ನವದೆಹಲಿ:ಪ್ರತಿಪಕ್ಷಗಳಿಂದ ಭಾರಿ ಟೀಕೆಗೆ ಒಳಗಾದರೂ ಕೂಡಾ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರವನ್ನು ನಿಯಂತ್ರಣ ಮಾಡುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಎರಡು ವಾರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಸುಮಾರು 8 ರೂ. ಏರಿಕೆ - ಪೆಟ್ರೋಲ್ ದರ ಏರಿಕೆ
ದೆಹಲಿಯಲ್ಲಿ ಪೆಟ್ರೋಲ್ ಲೀಟರ್ಗೆ 0.51 ಪೈಸೆ ಹಾಗೂ ಡೀಸೆಲ್ 0.61 ಪೈಸೆ ಏರಿಕೆ ಕಂಡಿದೆ. ಹೀಗಾಗಿ ಎರಡು ವಾರಗಳ ಅಂತರದಲ್ಲಿ ಪೆಟ್ರೋಲ್ ಸರಿ ಸುಮಾರು 8 ರೂ.ನಷ್ಟು ಏರಿಕೆ ಕಂಡಿದೆ.
ಸತತ 14ನೇ ದಿನವೂ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಹೆಚ್ಚಳವಾಗಿದೆ. ಇದು ವಾಹನ ಸವಾರರನ್ನು ಇನ್ನಿಲ್ಲದಂತೆ ಸಂಕಷ್ಟಕ್ಕೆ ದೂಡುತ್ತಿದೆ. ಇಂದೂ ಸಹ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಲೀಟರ್ಗೆ 0.51 ಪೈಸೆ ಹಾಗೂ ಡೀಸೆಲ್ 0.61 ಪೈಸೆ ಏರಿಕೆ ಕಂಡಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 77.81 ರೂ.ನಿಂದ 78.37ಕ್ಕೆ ಏರಿಕೆಯಾಗಿದೆ. ಇನ್ನೊಂದೆಡೆ, ಡೀಸೆಲ್ ಬೆಲೆ 76.43ರೂ.ನಿಂದ 77.06 ರೂ.ಗಳಿಗೆ ಏರಿಕೆಯಾಗಿದೆ. ಹೀಗಾಗಿ ಎರಡು ವಾರಗಳ ಅಂತರದಲ್ಲಿ ಪೆಟ್ರೋಲ್ ಸರಿ ಸುಮಾರು 8 ರೂ.ನಷ್ಟು ಏರಿಕೆ ಕಂಡಿದೆ.
ಬೆಂಗಳೂರಿನಲ್ಲೂ ಪೆಟ್ರೋಲ್ - ಡೀಸೆಲ್ ದರದಲ್ಲಿ ಏರಿಕೆಯಾಗಿದೆ.