ಕರ್ನಾಟಕ

karnataka

ETV Bharat / business

ಕೊರೊನಾ ಕಾಟದ ಮಧ್ಯೆ ಸತತ 3ನೇ ದಿನವೂ ಪೆಟ್ರೋಲ್ ದರ ಏರಿಕೆ: ಗ್ರಾಹಕರು ತತ್ತರ! - ಡೀಸೆಲ್​ ದರ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಮಂಗಳವಾರ ಸತತ ಮೂರನೇ ದಿನ 17 ಪೈಸೆ ಏರಿಕೆಯಾಗಿ ಲೀಟರ್ 80.90 ರೂ.ಗೆ ತಲುಪಿದೆ. ಜೂನ್ 29ರಿಂದ 47 ದಿನಗಳ ವಿರಾಮಕ್ಕೆ ಬ್ರೇಕ್​ ಹಾಕಿದ ಪೆಟ್ರೋಲ್, ಭಾನುವಾರ 14 ಪೈಸೆ ಏರಿಕೆಯಾಗಿತ್ತು.

Fuel
ಇಂಧನ

By

Published : Aug 18, 2020, 3:01 PM IST

ನವದೆಹಲಿ:ಜಾಗತಿಕ ತೈಲ ಮಾರುಕಟ್ಟೆ ಬೆಲೆ ಏರಿಕೆಯ ಚಕ್ರ ವೇಗ ಪಡೆದುಕೊಳ್ಳುತ್ತಿದ್ದಂತೆ ದೇಶದ ಚಿಲ್ಲರೆ ಇಂಧನ ಪೇಟೆಯಲ್ಲೂ ಸಹ ದರ ಏರಿಕೆಯಾಗುತ್ತಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಮಂಗಳವಾರ ಸತತ ಮೂರನೇ ದಿನ 17 ಪೈಸೆ ಏರಿಕೆಯಾಗಿ ಲೀಟರ್ 80.90 ರೂ.ಗೆ ತಲುಪಿದೆ. ಜೂನ್ 29ರಿಂದ 47 ದಿನಗಳ ವಿರಾಮಕ್ಕೆ ಬ್ರೇಕ್​ ಹಾಕಿದ ಪೆಟ್ರೋಲ್, ಭಾನುವಾರ 14 ಪೈಸೆ ಏರಿಕೆಯಾಗಿತ್ತು.

ಜೂನ್ ಅಂತ್ಯದಿಂದ ನಿಯಮಿತ ಏರಿಕೆ ಕಾಯ್ದುಕೊಂಡಿದ್ದ ಡೀಸೆಲ್ ಬೆಲೆ ಕಳೆದ ಎರಡು ವಾರಗಳಿಂದ ಚಿಲ್ಲರೆ ಬೆಲೆ ದರವು ಸ್ಥಿರವಾಗಿದೆ. ತೈಲ ಮಾರುಕಟ್ಟೆ ಕಂಪನಿಗಳ ಮೂಲಗಳು ಹೇಳುವಂತೆ, ಅಂತಾರಾಷ್ಟ್ರೀಯ ಪೆಟ್ರೋಲ್ ಬೆಲೆ ಹೆಚ್ಚಳವಾಗುತ್ತಿದೆ. ಇದರ ಪರಿಣಾಮವಾಗಿ ಬೆಲೆಗಳನ್ನು ಪರಿಷ್ಕರಿಸಲಾಗಿದೆ. ಡೀಸೆಲ್ ಬೆಲೆಯನ್ನು ಸ್ಥಿರವಾಗಿ ಇರಿಸಿಕೊಳ್ಳಲಾಗಿದೆ.

ಕಚ್ಚಾ ತೈಲ ಬೆಲೆ ಏರುತ್ತಿದ್ದು, ಬ್ರೆಂಟ್ ತೈಲವು ಪ್ರತಿ ಬ್ಯಾರೆಲ್‌ಗೆ 45 ಡಾಲರ್​​ನಲ್ಲಿ ವಹಿವಾಟು ನಡೆಸುತ್ತಿದೆ. ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಬೆಲೆ ಮೇಲ್ಮುಖವಾಗಿ ಪರಿಷ್ಕರಿಸಲಾಗಿದೆ.

ABOUT THE AUTHOR

...view details