ಕರ್ನಾಟಕ

karnataka

ETV Bharat / business

47 ದಿನಗಳ ಬಳಿಕ ಪೆಟ್ರೋಲ್​ ದರ ಏರಿಕೆ: ಯಾವ ನಗರದಲ್ಲಿ ಎಷ್ಟಿದೆ ಬೆಲೆ? - ಇಂದಿನ ಪೆಟ್ರೋಲ್ ಬೆಲೆ

ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಸತತ ಎರಡನೇ ದಿನ 16 ಪೈಸೆ ಏರಿಕೆಯಾಗಿ ಲೀಟರ್ 80.73 ರೂ. ತಲುಪಿದೆ. 47 ದಿನಗಳ ದೀರ್ಘ ವಿರಾಮದ ಬಳಿಕ ಭಾನುವಾರ ಪೆಟ್ರೋಲ್​ ಪಂಪ್ ಬೆಲೆಯಲ್ಲಿ 14 ಪೈಸೆ ಏರಿಕೆಯಾಗಿದೆ.

Fuel
ಇಂಧನ

By

Published : Aug 17, 2020, 3:51 PM IST

ನವದೆಹಲಿ:ದೀರ್ಘ 47 ದಿನಗಳ ವಿರಾಮದ ಬಳಿಕ ಡೀಸೆಲ್ ಬೆಲೆಗಳು ಸ್ಥಿರವಾಗಿ ಉಳಿದಿರುವಾಗ ಚಿಲ್ಲರೆ ಬೆಲೆಯಲ್ಲಿ ಪೆಟ್ರೋಲ್ ಏರಿಕೆ ಸರದಿ ಶುರುವಾಗಿದೆ.

ದೇಶದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಚೆನ್ನೈ ಹಾಗೂ ಬೆಂಗಳೂರಲ್ಲಿ ಇಂಧನ ದರ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಾದ ಬದಲಾವಣೆಯಿಂದ ದೇಶಿಯ ಚಿಲ್ಲರೆ ಇಂಧನ ಪೇಟೆಯಲ್ಲಿ ಬೆಲೆ ವ್ಯತ್ಯಾಸವಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಸತತ ಎರಡನೇ ದಿನ 16 ಪೈಸೆ ಏರಿಕೆಯಾಗಿ ಲೀಟರ್ 80.73 ರೂ. ತಲುಪಿದೆ. ಜೂನ್ 29 ರಿಂದ 47 ದಿನಗಳ ದೀರ್ಘ ವಿರಾಮದ ಬಳಿಕ ಭಾನುವಾರ ಪೆಟ್ರೋಲ್​ ಪಂಪ್ ಬೆಲೆಯಲ್ಲಿ 14 ಪೈಸೆ ಏರಿಕೆಯಾಗಿದೆ. ಜೂನ್ ಅಂತ್ಯದಿಂದ ನಿಯಮಿತ ಹೆಚ್ಚಳವನ್ನು ಕಾಯ್ದುಕೊಂಡಿರುವ ಡೀಸೆಲ್ ಬೆಲೆ ಈಗ ಸ್ಥಿರವಾಗಿದೆ.

ಭಾರತದಲ್ಲಿ ಆಗಸ್ಟ್‌ ಮಾಸಿಕದಲ್ಲಿ ಕೋವಿಡ್ -19 ಸಾಂಕ್ರಾಮಿಕ ಪ್ರಯುಕ್ತ ಆರ್ಥಿಕ ಚಟುವಟಿಕೆಗಳು ಸ್ಥಗಿತವಾಗಿವೆ ಎಂಬ ಸ್ಪಷ್ಟ ಸೂಚನೆಯು ಡೀಸೆಲ್ ಬಳಕೆ ಕುಸಿತಕ್ಕೆ ಸಾಕ್ಷಿಯಾಗಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ಇಂಧನ ಬೆಲೆ ಏರುತ್ತಿದ್ದು, ಬ್ರೆಂಟ್ ಕಚ್ಚಾ ತೈಲ 45 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿದೆ.

ಬೆಂಗಳೂರಲ್ಲಿ ಲೀಟರ್​ ಪೆಟ್ರೋಲ್ 83.23 ರೂ. ಮತ್ತು ಡೀಸೆಲ್ 77.96 ರೂ.ಗೆ ಮಾರಾಟ ಆಗುತ್ತಿವೆ. ಉಳಿದಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್-80.73 ರೂ. & ಡೀಸೆಲ್‘- 73.56 ರೂ.ಯಲ್ಲಿ ವಹಿವಾಟು ನಡೆಸಿದ್ದರೇ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್- 87.45 ರೂ. & ಡೀಸೆಲ್- 80.11 ರೂ. ಹಾಗೂ ಚೆನ್ನೈನಲ್ಲಿ ಪೆಟ್ರೋಲ್- 83.87 ರೂ. & ಡೀಸೆಲ್- 78.86 ರೂ. ಖರೀದಿ ಆಗುತ್ತಿದೆ.

ABOUT THE AUTHOR

...view details