ನವದೆಹಲಿ:ಇಂಧನ ಬೆಲೆಗಳಲ್ಲಿ ಒಂದು ದಿನದ ತಟಸ್ಥತೆಯ ನಂತರ ಮತ್ತೆ ಏರಿಕೆ ಕಂಡುಬಂದಿದೆ. ದೇಶದೆಲ್ಲೆಡೆ ಸರಾಸರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಒಂದು ಲೀಟರ್ಗೆ 25 ಪೈಸೆಯಿಂದ 28 ಪೈಸೆಗಳಷ್ಟು ಏರಿಕೆ ಕಂಡಿವೆ.
ಈ ಬೆಲೆ ಏರಿಕೆಯಿಂದಾಗಿ ಹಿಂದೆಂದೂ ತಲುಪಿರದ ಮಟ್ಟಿಗೆ ಇಂಧ ಬೆಲೆ ತಲುಪಿದೆ ಎಂದು ಸರ್ಕಾರದ ಒಡೆತನದ ಇಂಧನ ರಿಟೇಲರ್ ಉದ್ಯಮಗಳು ಮಾಹಿತಿ ನೀಡಿವೆ.
ಮುಂಬೈನಲ್ಲಿ ಸೋಮವಾರ ಒಂದು ಲೀಟರ್ ಪೆಟ್ರೋಲ್ ಬೆಲೆ 103.36ರಷ್ಟಿದ್ದು, ಈಗ 27 ಪೈಸೆ ಏರಿಕೆಯೊಂದಿಗೆ 103.63 ರೂಪಾಯಿಗೆ ತಲುಪಿದೆ. ಪೆಟ್ರೋಲ್ ಬೆಲೆ ಈ ಬೆಲೆಗೆ ಮುಟ್ಟಿರುವುದು ಇದೇ ಮೊದಲು. ಮೇ 29ರಂದು ಮುಂಬೈನಲ್ಲಿ ಪೆಟ್ರೋಲ್ ಬೆಲೆ ನೂರು ರೂಪಾಯಿ ತಲುಪಿತ್ತು.
ಡೀಸೆಲ್ ಬೆಲೆಯೂ 28 ಪೈಸೆ ಏರಿಕೆಯಾಗಿದ್ದು, ಮುಂಬೈನಲ್ಲಿ ಒಂದು ಲೀಟರ್ ಬೆಲೆ 95.72 ರೂಪಾಯಿಗೆ ತಲುಪಿದೆ. ಸೋಮವಾರ ಡಿಸೇಲ್ ಬೆಲೆ ಒಂದು ಲೀಟರ್ಗೆ 95.44 ರೂಪಾಯಿ ಆಗಿತ್ತು.
ಇದನ್ನೂ ಓದಿ:ಲಕ್ಷದ್ವೀಪ ಕರ್ನಾಟಕ ಹೈಕೋರ್ಟ್ ವ್ಯಾಪ್ತಿಗೆ ಒಳಪಡುತ್ತಾ? ಅಧಿಕಾರಿಗಳು ಹೇಳೋದೇನು?