ನವದೆಹಲಿ:ಎಲ್ಲ ಮಹಾನಗರಗಳಲ್ಲಿ ಸತತ ಎರಡನೇ ಬಾರಿಗೆ ದರಗಳನ್ನು ಹೆಚ್ಚಿಸಿದ್ದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಶನಿವಾರ (ಜೂನ್ 12) ಹೊಸ ದಾಖಲೆಯ ಗರಿಷ್ಠ ಮಟ್ಟ ಮುಟ್ಟಿದೆ. ಕೆಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಂಡುಬಂದ ದರ ಪರಿಷ್ಕರಣೆಯಲ್ಲಿ, ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು 18 ದಿನಗಳ ವಿರಾಮವನ್ನು ಕೊನೆಗೊಳಿಸಿ, ಮೇ 4ರ ಬಳಿಕ 23 ಬಾರಿ ಬೆಲೆ ಏರಿಕೆ ಮಾಡಿವೆ.
ಇಂದಿನ ಬೆಲೆ ಪರಿಷ್ಕರಣೆಯೊಂದಿಗೆ ಮುಂಬೈನಲ್ಲಿ ಈಗ ಒಂದು ಲೀಟರ್ ಪೆಟ್ರೋಲ್ ಬೆಲೆ 102.30 ರೂ. ಆಗಿದ್ದರೇ ಡೀಸೆಲ್ ಬೆಲೆ 94.39 ರೂ. ಎಂದು ಭಾರತೀಯ ಇಂಡಿಯನ್ ಆಯಿಲ್ ಕಾರ್ಪೊರೇಷನ್ ವೆಬ್‌ಸೈಟ್ ತಿಳಿಸಿದೆ. ದೇಶದ ಮೆಟ್ರೋ ನಗರಗಳ ಪೈಕಿ ಮುಂಬೈ ಮೇ 29ರಂದು ಮೊದಲ ಬಾರಿಗೆ ಪೆಟ್ರೋಲ್ ಅನ್ನು ಲೀಟರ್‌ಗೆ 100 ರೂ. ದರದಲ್ಲಿ ಮಾರಾಟ ಮಾಡಿದೆ.
ದೆಹಲಿಯಲ್ಲಿ ಇಂದು ಪೆಟ್ರೋಲ್ 96.12 ರೂ.ಗೆ ಮಾರಾಟವಾಗಿದ್ದರೆ, ಡೀಸೆಲ್ ಬೆಲೆ 86.98 ರೂ.ಯಷ್ಟಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ 97.43 ರೂ. ಮತ್ತು ಡೀಸೆಲ್ 91.64 ರೂ.ಯಷ್ಟಿದೆ. ಕೋಲ್ಕತ್ತಾದಲ್ಲಿ ದರ ಏರಿಕೆಯ ನಂತರ ಪೆಟ್ರೋಲ್ ಪ್ರತಿ ಲೀಟರ್‌ಗೆ 96.06 ರೂ. ಮತ್ತು ಡೀಸೆಲ್ ಲೀಟರ್‌ಗೆ 89.83 ರೂ. ಆಗಿದೆ.
ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಆರ್ಟಿಕಲ್ 370 ಮರು ಜಾರಿ: ಸಿಂಗ್ ಕ್ಲಬ್‌ಹೌಸ್ ಚಾಟ್ ಸೋರಿಕೆಗೆ ರಾಜಕೀಯ ಬಿರುಗಾಳಿ