ಕರ್ನಾಟಕ

karnataka

ETV Bharat / business

ಇಳಿದ ಪೆಟ್ರೋಲ್​ ಬೆಲೆ... ಗಗನ ಮುಖಿಯಾದ ಡೀಸೆಲ್​ ದರ -

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್​ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್‌ಗೆ 73.00 ನಷ್ಟಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪೆಟ್ರೋಲ್ ವಿತರಣಾ ಕಂಪೆನಿಗಳು ಮತ್ತು ಸ್ಥಳದಿಂದ ಸ್ಥಳಕ್ಕೆ ಸ್ವಲ್ಪ ವ್ಯತ್ಯಾಸ ಇರಲಿದೆ.

ಸಂಗ್ರಹ ಚಿತ್ರ

By

Published : May 17, 2019, 8:35 PM IST

ನವದೆಹಲಿ: ಸರ್ಕಾರ ಬೆಂಬಲಿತ ತೈಲ ಮಾರುಕಟ್ಟೆ ಕಂಪನಿಗಳು ಶುಕ್ರವಾರದಂದು ಪೆಟ್ರೋಲ್​ ದರದಲ್ಲಿ ಇಳಿಕೆ ಮಾಡಿದ್ದು, ದೆಹಲಿ, ಮುಂಬೈ, ಕೊಲ್ಕತ್ತಾ, ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಡೀಸೆಲ್​ ಬೆಲೆ ಜಿಗಿತ ಕಂಡಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್​ ನಿನ್ನೆ ₹ 71.18ರಲ್ಲಿ ಮಾರಾಟ ಆಗುತ್ತಿದ್ದರೆ ಇಂದು ₹ 71.10ರಲ್ಲಿ ವಾಹನ ಸವಾರರು ಖರೀದಿಸುತ್ತಿದ್ದಾರೆ. ಅದೇ ರೀತಿ, ಲೀಟರ್​ ಡೀಸೆಲ್​ ಬೆಲೆಯಲ್ಲಿ 5 ಪೈಸೆ ಇಳಿಕೆಯಾಗಿದ್ದು, ₹ 65.91 ವಹಿವಾಟು ನಡೆಸುತ್ತಿದೆ.

ಮುಂಬೈ, ಕೊಲ್ಕತ್ತಾ, ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಲೀ. ಪೆಟ್ರೋಲ್​ ಹಾಗೂ ಡೀಸೆಲ್​ ಕ್ರಮವಾಗಿ ₹ 76.71 & ₹ 69.11, ₹ 73.17 & ₹ 67.71, ₹ 73.79 & 69.72 ದರದಲ್ಲಿ ಮಾರಾಟವಾಗುತ್ತಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್​ ದರದಲ್ಲಿ 8 ಪೈಸೆ ಇಳಿಕೆ ಕಂಡು ₹ 73.42 ದರದಲ್ಲಿ ಮಾರಾಟ ಆಗುತ್ತಿದೆ. ಡೀಸೆಲ್ ಬೆಲೆಯಲ್ಲಿ 6 ಪೈಸೆ ಜಿಗಿತವಾಗಿ ₹ 68.11ರಲ್ಲಿ ವಹಿವಾಟು ನಿರತವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್​ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್‌ಗೆ 73.00 ನಷ್ಟಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪೆಟ್ರೋಲ್ ವಿತರಣಾ ಕಂಪೆನಿಗಳು ಮತ್ತು ಸ್ಥಳದಿಂದ ಸ್ಥಳಕ್ಕೆ ಸ್ವಲ್ಪ ವ್ಯತ್ಯಾಸ ಇರಲಿದೆ.

For All Latest Updates

TAGGED:

ABOUT THE AUTHOR

...view details