ನವದೆಹಲಿ: ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಗುರುವಾರದಂದು ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತಲಾ 7 ಪೈಸೆಯಷ್ಟು ಏರಿಕೆಯಾಗಿದೆ.
10 ದಿನದಲ್ಲಿ 2.70 ರೂ. ಜಿಗಿದ ಪೆಟ್ರೋಲ್.... ಡೀಸೆಲ್ ದರವೆಷ್ಟಾಗಿದೆ? - Diesel Rate news
ಕಳೆದ ಕೆಲ ವಾರದಿಂದ ಇಂಧನವು ಚಿಲ್ಲರೆ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಧಾರಣೆಯಲ್ಲಿ ಹೆಚ್ಚಳವಾಗುತ್ತಲ್ಲೆ ಸಾಗಿದೆ. ಈ ಹಿಂದಿನ 10 ದಿನಗಳ ಅವಧಿಯಲ್ಲಿ ಪೆಟ್ರೋಲ್ ದರದಲ್ಲಿ ₹ 2.70 ಹೆಚ್ಚಳವಾಗಿದ್ದರೇ ಡೀಸೆಲ್ನಲ್ಲಿ ₹ 2.30 ಏರಿಕೆಯಾಗಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ನ ನಿತ್ಯದ ಇಂಧನ ಧಾರಣೆ ಅನ್ವಯ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಲೀಟರ್ ಪೆಟ್ರೋಲ್ ₹ 74.19 ಮತ್ತು ಡೀಸೆಲ್ ₹ 67.14 ಮಾರಾಟ ಆಗುತ್ತಿದೆ. ಮುಂಬೈ, ಚೆನ್ನೈ, ಕೋಲ್ಕತ್ತಾ ಮತ್ತು ಬೆಂಗಳೂರಿನಲ್ಲಿ ಅನುಕ್ರಮವಾಗಿ ₹ 79.85 & ₹ 70.44, ₹ 77.12 & ₹ 70.98, ₹ 76.88 & ₹ 64.56 ಹಾಗೂ ₹ 76.73 & ₹ 69.43 ವಹಿವಾಟು ನಡೆಸುತ್ತಿದೆ.