಆಸಕ್ತಿ ಹೊಂದಿರುವ ಸಂಭಾವ್ಯ ಗ್ರಾಹಕರು ಯಾವುದೇ ಅಧಿಕೃತ ಮಾರಾಟಗಾರರು ಹಾಗೂ ಟೊಯೋಟಾ ಇಂಡಿಯಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ 11,000 ರೂ. ಮುಂಗಡ ಪಾವತಿಸಿ ಪೂರ್ವ ಬುಕಿಂಗ್ ಮಾಡಬಹುದು.
ನೀಲಿ, ಕಂದು, ಬಿಳಿ, ಕಿತ್ತಳೆ, ಬೆಳ್ಳಿ, ಬೂದು, ನೀಲಿ/ ಕಪ್ಪು, ಕಂದು / ಕಪ್ಪು ಮತ್ತು ಕಿತ್ತಳೆ / ಬಿಳಿ ಬಣ್ಣಗಳಲ್ಲಿ ಎಸ್‌ಯುವಿ ಪೂರ್ವ ಬುಕಿಂಗ್‌ಗೆ ಲಭ್ಯವಿದೆ.
ಟೊಯೋಟಾ ಅರ್ಬನ್ ಕ್ರೂಸರ್ ಪ್ರತಿಸ್ಪರ್ಧಿ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಪೈಪೋಟಿ ನೀಡಲಿದೆ ಎಂದು ಹೇಳಲಾಗುತ್ತಿದೆ. ಎರಡೂ ಕಾರುಗಳು ಸಾಮಾನ್ಯ ವಿನ್ಯಾಸ ಒಂದೇ ತೆರನಾಗಿ ಹೋಲುತ್ತವೆ. ತಂತ್ರಜ್ಞಾನ ಹಾಗೂ ವಿನ್ಯಾಸದಲ್ಲಿ ಭಿನ್ನವಾಗಿವೆ.
ಟೊಯೋಟಾ ಅರ್ಬನ್ ಕ್ರೂಸರ್ ಎರಡು-ಸ್ಲ್ಯಾಟ್ ಬೆಣೆ ವೆಡ್ಜ್ ಗ್ರಿಲ್, ಟ್ರೆಪೆಜಾಯಿಡಲ್ ಬೋಲ್ಡ್ ಫಾಗ್ ಏರಿಯಾ, ಡ್ಯುಯಲ್ ಫಂಕ್ಷನ್ನ ಡ್ಯುಯಲ್ ಎಲ್ಇಡಿ ಪ್ರೊಜೆಕ್ಟರ್ ಹೆಡ್ಲ್ಯಾಂಪ್ ಜೊತೆಗೆ ಎಲ್ಇಡಿ ಡಿಆರ್ಎಲ್-ಕಮ್-ಇಂಡಿಕೇಟರ್, ಎಲ್ಇಡಿ ಫಾಗ್ ಲ್ಯಾಂಪ್, 16 ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್ಸ್, ಸ್ಟೈಲಿಶ್ ಸ್ಪ್ಲಿಟ್ ಎಲ್ಇಡಿ ಟೈಲಾಂಪ್ಸ್, ಎಲ್ಇಡಿ ಸ್ಟಾಪ್ ಲ್ಯಾಂಪ್ ಸೇರಿದಂತೆ ಇತರೆ ಫೀಚರ್ಗಳನ್ನು ಹೊಂದಿದೆ.
ಟೊಯೋಟಾ ಅರ್ಬನ್ ಕ್ರೂಸರ್ ಅನ್ನು 3 ವರ್ಷ / 1 ಲಕ್ಷ ಕಿ.ಮೀ ಉತ್ತಮ ಖಾತರಿ ಮತ್ತು ಇಎಂ 60ನ ಎಕ್ಸ್‌ಪ್ರೆಸ್ ಸೇವೆ, ವಾರೆಂಟಿ ವಿಸ್ತರಣೆ ಮತ್ತು ವಾಟ್ಸಾಪ್ ಸಂವಹನದಂತಹ ಸೇವೆಗಳನ್ನು ನೀಡಲಿದೆ.
ಕಾರಿನ ಒಳಾಂಗಣವು ಡ್ಯುಯಲ್-ಟೋನ್ ಡಾರ್ಕ್ ಬ್ರೌನ್ ಪ್ರೀಮಿಯಂ ಹೊಂದಿದೆ. ಸ್ಮಾರ್ಟ್ ಪ್ಲೇಕಾಸ್ಟ್ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ವ್ಯವಸ್ಥೆ ಸಹ ಇದೆ. ಇದನ್ನು ಆಂಡ್ರಾಯ್ಡ್ ಮತ್ತು ಆ್ಯಪಲ್ ಎರಡೂ ಸಾಧನಗಳಿಗೆ ಸಂಪರ್ಕಿಸಬಹುದು. ಇದರಿಂದಾಗಿ ಸ್ಮಾರ್ಟ್ ಫೋನ್ ಸಂಭಾಷಣೆ ಸುಲಭವಾಗಲಿದೆ. ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಸ್ಟೀರಿಂಗ್ ಮೌಟೇಡ್ ನಿಯಂತ್ರಣ, ಪುಶ್ ಸ್ಟಾರ್ಟ್ ಸ್ಟಾಪ್ ಬಟನ್, ರೈನ್ ಸೆನ್ಸಿಂಗ್ ವೈಪರ್, ಕ್ರೂಸ್ ನಿಯಂತ್ರಣ ಮತ್ತು ಎಲೆಕ್ಟ್ರೋಕ್ರೊಮಿಕ್ ಇನ್ಸೈಡ್ ರಿಯರ್-ವ್ಯೂ ಮಿರರ್ (ಐಆರ್‌ವಿಎಂ) ನಂತಹ ಇತರ ಆಂತರಿಕ ಲಕ್ಷಣಗಳನ್ನು ಹೊಂದಿದೆ.
ಅರ್ಬನ್ ಕ್ರೂಸರ್ ಬಿಎಸ್ 6 ಕಂಪ್ಲೈಂಟ್ ಮಾದರಿಯಾಗಿದ್ದು, 1.5-ಲೀಟರ್ ಕೆ-ಸೀರೀಸ್ ಎಂಜಿನ್ ಹೊಂದಿದೆ. ಎಂಜಿನ್ ಗರಿಷ್ಠ 104 ಬಿಹೆಚ್‌ಪಿ ಶಕ್ತಿ ಮತ್ತು 138 ಎನ್‌ಎಂ ಗರಿಷ್ಠ ಟಾರ್ಕ್ ಪ್ರೊಡಕ್ಷನ್ ಸಾಮರ್ಥ್ಯ ಹೊಂದಿದೆ. ಟ್ರಾನ್ಸ್ಮಿಷನ್ ಸಿಸ್ಟಮ್ 5-ಸ್ಪೀಡ್ ಮ್ಯಾನುವಲ್, 4-ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟ್ ಒಳಗೊಂಡಿದೆ.
ಭಾರತದಲ್ಲಿ ಟೊಯೋಟಾ ಅರ್ಬನ್ ಕ್ರೂಸರ್ ಬೆಲೆ 8 ಲಕ್ಷ ರೂ.ಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗಬಹುದು. ಟಾಪ್-ಆಫ್-ಲೈನ್ ಟ್ರಿಮ್ ಸುಮಾರು 12 ಲಕ್ಷ ರೂ. (ಎಕ್ಸ್ ಶೋ ರೂಂ) ಬೆಲೆ ನಿಗದಿಪಡಿಸಬಹುದು ಎಂದು ಅಂದಾಜಿಸಲಾಗಿದೆ.