ಕರ್ನಾಟಕ

karnataka

ETV Bharat / business

ಕಾರು, ಬೈಕ್​ಗಳ ಮಾರಾಟ ಕುಸಿತ: ಕಡಿಮೆ ಆಗುತ್ತಾ ಬೆಲೆ? -

ದೇಶಿಯ ಕಾರು ಮಾರಾಟದಲ್ಲಿ ಶೇ 24.97ರಷ್ಟು ಇಳಿಕೆಯಾಗಿದ್ದು, 2018ರ ಜೂನ್​ನಲ್ಲಿನ 1,83,885 ಯೂನಿಟ್​ಗಳಿಗೆ ಪ್ರತಿಯಾಗಿ 1,39,628 ಕಾರುಗಳು ಮಾರಾಟವಾಗಿವೆ ಎಂದು ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ (ಎಸ್​ಐಎಎಂ) ಇತ್ತೀಚಿನ ಅಂಕಿಅಂಶಗಳ ಮುಕೇನ ತಿಳಿಸಿದೆ.

ಸಾಂದರ್ಭಿಕ ಚಿತ್ರ

By

Published : Jul 10, 2019, 8:08 PM IST

ನವದೆಹಲಿ:ದೇಶಿಯ ಪ್ರಯಾಣಿಕ ವಾಹನಗಳ (ಪಿವಿ) ಮಾರಾಟದಲ್ಲಿ ಶೇ 17.54ರಷ್ಟು ಇಳಿಕೆಯಾಗಿದ್ದು, ಕಳೆದ ಜೂನ್​ ವೇಳೆ 2,73,748 ವಾಹನಗಳು ಮಾರಾಟ ಆಗಿದ್ದರೆ ಈ ವರ್ಷ ಇದೇ ಅವಧಿಯಲ್ಲಿ 2,25,732 ವಾಹನಗಳು ಬಿಕರಿಯಾಗಿವೆ.

ದೇಶಿಯ ಕಾರು ಮಾರಾಟದಲ್ಲಿ ಶೇ 24.97ರಷ್ಟು ಇಳಿಕೆಯಾಗಿದ್ದು, 2018ರ ಜೂನ್​ನಲ್ಲಿನ 1,83,885 ಯೂನಿಟ್​ಗಳಿಗೆ ಪ್ರತಿಯಾಗಿ 1,39,628 ಕಾರುಗಳು ಮಾರಾಟವಾಗಿವೆ ಎಂದು ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ (ಎಸ್​ಐಎಎಂ) ಇತ್ತೀಚಿನ ಅಂಕಿಅಂಶಗಳ ಮುಕೇನ ತಿಳಿಸಿದೆ.

ಮೋಟಾರ್ ​ಸೈಕಲ್​ ಮಾರಾಟದಲ್ಲಿ ಕೂಡ ಶೇ 9.57ರಷ್ಟು ಕುಸಿತ ಕಂಡಿದ್ದು, 10,84,598 ಯೂನಿಟ್​ಗಳು ಮಾತ್ರವೇ ಖರೀದಿಯಾಗಿವೆ. ಕಳೆದ ವರ್ಷ ಇದೇ ವೇಳೆ 11,99,332 ದ್ವಿಚಕ್ರ ವಾಹನಗಳು ಮಾರಾಟ ಆಗಿದ್ದವು. 'ವಾಹನಗಳಿಗೆ ಗ್ರಾಹಕರಿಂದ ಬೇಡಿಕೆ ಇಲ್ಲದ ಕಾರಣ ಮಾರಾಟ ಪ್ರಗತಿಯಲ್ಲಿ ಕುಸಿತ ಕಾಣುತ್ತಿದೆ' ಎಂದು ಹೇಳಲಾಗುತ್ತಿದೆ.

ವಾಣಿಜ್ಯ ವಾಹನಗಳ ಮಾರಾಟ ಸಹ ಶೇ 12.34ರಷ್ಟು ಕ್ಷೀಣಿಸಿದ್ದು, ಕಳೆದ ವರ್ಷದಲ್ಲಿ 22,79,186 ಯೂನಿಟ್​ಗಳು ಬಿಕರಿ ಆಗಿದ್ದರೇ ಈ ವರ್ಷ 19,97,952 ವಾಹನಗಳು ಮಾರಾಟ ಆಗಿವೆ ಎಂದು ಎಸ್ ಐಎಎಂ ಹೇಳಿದೆ.

For All Latest Updates

TAGGED:

ABOUT THE AUTHOR

...view details