ಮುಂಬೈ: ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಸತತ ಎರಡನೇ ದಿನ ಜೂನ್ 7ರಂದು ಪ್ರತಿ ಲೀಟರ್‌ಗೆ 27-28 ಪೈಸೆ ಹೆಚ್ಚಿಸಲಾಗಿದೆ ಎಂದು ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ತಿಳಿಸಿವೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಸೋಮವಾರ ಪ್ರತಿ ಲೀಟರ್‌ಗೆ ₹ 95 ದಾಟಿದ್ದು, ₹ 95.37ಯಲ್ಲಿ ಮಾರಾಟ ಆಗುತ್ತಿದೆ. ಡೀಸೆಲ್ ಬೆಲೆ ₹ 86.28 ಯಲ್ಲಿ ಖರೀದಿ ಆಗುತ್ತಿದೆ.
ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹ 101 ದಾಟಿದ್ದು, ಡೀಸೆಲ್ ಲೀಟರ್‌ಗೆ ₹ 93.64 ರಷ್ಟಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ₹ 97.92 ಯಲ್ಲಿ ಮಾರಾಟ ಆಗುತ್ತಿದ್ದರೆ ಡೀಸೆಲ್, ₹ 90.81 ಯಲ್ಲಿ ಖರೀದಿ ಆಗುತ್ತಿದೆ. ರಾಜ್ಯದ ಬಳ್ಳಾರಿ ಮತ್ತು ಶಿರಸಿಯಲ್ಲಿ ಪೆಟ್ರೋಲ್ ದರವು ಕ್ರಮವಾಗಿ ₹ 100.08 & ₹ 100.28 ಯಷ್ಟಾಗಿದೆ. ಇದು ರಾಜ್ಯದಲ್ಲೇ ₹ 100ಕ್ಕಿಂತ ಹೆಚ್ಚಾಗಿರುವುದು ಇದೇ ಮೊದಲು.