ನವದೆಹಲಿ :ಕಳೆದಕೆಲವು ದಿನಗಳಿಂದ ಏರಿಕೆ ಆಗುತ್ತಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಗೆತೈಲ ಮಾರಾಟ ಕಂಪನಿಗಳು ತಾತ್ಕಾಲಿಕ ಬ್ರೇಕ್ ಹಾಕಿವೆ.
ಕಳೆದ ವಾರದಲ್ಲಿ ವಾಹನ ಇಂಧನ ಬೆಲೆಯಲ್ಲಿ ಅವಿರತ ಏರಿಕೆಗೆ ವಿರಾಮ ಸಿಕ್ಕಿದ್ದು, ಗ್ರಾಹಕರು ತುಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ದೆಹಲಿಯಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 72.42 ರಷ್ಟಿದ್ದರೆ, ಪೆಟ್ರೋಲ್ ಬೆಲೆ ಬದಲಾಗದೆ ಲೀಟರ್‌ಗೆ 82.34 ರೂ.ಯಲ್ಲಿ ಮಾರಾಟ ಆಗುತ್ತಿದೆ. ದೇಶದ ಇತರ ನಗರಗಳಲ್ಲಿಯೂ ಭಾನುವಾರದ ಮಟ್ಟದಲ್ಲಿಯೇ ಮುಂದುವರಿದಿದೆ.
ತೈಲ ಮಾರುಕಟ್ಟೆ ಕಂಪನಿಗಳು ಭಾನುವಾರ ಪೆಟ್ರೋಲ್ ಬೆಲೆಯನ್ನು 21 ಪೈಸೆ ಮತ್ತು ಡೀಸೆಲ್ ಬೆಲೆಯನ್ನು ಲೀಟರಿಗೆ 29 ಪೈಸೆ ಹೆಚ್ಚಿಸಿದವು. ಇದಕ್ಕೂ ಮುನ್ನ ನವೆಂಬರ್ 20ರಿಂದ ಪ್ರಾರಂಭವಾದ ಬೆಲೆ ಹೆಚ್ಚಳವು ಕಳೆದ 10 ದಿನಗಳಲ್ಲಿ ಒಂಬತ್ತು ಬಾರಿ ಏರಿಕೆ ಕಂಡಿದೆ.
ಭಾರತ್ ಬಯೋಟೆಕ್ನ ಬಿಎಸ್‌ಎಲ್ -3 ರಲ್ಲಿ ಸಿದ್ಧವಾಗ್ತಿದೆ 'ಕೋವ್ಯಾಕ್ಸಿನ್'
ಕಳೆದ 10 ದಿನಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 1.28 ರೂ. ಮತ್ತು ಡೀಸೆಲ್ ಲೀಟರ್‌ಗೆ 1.96 ರೂ. ಏರಿಕೆಯಾಯಿತು. ಇದಕ್ಕೆ ಇಂಬು ನೀಡಿದ್ದು, ಕೊರೊನಾ ವೈರಸ್ ಲಸಿಕೆಯ ಸಕಾರಾತ್ಮಕ ಫಲಿತಾಂಶ ಸುದ್ದಿ ಹೊರಬಿತ್ತು. ಈ ನಂತರ ಜಾಗತಿಕ ತೈಲ ಮತ್ತು ಉತ್ಪನ್ನದ ಬೆಲೆಗಳು ಹೆಚ್ಚಳದತ್ತ ಮುಖಮಾಡಿದವು.