ಕರ್ನಾಟಕ

karnataka

ETV Bharat / business

ಎಲೆಕ್ಷನ್ ಮಹಿಮೆಗೆ 15 ದಿನ ಇಂಧನ ದರ ಸ್ಥಿರ : ಮೇ ಶುರುವಲ್ಲಿ ಪೆಟ್ರೋಲ್ ರೇಟ್​ ಹೆಚ್ಚಳವೇ? - ಡೀಸೆಲ್ ದರಗಳು

ರಾಜ್ಯ ಚುನಾವಣೆಗಳ ಫಲಿತಾಂಶ ಘೋಷಿಸಿದ ನಂತರ ಮುಂದಿನ ತಿಂಗಳ ಆರಂಭದಲ್ಲಿ ಬೆಲೆ ಪರಿಷ್ಕರಣೆ ಪ್ರಾರಂಭವಾಗಬಹುದು ಎಂದು ಮೂಲಗಳು ಹೇಳಿತ್ತಿವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಳಿತವಾಗಲಿವೆ ಎಂಬುದು ಮಾರ್ಚ್ ಕೊನೆಯ 15 ದಿನಗಳಲ್ಲಿ ಪ್ರಸ್ತುತ ಸರಾಸರಿ ಜಾಗತಿಕ ಬೆಲೆಯ ಮೇಲೆ ಅವಲಂಬಿತವಾಗಿರುತ್ತದೆ..

Petrol
Petrol

By

Published : Apr 30, 2021, 3:10 PM IST

ನವದೆಹಲಿ :ಜಾಗತಿಕ ಬೆಲೆ ಚಲನೆಗೆ ಅನುಗುಣವಾಗಿ ಉತ್ಪಾದಿಸಲಾಗುವ ಪೆಟ್ರೋಲ್ ಮತ್ತು ಡೀಸೆಲ್‌ನ ದೈನಂದಿನ ಪರಿಷ್ಕರಣೆ ಪುನಾರಂಭಿಸುವ ಮೊದಲು ತೈಲ ಮಾರುಕಟ್ಟೆ ಕಂಪನಿಗಳು ಪಂಚ ರಾಜ್ಯ ಚುನಾವಣೆ ಮುಗಿಯುವವರೆಗೆ ಕಾಯಲು ನಿರ್ಧರಿಸಿದ್ದರಿಂದ ದೇಶದಲ್ಲಿ ಇಂಧನ ಚಿಲ್ಲರೆ ಬೆಲೆಗಳು ಶುಕ್ರವಾರ ಬದಲಾಗಲಿಲ್ಲ.

ರಾಜ್ಯ ಚುನಾವಣೆಗಳ ಫಲಿತಾಂಶ ಘೋಷಿಸಿದ ನಂತರ ಮುಂದಿನ ತಿಂಗಳ ಆರಂಭದಲ್ಲಿ ಬೆಲೆ ಪರಿಷ್ಕರಣೆ ಪ್ರಾರಂಭವಾಗಬಹುದು ಎಂದು ಮೂಲಗಳು ಹೇಳಿತ್ತಿವೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಳಿತವಾಗಲಿವೆ ಎಂಬುದು ಮಾರ್ಚ್ ಕೊನೆಯ 15 ದಿನಗಳಲ್ಲಿ ಪ್ರಸ್ತುತ ಸರಾಸರಿ ಜಾಗತಿಕ ಬೆಲೆಯ ಮೇಲೆ ಅವಲಂಬಿತವಾಗಿರುತ್ತದೆ.

ಒಎಂಸಿಗಳು ಚಿಲ್ಲರೆ ಇಂಧನ ಬೆಲೆಗಳನ್ನು ಜಾಗತಿಕ ಸಂಸ್ಕರಿಸಿದ ಉತ್ಪನ್ನಗಳ ಬೆಲೆ ಮತ್ತು ಡಾಲರ್ ವಿನಿಮಯ ದರದ ಆಧಾರದ 15 ದಿನಗಳ ಸರಾಸರಿಗೆ ಪರಿಷ್ಕರಿಸುತ್ತವೆ.

ಶುಕ್ರವಾರ ಯಾವುದೇ ಬೆಲೆ ಬದಲಾವಣೆಯಿಲ್ಲದೆ ಪೆಟ್ರೋಲ್ ಮತ್ತು ಡೀಸೆಲ್‌ನ ಪಂಪ್ ಬೆಲೆ ದೆಹಲಿಯಲ್ಲಿ ಕ್ರಮವಾಗಿ ಲೀಟರ್​ಗೆ 90.40 ರೂ. ಮತ್ತು 80.73 ರೂ.ಯಲ್ಲಿ ಮಾರಾಟ ಆಗುತ್ತಿವೆ.

ಒಎಂಸಿಗಳು ಬೆಲೆಗಳನ್ನು ಸ್ಥಿರವಾಗಿರಿಸಿಕೊಂಡ 15 ದಿನಗಳ ವಿರಾಮದ ನಂತರ ಎರಡು ವಾಹನ ಇಂಧನಗಳ ಬೆಲೆ ಏಪ್ರಿಲ್ 15ರಂದು ಕೊನೆಯ ಬಾರಿಗೆ ಕ್ರಮವಾಗಿ ಲೀಟರ್‌ಗೆ 16 ಪೈಸೆ ಮತ್ತು 14 ಪೈಸೆ ಇಳಿಕೆಯಾಗಿದ್ದವು.

ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಶುಕ್ರವಾರ ಬದಲಾಗದೆ ಇದ್ದವು. ಆದರೆ, ಅದರ ಚಿಲ್ಲರೆ ಮಟ್ಟವು ಆಯಾ ರಾಜ್ಯಗಳ ಮೇಲಿನ ಸ್ಥಳೀಯ ಸುಂಕದ ಮಟ್ಟ ಅವಲಂಬಿಸಿ ಬದಲಾಗುತ್ತವೆ. ಪ್ರೀಮಿಯಂ ಪೆಟ್ರೋಲ್ ಮುಂಬೈ ಮತ್ತು ದೇಶಾದ್ಯಂತ ಹಲವು ನಗರಗಳಲ್ಲಿ ಲೀಟರ್​ಗೆ 100 ರೂ.ಯಷ್ಟಿದೆ.

ದೇಶದ ಪ್ರಮುಖ ನಗರಗಳಲ್ಲಿ ಇಂಧನ ದರ :

ಚೆನ್ನೈ :ಪೆಟ್ರೋಲ್ ಬೆಲೆ - ಪ್ರತಿ ಲೀಟರ್‌ಗೆ 92.43 ರೂ.; ಡೀಸೆಲ್ ಬೆಲೆ - ಪ್ರತಿ ಲೀಟರ್‌ಗೆ 85.75 ರೂ.

ಕೋಲ್ಕತಾ : ಪೆಟ್ರೋಲ್ ಬೆಲೆ - ಪ್ರತಿ ಲೀಟರ್‌ಗೆ 90.62 ರೂ.; ಡೀಸೆಲ್ ಬೆಲೆ - ಪ್ರತಿ ಲೀಟರ್‌ಗೆ 83.61 ರೂ.

ಪುಣೆ : ಪೆಟ್ರೋಲ್ ಬೆಲೆ - ಪ್ರತಿ ಲೀಟರ್‌ಗೆ 96.47 ರೂ.; ಡೀಸೆಲ್ ಬೆಲೆ - ಪ್ರತಿ ಲೀಟರ್‌ಗೆ 86.13 ರೂ.

ಬೆಂಗಳೂರು : ಪೆಟ್ರೋಲ್ ಬೆಲೆ - ಪ್ರತಿ ಲೀಟರ್‌ಗೆ 93.43 ರೂ.; ಡೀಸೆಲ್ ಬೆಲೆ - ಪ್ರತಿ ಲೀಟರ್‌ಗೆ 85.60 ರೂ.

ಹೈದರಾಬಾದ್ : ಪೆಟ್ರೋಲ್ ಬೆಲೆ - ಪ್ರತಿ ಲೀಟರ್‌ಗೆ 93.99 ರೂ.; ಡೀಸೆಲ್ ಬೆಲೆ - ಪ್ರತಿ ಲೀಟರ್‌ಗೆ 88.05 ರೂ.

ನೋಯ್ಡಾ (ಯುಪಿ): ಪೆಟ್ರೋಲ್ ಬೆಲೆ - ಪ್ರತಿ ಲೀಟರ್‌ಗೆ 88.79ರೂ.; ಡೀಸೆಲ್ ಬೆಲೆ - ಪ್ರತಿ ಲೀಟರ್‌ಗೆ 81.19 ರೂ.

ಮೊಹಾಲಿ (ಪಂಜಾಬ್) : ಪೆಟ್ರೋಲ್ ಬೆಲೆ - ಪ್ರತಿ ಲೀಟರ್‌ಗೆ 92.62 ರೂ.; ಡೀಸೆಲ್ ಬೆಲೆ - ಪ್ರತಿ ಲೀಟರ್‌ಗೆ 83.58 ರೂ.

ಚಂಡೀಗಢ : ಪೆಟ್ರೋಲ್ ಬೆಲೆ ಲೀಟರ್‌ಗೆ 86.99 ರೂ.; ಡೀಸೆಲ್ ಬೆಲೆ - ಪ್ರತಿ ಲೀಟರ್‌ಗೆ 80.43 ರೂ.

ಗುರುಗ್ರಾಮ್ (ಹರಿಯಾಣ):ಪೆಟ್ರೋಲ್ ಬೆಲೆ - ಪ್ರತಿ ಲೀಟರ್‌ಗೆ 88.37 ರೂ.; ಡೀಸೆಲ್ ಬೆಲೆ - ಪ್ರತಿ ಲೀಟರ್‌ಗೆ 81.31 ರೂ.

ABOUT THE AUTHOR

...view details