ನವದೆಹಲಿ: ಮಲೇಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿರುವ ಸಂಸ್ಕರಿಸಿದ ಪಾಮ್ ಆಯಿಲ್ ಸಾಗಾಣೆಯ ಸುಂಕದ ಏರಿಕೆಯು ದೇಶೀಯ ಅಡುಗೆ ಎಣ್ಣೆ ಉದ್ಯಮದ ಮೇಲೆ ಪರಿಣಾಮ ಬೀರಲಿದೆ ಎಂಬ ಕಳವಳ ವ್ಯಕ್ತವಾಗುತ್ತಿದೆ.
ವಿಶ್ವದಲ್ಲಿ ಅತಿ ಹೆಚ್ಚಾಗಿ ಖಾದ್ಯ ತೈಲ ಆಮದುದಾರ ರಾಷ್ಟ್ರವಾದ ಭಾರತಕ್ಕೆ ಮಲೇಷ್ಯಾ, 2019ರ ಮೊದಲಾರ್ಧದಲ್ಲಿ ಶೇ 27ರಷ್ಟು ರಫ್ತು ಏರಿಕೆಯಾಗಿದ್ದು, ತೈಲದ ಪ್ರಮಾಣ 1.57 ದಶಲಕ್ಷ ಟನ್‌ಗೆ ತಲುಪಿದೆ.
ಎಂಪಿಒಬಿ ಅಧ್ಯಕ್ಷ ಮೊಹಮ್ಮದ್ ಬಕೆ ಸಲ್ಲೆಹ್ ಅವರು ಕಳೆದ ತಿಂಗಳು ಭಾರತಕ್ಕೆ ರಫ್ತಾಗುವಪಾಮ್ ಎಣ್ಣೆಯ ಮೇಲಿನ ಸುಂಕ ಏರಿಕೆ ಮಾಡಿದ್ದು, ದೇಶಿ ಮಾರುಕಟ್ಟೆಗೆ ಬೆಲೆ ಹೆಚ್ಚಳವಾಗಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಭಾರತ ಜನವರಿಯಲ್ಲಿ ಸಂಸ್ಕರಿಸಿದ ಪಾಮ್ ಆಯಿಲ್ ಸಾಗಣೆಯ ಮೇಲಿನ ಆಮದು ಸುಂಕವನ್ನು ಶೇ 54 ರಿಂದ 50ಕ್ಕೆ ಇಳಿಸಿತು. ದಶಕದ ಹಿಂದೆ ಉಭಯ ರಾಷ್ಟ್ರಗಳು ಮಾಡಿಕೊಂಡ ಒಪ್ಪಂದಗಳು ಪರಿಷ್ಕೃತವಾಗದೆ ಯಥಾವತ್ತಾಗಿ ಮುಂದುವರೆಯುತ್ತಿವೆ. ಹಳೆಯ ಕರಾರಿನಡಿ ನಡೆಯುತ್ತಿರುವ ವಾಣಿಜ್ಯ ವಹಿವಾಟುಗಳು ಅಡುಗೆ ಎಣ್ಣೆ ಏರಿಕೆಗೆ ಕಾರಣವಾಗಲಿವೆ ಎನ್ನಲಾಗುತ್ತಿದೆ.