ಕರ್ನಾಟಕ

karnataka

ETV Bharat / business

ಸತತ 6ನೇ ದಿನವೂ ಪೆಟ್ರೋಲ್ ಬೆಲೆಯಲ್ಲಿ ಏರಿಕೆ: ಯಾವ ನಗರದಲ್ಲಿ ಎಷ್ಟಿದೆ?

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 45 ಡಾಲರ್‌ಗಿಂತಲೂ ಹೆಚ್ಚಳವಾಗಿದೆ. ಸರ್ಕಾರಿ ಒಡೆತನದ ತೈಲ ಮಾರುಕಟ್ಟೆ ಕಂಪನಿಗಳು ದೆಹಲಿ, ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಮಂಗಳವಾರ ಪೆಟ್ರೋಲ್ ಬೆಲೆಯನ್ನು ಲೀಟರ್‌ ಮೇಲೆ 11 ಪೈಸೆ ಹೆಚ್ಚಿಸಿವೆ. ಚೆನ್ನೈನಲ್ಲಿ ಒಂಬತ್ತು ಪೈಸೆ ಏರಿಕೆಯಾಗಿದೆ.

By

Published : Aug 25, 2020, 3:37 PM IST

ನವದೆಹಲಿ: ದೇಶದ ಇಂಧನ ಚಿಲ್ಲರೆ ಮಾರುಕಟ್ಟೆಯಲ್ಲಿ ಸತತ ಆರನೇ ದಿನವೂ ಪೆಟ್ರೋಲ್ ದರದಲ್ಲಿ ಏರಿಕೆ ದಾಖಲಾಗಿದೆ. ಡೀಸೆಲ್ ಜುಲೈ 30ರಿಂದಲೂ ತನ್ನ ಬೆಲೆಯನ್ನು ಸ್ಥಿರವಾಗಿ ಉಳಿಸಿಕೊಂಡಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 45 ಡಾಲರ್‌ಗಿಂತಲೂ ಹೆಚ್ಚಳವಾಗಿದೆ. ಸರ್ಕಾರಿ ಒಡೆತನದ ತೈಲ ಮಾರುಕಟ್ಟೆ ಕಂಪನಿಗಳು ದೆಹಲಿ, ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಮಂಗಳವಾರ ಪೆಟ್ರೋಲ್ ಬೆಲೆಯನ್ನು ಲೀಟರ್‌ ಮೇಲೆ 11 ಪೈಸೆ ಹೆಚ್ಚಿಸಿವೆ. ಚೆನ್ನೈನಲ್ಲಿ ಒಂಬತ್ತು ಪೈಸೆ ಏರಿಕೆಯಾಗಿದೆ.

ಇಂಡಿಯನ್ ಆಯಿಲ್ ವೆಬ್‌ಸೈಟ್ ಪ್ರಕಾರ, ದೆಹಲಿ, ಕೋಲ್ಕತಾ, ಮುಂಬೈ ಮತ್ತು ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಕ್ರಮವಾಗಿ ಲೀಟರ್‌ಗೆ 81.73, 83.24, 88.39, 84.73 ರೂ.ಗಳಷ್ಟು ಏರಿದೆ. ಆದರೆ, ಡೀಸೆಲ್ ಬೆಲೆ ಈ ಮಹಾನಗರಗಳಲ್ಲಿ 73.56, 77.06, 80.11 ಮತ್ತು 78.86 ರೂ.ಯಷ್ಟಿದೆ.

ಕಳೆದ 10 ದಿನಗಳಲ್ಲಿ ಒಂಬತ್ತು ದಿನ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ವೇಳೆ ಲೀಟರ್​ ಮೇಲೆ 1.30 ರೂ.ಯಷ್ಟು ಹೆಚ್ಚಳವಾಗಿದೆ.

ABOUT THE AUTHOR

...view details