ಕರ್ನಾಟಕ

karnataka

ETV Bharat / business

ಪೆಟ್ರೋಲ್​ ದರದಲ್ಲಿ 1.65 ರೂ. ಏರಿಕೆ: ಲೀಟರ್​ ಬೆಲೆ ಎಷ್ಟಾಗಿರಬಹುದು? - ಪೆಟ್ರೋಲ್ ದರ ಹೆಚ್ಚಳ

ಪೆಟ್ರೋಲ್ ಮತ್ತು ಡೀಸೆಲ್ ಎರಡರ ಚಿಲ್ಲರೆ ಬೆಲೆಗಳು ಆಗಸ್ಟ್ ಮೊದಲ 15 ದಿನಗಳವರೆಗೆ ದೆಹಲಿಯಲ್ಲಿ 80.43 ಮತ್ತು 73.56 ರೂ.ಗಳಲ್ಲಿದ್ದವು. ಆಗಸ್ಟ್ 16ರಿಂದ ಪೆಟ್ರೋಲ್ ಬೆಲೆ ಏರಿಕೆಯಾಗಲು ಪ್ರಾರಂಭಿಸಿತು. ದರ ಕ್ರಮೇಣ ಹೆಚ್ಚಾಗಿ 1.65 ರೂ.ಯಷ್ಟು ಹೆಚ್ಚಳವಾಯಿತು.

Petrol
ಪೆಟ್ರೋಲ್

By

Published : Sep 1, 2020, 7:07 PM IST

ನವದೆಹಲಿ: ಆಗಸ್ಟ್ 15ರಿಂದ ಇಂಧನ ಚಿಲ್ಲರೆ ಮಾರಾಟ ಕಂಪನಿಗಳು ಅದರ ದರ ಏರಿಕೆ ಮಾಡುತ್ತಿರುವುದರಿಂದ ಕಳೆದ ಹದಿನೈದು ದಿನಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ ಮೇಲೆ 1.65 ರೂ.ಗಳಷ್ಟು ದುಬಾರಿಯಾಗಿದೆ.

ಡೀಸೆಲ್ ಬೆಲೆ ಕಳೆದ ತಿಂಗಳಿಂದ ಬದಲಾಗದೆ ಲೀಟರ್ 73.56 ರೂ.ಯಷ್ಟಾಗಿ ಯಥಾವತ್ತಾಗಿ ಉಳಿದಿದೆ. ಆದರೆ, ಪೆಟ್ರೋಲ್ ದರ ಕಳೆದ 15 ದಿನಗಳ ಏರಿಕೆಯಿಂದಾಗಿ 82.08 ರೂ.ಗೆ ತಲುಪಿದೆ.

ಪೆಟ್ರೋಲ್ ಮತ್ತು ಡೀಸೆಲ್ ಎರಡರ ಚಿಲ್ಲರೆ ಬೆಲೆಗಳು ಆಗಸ್ಟ್ ಮೊದಲ 15 ದಿನಗಳವರೆಗೆ ದೆಹಲಿಯಲ್ಲಿ 80.43 ಮತ್ತು 73.56 ರೂ.ಗಳಲ್ಲಿದ್ದವು. ಆಗಸ್ಟ್ 16ರಿಂದ ಪೆಟ್ರೋಲ್ ಬೆಲೆ ಏರಿಕೆಯಾಗಲು ಪ್ರಾರಂಭಿಸಿತು. ದರ ಕ್ರಮೇಣ ಹೆಚ್ಚಾಗಿ 1.65 ರೂ.ಯಷ್ಟು ಹೆಚ್ಚಳವಾಯಿತು.

ಕಳೆದ ಹದಿನೈದು ದಿನಗಳಲ್ಲಿ ಪೆಟ್ರೋಲ್ ಬೆಲೆ ಸುಮಾರು 12 ಬಾರಿ ಪರಿಷ್ಕರಿಸಲಾಯಿತು. ಆದರೆ, ಅಂತಾರಾಷ್ಟ್ರೀಯ ದರಗಳು ಹೆಚ್ಚು ಏರಿಳಿತ ಕಾಣಲಿಲ್ಲ. ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ 45.4 ಮತ್ತು 45.9 ಡಾಲರ್​ ನಡುವೆ ನಿರಂತವಾಗಿದ್ದವು. ಮಂಗಳವಾರ ಬ್ರೆಂಟ್ ಕಚ್ಚಾ ಬ್ಯಾರೆಲ್‌ಗೆ 45.60 ಡಾಲರ್​ಗೆ ಪ್ರಾರಂಭವಾಗಿ 45.86 ಡಾಲರ್​ನಂತೆ ವಹಿವಾಟು ನಡೆಸುತು. ಸೋಮವಾರದಿಂದ ಬ್ಯಾರೆಲ್​ ಮೇಲೆ ಶೇ 1.28ರಷ್ಟು ದರ ಏರಿಕೆಯಾಗಿ 45.28 ಡಾಲರ್​ಗೆ ತಲುಪಿದೆ.

ಸಂಸ್ಕರಿಸುವ ಶೇ 80ರಷ್ಟು ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಮತ್ತು ಡಾಲರ್‌ನಲ್ಲಿ ಪಾವತಿಸುವ ಭಾರತದ ವಹಿವಾಟು ಕಳೆದ ಹದಿನೈದು ದಿನಗಳಲ್ಲಿ ಆಮದು ವೆಚ್ಚ ಶೇ 0.8ರಷ್ಟು ಇಳಿಕೆಯಾಗಿದೆ. ರೂಪಾಯಿ-ಡಾಲರ್ ವಿನಿಮಯ ದರದಲ್ಲಿ ಭಾರತದ ಸರಾಸರಿ ಕಚ್ಚಾ ತೈಲ ಖರೀದಿ ವೆಚ್ಚ ಆಗಸ್ಟ್ 31ರಂದು ಪ್ರತಿ ಬ್ಯಾರೆಲ್‌ಗೆ 3,268.13 ರೂ.ಯಷ್ಟಿದೆ.

ABOUT THE AUTHOR

...view details