ನವದೆಹಲಿ: ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ 60 ಪೈಸೆ ಮತ್ತು ಪೆಟ್ರೋಲ್ ದರವನ್ನು 35 ಪೈಸೆ ಹೆಚ್ಚಿಸಿದ್ದು, ಡೀಸೆಲ್ ಬೆಲೆ ಭಾನುವಾರ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ.
ಕಳೆದ ಹದಿನೈದು ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಸತತವಾಗಿ ಏರಿಕೆಯಾಗುತ್ತಿದ್ದು, ಡೀಸೆಲ್ ಬೆಲೆ 8.88 ಮತ್ತು ಪೆಟ್ರೋಲ್ ಬೆಲೆ ಲೀಟರ್‌ಗೆ 7.97 ರೂ. ಹೆಚ್ಚಳವಾಗಿದೆ. ಇದು ವಾಹನ ಸವಾರಿಗೆ ತಲೆಬಿಸಿಯಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ದೆಹಲಿಯಲ್ಲಿ ಪೆಟ್ರೋಲ್‌ಗೆ ಈಗ ಪ್ರತಿ ಲೀಟರ್‌ಗೆ 78.88 ರೂ.ಗಳಿಂದ 79.23 ರೂಪಾಯಿಗೆ ಏರಿಕೆಯಾಗಿದ್ದು, ಡೀಸೆಲ್ ದರ 77.67 ರೂ.ಗಳಿಂದ 78.27 ರೂ.ಳಿಗೆ ನೆಗೆದಿದೆ.
ಪಟ್ರೋಲ್-ಡೀಸೆಲ್ ಬೆಲೆ ಏರಿಕೆ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಹೀಗಿವೆ...
- ನವದೆಹಲಿ:ಪೆಟ್ರೋಲ್ 79.23 ಮತ್ತು ಡೀಸೆಲ್ 78.27 ರೂ.
- ಮುಂಬೈ: ಪೆಟ್ರೋಲ್ 86.04 ಮತ್ತು ಡೀಸೆಲ್ 76.69 ರೂ.
- ಬೆಂಗಳೂರು: ಪೆಟ್ರೋಲ್ 81.81 ಮತ್ತು ಡೀಸೆಲ್ 74.43 ರೂ.
- ಚೆನ್ನೈ: ಪೆಟ್ರೋಲ್ 82.58 ಮತ್ತು ಡೀಸೆಲ್ 75.80 ರೂ.
- ಹೈದರಾಬಾದ್: ಪೆಟ್ರೋಲ್ 82.25 ಮತ್ತು ಡೀಸೆಲ್ 76.49 ರೂ.