ನವದೆಹಲಿ:ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾವತ್ತಾಗಿ ಉಳಿಸಿಕೊಂಡಿವೆ. ಕಳೆದ 12 ದಿನಗಳಿಂದ ಎರಡು ಇಂಧನಗಳ ಬೆಲೆ ಸ್ಥಿರವಾಗಿವೆ.
ಶನಿವಾರ ಆಟೋ ಇಂಧನಗಳ ಚಿಲ್ಲರೆ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ 83.71 ರೂ. ಮತ್ತು ಡೀಸೆಲ್ ಲೀಟರ್ 73.87 ರೂ.ನಲ್ಲಿ ಮಾರಾಟ ಆಗುತ್ತಿದೆ. ದೇಶಾದ್ಯಂತ ಹಲವು ನಗರಗಳಲ್ಲಿ ಸಹ ಈ ಹಿಂದಿನ ಬೆಲೆಗಳಲ್ಲಿ ಖರೀದಿ ಆಗುತ್ತಿದೆ.
ಕೊರೊನಾ ವೈರಸ್ ವಿರುದ್ಧ ಲಸಿಕೆಯ ಸಕರಾತ್ಮಕ ಫಲಿತಾಂಶಗಳ ಸುದ್ದಿ ಮತ್ತು ಬೇಡಿಕೆಯ ವೃದ್ಧಿಸುವ ನಿರೀಕ್ಷೆಯಿಂದಾಗಿ ಒಎಂಸಿಗಳು ತಮ್ಮ ತೈಲ ಉತ್ಪಾದನೆಗೆ ವಿರಾಮ ನೀಡಿವೆ. ಪ್ರತಿ ಬ್ಯಾರೆಲ್ ಕಚ್ಚಾ ತೈಲವು 50ರ ಗಡಿ ದಾಟಿ 52 ಡಾಲರ್ಗೆ ತಲುಪಿದೆ.
ಕರ್ನಾಟಕದಲ್ಲಿ ಕೇಂದ್ರ ಸರ್ಕಾರ 1.16 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿದೆ: ಗಡ್ಕರಿ ಘೋಷಣೆ
ಡಿಸೆಂಬರ್ 7ರಂದು ಪೆಟ್ರೋಲ್ ಬೆಲೆಯು ಪ್ರತಿ ಲೀಟರ್‌ಗೆ ಸಾರ್ವಕಾಲಿ ಗರಿಷ್ಠ 84 ರೂ. (2018ರ ಅಕ್ಟೋಬರ್ 4ರಂದು ಹಿಂದಿನ ಗರಿಷ್ಠ ದರ) ತಲುಪಲು ಡಿ.7ರಂದು 83.71 ರೂ.ಗೆ ನಿಂತಿದೆ. ಜಾಗತಿಕ ಕಚ್ಚಾ ಬೆಲೆಗಳು ಕಳೆದ ಒಂದು ತಿಂಗಳಲ್ಲಿ ಬ್ಯಾರೆಲ್‌ಗೆ ಸುಮಾರು 12 ಡಾಲರ್ನಷ್ಟು ಏರಿಕೆಯಾಗಿದ್ದು, ಈಗ ಬ್ಯಾರೆಲ್‌ಗೆ 52 ಡಾಲರ್ಗೆ ತಲುಪಿದೆ.
ಶನಿವಾರದ ವಿರಾಮದೊಂದಿಗೆ ಕಳೆದ 30 ದಿನಗಳಲ್ಲಿ 15 ಬಾರಿ ಇಂಧನ ಬೆಲೆ ಏರಿಕೆಯಾಗಿದ್ದು, ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 2.65 ರೂ. ಮತ್ತು ಡೀಸೆಲ್ ಲೀಟರ್ 3.41 ರೂ.ಯಷ್ಟು ಏರಿಕೆಯಾಗಿದೆ. ಈ ಮೊದಲು ಸೆಪ್ಟೆಂಬರ್ 22ರಿಂದ ಪೆಟ್ರೋಲ್ ಬೆಲೆ ಸ್ಥಿರವಾಗಿತ್ತು. ಅಕ್ಟೋಬರ್ 2ರಿಂದ ಡೀಸೆಲ್ ದರಗಳು ಬದಲಾಗಿಲ್ಲ. ಆದರೆ, ನವೆಂಬರ್ ಬಳಿಕ ಏರಿಕೆಯಾಗಲು ಪ್ರಾರಂಭಿಸಿತು. ಡಿಸೆಂಬರ್‌ನಲ್ಲಿ ಮತ್ತೆ ವಿರಾಮ ತೆಗೆದುಕೊಂಡಿದೆ.