ಕರ್ನಾಟಕ

karnataka

ETV Bharat / business

ಬಜೆಟ್​ ಘೋಷಣೆ ಇಂದಿನಿಂದ ಅನಷ್ಠಾನ.. ಪೆಟ್ರೋಲ್ ಬೆಲೆ 1.60 ರೂ, ಡೀಸೆಲ್ 1.59 ರೂ ಏರಿಕೆ - diesel price

ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ತಮ್ಮ ಬಜೆಟ್​​ನಲ್ಲಿ ಘೋಷಿಸಿದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿ‌ನ ಶೇ 3ರಷ್ಟು ಮಾರಾಟ ತೆರಿಗೆ ಹೆಚ್ಚಳ ಪ್ರಸ್ತಾಪ ಇಂದಿನಿಂದ ಜಾರಿಗೆ ಬಂದಿದೆ. 2020-21 ಆರ್ಥಿಕ ವರ್ಷ ಆರಂಭವಾಗಲಿದ್ದು, ಬಜೆಟ್​​ನಲ್ಲಿನ ಮಂಡನೆ ಅನ್ವಯವಾಗುತ್ತಿದೆ.

Petrol
ಪೆಟ್ರೋಲ್

By

Published : Apr 1, 2020, 5:00 PM IST

ಬೆಂಗಳೂರು:ರಾಜ್ಯದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಮಾರಾಟ ತೆರಿಗೆ ಮಂಗಳವಾರ ಮಧ್ಯರಾತ್ರಿಯಿಂದ ಹೆಚ್ಚಳವಾಗಿದೆ.

ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ತಮ್ಮ ಬಜೆಟ್​​ನಲ್ಲಿ ಘೋಷಿಸಿದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿ‌ನ ಶೇ 3ರಷ್ಟು ಮಾರಾಟ ತೆರಿಗೆ ಹೆಚ್ಚಳ ಪ್ರಸ್ತಾಪ ಇಂದಿನಿಂದ ಜಾರಿಗೆ ಬಂದಿದೆ. 2020-21 ಆರ್ಥಿಕ ವರ್ಷ ಆರಂಭವಾಗಲಿದ್ದು, ಬಜೆಟ್​​ನಲ್ಲಿನ ಮಂಡನೆ ಅನ್ವಯವಾಗುತ್ತಿದೆ.

ಇದರಿಂದ ಪೆಟ್ರೋಲ್‌ ದರ ರೂ. 1.60 ಮತ್ತು ಡೀಸೆಲ್‌ ದರ ರೂ 1.59 ಏರಿಕೆಯಾಗಲಿದೆ. ಆರ್ಥಿಕ ಸಂಕಷ್ಟದಿಂದ ತತ್ತರಿಸಿರುವ ಹಿನ್ನೆಲೆಯಲ್ಲಿ ಆದಾಯ ಹೆಚ್ಚಿಸಿಕೊಳ್ಳಲು ಮಾರಾಟ ದರ ಏರಿಕೆ ಮಾಡಲು ಸಿಎಂ ಮುಂದಾಗಿದ್ದಾರೆ. ಸರ್ಕಾರದ ಈ ಕ್ರಮದಿಂದ ಪೆಟ್ರೋಲ್‌ ಮೇಲಿನ ತೆರಿಗೆ ಶೇ 32 ರಿಂದ ಶೇ 35 ಕ್ಕೆ, ಡೀಸೆಲ್‌ ಮೇಲಿನ ತೆರಿಗೆ ಶೇ 21 ರಿಂದ ಶೇ 24ಕ್ಕೆ ಹೆಚ್ಚಳವಾಗಿದೆ.

ABOUT THE AUTHOR

...view details