ಕರ್ನಾಟಕ

karnataka

ETV Bharat / business

ದಿ ಬಿಗ್​ ಬಿಲಿಯನ್​ ಡೇ​ ಮುನ್ನ 1 ರೂ. ಆಫರ್ ಘೋಷಿಸಿದ ಫ್ಲಿಪ್​ಕಾರ್ಟ್​! - ಬಿಗ್ ಬಿಲಿಯನ್ ಡೇಸ್

ಅಕ್ಟೋಬರ್ 11ರಿಂದ ಅಕ್ಟೋಬರ್ 14ರ ನಡುವೆ ಸಂಭಾವ್ಯ ಗ್ರಾಹಕರು ಆಯ್ದ ಉತ್ಪನ್ನಗಳಿಗೆ ಬಿಗ್ ಬಿಲಿಯನ್ ಡೇಸ್ ಮಾರಾಟ ಕಾರ್ಯಕ್ರಮದ ಮೊದಲು ಕನಿಷ್ಠ 1 ರೂ.ಗೆ ಪಾವತಿಸಿ ಉತ್ಪನ್ನಗಳನ್ನು ಮೊದಲೇ ಬುಕ್ ಮಾಡಬಹುದು ಎಂದು ಫ್ಲಿಪ್‌ಕಾರ್ಟ್ ತಿಳಿಸಿದೆ.

Flipkart
ಫ್ಲಿಪ್​ಕಾರ್ಟ್

By

Published : Oct 9, 2020, 8:42 PM IST

ಬೆಂಗಳೂರು:ಮುಂಬರಲಿರುವ ಹಬ್ಬದ ಋತುವಿನ ಪ್ರಯುಕ್ತ ಇ-ಕಾಮರ್ಸ್​ ದೈತ್ಯ ಫ್ಲಿಪ್​ಕಾರ್ಟ್​ ಅಕ್ಟೋಬರ್ 16ರಂದು 'ಬಿಗ್ ಬಿಲಿಯನ್ ಡೇಸ್' ಮಾರಾಟ ಅವಧಿ ಘೋಷಿಸಿದೆ. ಅದಕ್ಕೂ ಮುನ್ನವೇ ತನ್ನ ಗ್ರಾಹಕರಿಗೆ ವಿಭಿನ್ನ ಕೊಡುಗೆ ನೀಡಿದೆ.

ಅಕ್ಟೋಬರ್ 11ರಿಂದ ಅಕ್ಟೋಬರ್ 14ರ ನಡುವೆ ಸಂಭಾವ್ಯ ಗ್ರಾಹಕರು ಆಯ್ದ ಉತ್ಪನ್ನಗಳಿಗೆ ಬಿಗ್ ಬಿಲಿಯನ್ ಡೇಸ್ ಮಾರಾಟ ಕಾರ್ಯಕ್ರಮದ ಮೊದಲು ಕನಿಷ್ಠ 1 ರೂ.ಗೆ ಪಾವತಿಸಿ ಉತ್ಪನ್ನಗಳನ್ನು ಮೊದಲೇ ಬುಕ್ ಮಾಡಬಹುದು ಎಂದು ಫ್ಲಿಪ್‌ಕಾರ್ಟ್ ತಿಳಿಸಿದೆ.

ಅಮೆಜಾನ್​ನ 'ಗ್ರೇಟ್ ಇಂಡಿಯಾ ಫೆಸ್ಟಿವಲ್' ಮತ್ತು ಸ್ನ್ಯಾಪ್‌ಡೀಲ್‌ನ 'ಕುಮ್ ಮೇ ದಮ್' ಮಾರಾಟದ ಸ್ಪರ್ಧೆಯ ವಿರುದ್ಧ ಫ್ಲಿಪ್​ಕಾರ್ಟ್​, ಪೂರ್ವ ಬುಕ್ಕಿಂಗ್ ಆಫರ್​ ಅನ್ನು ತನ್ನ ಗ್ರಾಹಕರಿಗೆ ಒಂದು ದಿನ ಮೊದಲು ನೀಡಿದೆ. ಬಾಕಿ ಮೊತ್ತವನ್ನು ಆನ್‌ಲೈನ್‌ನಲ್ಲಿ ಅಥವಾ ನಗದು ವಿತರಣೆಯ ಮೂಲಕ ಪಾವತಿಸಬಹುದು.

'ಬಿಗ್ ಬಿಲಿಯನ್ ಡೇಸ್' ಕೊಡುಗೆಗಳಲ್ಲಿ ಗರಿಷ್ಠ ಬೆಲೆ ಇರುವುದಿಲ್ಲ. ಆದರೆ ಕೇವಲ 1 ರೂ. ಪಾವತಿಸುವ ಮೂಲಕ ತಮ್ಮ ಖರೀದಿಗಳನ್ನು ಮುಂಚಿತವಾಗಿ ಕಾಯ್ದಿರಿಸಬಹುದು ಎಂದಿದೆ.

ಮೊಬೈಲ್, ಟಿವಿ ಮತ್ತು ಅಪ್ಲೈಯನ್ಸ್​, ಎಲೆಕ್ಟ್ರಾನಿಕ್ಸ್ ಮತ್ತು ಪರಿಕರಗಳು, ಫ್ಯಾಷನ್, ಸೌಂದರ್ಯವರ್ಧಕಗಳು, ಆಹಾರ ಸಾಮಗ್ರಿ, ಆಟಿಕೆ, ಬೇಬಿ ಕೇರ್​, ಹೋಮ್​ ಅಂಡ್ ಕಿಚನ್​ ನೀಡ್ಸ್​, ಪೀಠೋಪಕರಣ, ದಿನಸಿ, ಫ್ಲಿಪ್‌ಕಾರ್ಟ್‌ನ ಖಾಸಗಿ ಬ್ರಾಂಡ್‌ಗಳಂತಹ ಉತ್ಪನ್ನಗಳು, ನೇಕಾರರ, ಕರಕುಶಲರು ತಯಾರಿಸಿದ ಸಾಮಗ್ರಿಗಳು ದಿ ಬಿಗ್ ಬಿಲಿಯನ್ ಡೇಸ್​ನಂದು ಮಾರಾಟಕ್ಕಿರಲಿವೆ.

ABOUT THE AUTHOR

...view details