ನವದೆಹಲಿ: ಅಂತಾರಾಷ್ಟ್ರೀಯ ತೈಲ ಬೆಲೆಗಳು ಕಳೆದ ಹದಿನೈದು ದಿನಗಳಲ್ಲಿ 13 ಬಾರಿ ದರ ಹೆಚ್ಚಳ ಮಾಡಿದ ನಂತರ ಎರಡು ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 83 ರೂ. ದಾಟಿದೆ.
ತೈಲ ಮಾರುಕಟ್ಟೆ ಕಂಪನಿಗಳು ಶನಿವಾರ ಪೆಟ್ರೋಲ್ ಬೆಲೆ ಲೀಟರ್‌ಗೆ 27 ಪೈಸೆ ಮತ್ತು ಡೀಸೆಲ್ 25 ಪೈಸೆಯಷ್ಟು ಏರಿಸಿವೆ.
ದೆಹಲಿಯಲ್ಲಿ ಪೆಟ್ರೋಲ್ 82.86 ರೂ.ಗಳಿಂದ 83.13 ರೂ.ಗೆ ಏರಿದೆ. ಡೀಸೆಲ್ 73.07 ರೂ.ಯಿಂದ 73.32 ರೂ.ಗೆ ಏರಿಕೆಯಾಗಿದೆ. 2018ರ ಸೆಪ್ಟೆಂಬರ್ನಿಂದ ಪೆಟ್ರೋಲ್ ಮತ್ತು ಡೀಸೆಲ್ ಅತ್ಯಧಿಕ ದರದಲ್ಲಿ ಮಾರಾಟ ಆಗುತ್ತಿದೆ. ಎರಡು ತಿಂಗಳ ವಿರಾಮದ ನಂತರ ತೈಲ ಕಂಪನಿಗಳು ದೈನಂದಿನ ಬೆಲೆ ಪರಿಷ್ಕರಣೆ ಪುನಾರಂಭಿಸಿದಾಗ ನವೆಂಬರ್ 20ರಿಂದ 13 ಬಾರಿ ದರ ಹೆಚ್ಚಳವಾಗಿದೆ.
ಎಸ್ಬಿಐಗೆ 1,800 ಕೋಟಿ ರೂ. ಸಾಲ ವಂಚನೆ: ಮೂರು ಕಡೆ ಸಿಬಿಐ ದಾಳಿ, ಕಂಪನಿಗಳ ಕಡತ ಶೋಧ
16 ದಿನಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 2.07 ರೂ ಮತ್ತು ಡೀಸೆಲ್ ದರ 2.86 ರೂ.ನಷ್ಟಾಗಿತ್ತು ಹೆಚ್ಚಳವಾಗಿದೆ. 'ಲಸಿಕೆ ಭರವಸೆಗಳು ತೈಲ ಬೆಲೆ ಹೆಚ್ಚಳಕ್ಕೆ ಕಾರಣವಾಗಿವೆ' ಎಂದು ಐಸಿಐಸಿಐ ಸೆಕ್ಯುರಿಟೀಸ್ ಹೇಳಿದೆ.
ಕೋವಿಡ್ -19 ಲಸಿಕೆ ಬೇಡಿಕೆಯು ಚೇತರಿಕೆಗೆ ಕಾರಣವಾಗುತ್ತವೆ ಎಂಬ ಭರವಸೆಯಿಂದ 2020ರ ಅಕ್ಟೋಬರ್ ಅಂತ್ಯದಲ್ಲಿ ಬ್ರೆಂಟ್ ಕಚ್ಚಾ ತೈಲವು ಕನಿಷ್ಠ ಶೇ 34ರಷ್ಟು ಹೆಚ್ಚಾಗಿದೆ.
ಯುರೋಪ್ ಮತ್ತು ಅಮೆರಿಕದಲ್ಲಿ ಕೋವಿಡ್ನ ಎರಡನೇ ಅಲೆಯ ಹೊರತಾಗಿಯೂ ತೈಲ ಬೆಲೆ ಏರಿಕೆಯಾಗಿದೆ. ಲಿಬಿಯಾದ ತೈಲ ಉತ್ಪಾದನೆಯು ದಿನಕ್ಕೆ 0.1 ಮಿಲಿಯನ್ ಬ್ಯಾರೆಲ್ಗಳಿಂದ (ಬಿಪಿಡಿ) 1.25 ಮಿಲಿಯನ್ ಬಿಪಿಡಿಗೆ ಏರಿದೆ ಎಂದು ಐಸಿಐಸಿಐ ಹೇಳಿದೆ.