ನವದೆಹಲಿ:ದೇಶದಲ್ಲಿ ಉಂಟಾಗಿರುವ ಆರ್ಥಿಕ ಹಿಂಜರಿತದಿಂದಾಗಿ ಕೈಗಾರಿಕೋದ್ಯಮಕ್ಕೆ ನೇರ ಪರಿಣಾಮ ಬೀರಿದೆ. ಅದರ ಬಿಸಿ ದೇಶದ ಪ್ರಮುಖ 8 ಕೈಗಾರಿಕಾ ವಲಯಗಳಿಗೂ ತಗುಲಿದ್ದು, 2018ರ ಜುಲೈನಲ್ಲಿ ಶೇ 7.3ರಷ್ಟಿದ್ದ ಕೈಗಾರಿಕೋದ್ಯಮದ ಬೆಳವಣಿಗೆ ಪ್ರಮಾಣ 2019ರ ಜುಲೈಗೆ ಶೇ.2.1ಕ್ಕೆ ಕುಸಿದಿದೆ.
ವಿದೇಶಗಳು ಸೇರಿದಂತೆ ಇತರೆ ಎಲ್ಲ ಕೈಗಾರಿಕೆಗಳಿಗೆ ಬೆನ್ನೆಲುಬಾಗಿದ್ದ ಈ ನಿರ್ದಿಷ್ಟ ಉದ್ಯಮಕ್ಕೆ ಭಾರಿ ಆತಂಕ ಎದುರಾಗಿದೆ.
ಜಿಎಸ್ಟಿ ಹಾಗೂ ನೋಟು ಅಮಾನ್ಯೀಕರಣದಿಂದಾಗಿ ಕೈಗಾರಿಕೆಗಳ ವಲಯದ ಬೆಳವಣಿಗೆಗೆ ತೊಡಕಾಗಿದೆ. ಈ ಕೈಗಾರಿಕೆಗಳನ್ನು ಆರ್ಥಿಕತೆಯ ಮುಖ್ಯ ಕೈಗಾರಿಕೆಗಳೆಂದೇ ವ್ಯಾಖ್ಯಾನಿಸಬಹುದು. ಪ್ರಮುಖ ಎಂಟು ಕೈಗಾರಿಕಾ ವಲಯಗಳಿಗಳ ಬೆಳವಣಿಗೆ ಪ್ರಮಾಣ ಕುಸಿತ ಕಂಡಿರುವ ಪರಿಣಾಮ ಸರಕು-ಸಾಗಾಟದ ವಹಿವಾಟು ಇಳಿದಿದೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ....ಆರ್ಥಿಕ ಹಿಂಜರಿತಕ್ಕೆ ಆಟೋಮೊಬೈಲ್ ಕ್ಷೇತ್ರದಲ್ಲಿ ತಲ್ಲಣ... ಅಂಕಿ-ಅಂಶಕ್ಕೆ ಗಾಬರಿಯಾದ ದಿಗ್ಗಜ ಕಂಪನಿಗಳು!
8 ಕೈಗಾರಿಕೆಗಳು: ವಿದ್ಯುತ್, ಉಕ್ಕು, ಸಂಸ್ಕರಿಸಿದ ಉತ್ಪನ್ನ, ಕಚ್ಚಾತೈಲ, ಕಲ್ಲಿದ್ದಲು, ಸಿಮೆಂಟ್, ನೈಸರ್ಗಿಕ ಅನಿಲ ಮತ್ತು ರಸಗೊಬ್ಬರ ಕೈಗಾರಿಕಾ ವಲಯಗಳಲ್ಲಿ ಪ್ರಗತಿಯ ವೇಗ ಕಡಿಮೆಯಾಗಿದೆ. ಅಲ್ಲದೆ, ಉದ್ಯೋಗಿಗಳು ತಮ್ಮ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈಗಾಗಲೇ ಆಟೋ ಮೊಬೈಲ್ ಕ್ಷೇತ್ರದ ವಹಿವಾಟು ತೀವ್ರವಾಗಿ ಕ್ಷೀಣಿಸಿರುವುದು ಎಲ್ಲರನ್ನೂ ಗಾಬರಿಗೊಳಿಸಿದೆ.
ಜಿಎಸ್ಟಿ ಮತ್ತು ನೋಟು ಅಮಾನ್ಯೀಕರಣ ಅವೈಜ್ಞಾನಿಕ ಜಾರಿಯೇ ಇದಕ್ಕೆಲ್ಲಾ ಕಾರಣವೆಂದು ಆರ್ಥಿಕ ತಜ್ಞರು ಬೊಟ್ಟು ಮಾಡುತ್ತಿದ್ದಾರೆ. ಆರ್ಥಿಕ ಸಂಕಷ್ಟದಿಂದಾಗಿ ನಲುಗುತ್ತಿರುವ ಕೈಗಾರಿಕೆಗಳಲ್ಲಿ ಲಕ್ಷಾಂತರ ಉದ್ಯೋಗಿಗಳು ಬೀದಿ ಪಾಲಾಗುತ್ತಿದ್ದಾರೆ.