ಕರ್ನಾಟಕ

karnataka

ETV Bharat / business

ಅತಿಯಾದ ನಿಯಂತ್ರಣದ ಗುದ್ದು: ಬೈಕ್​ಗಳ ಬೆಲೆಯಲ್ಲಿ ಭಯಂಕರ ಏರಿಕೆ! - Bike Market

ಚೇತಕ್ ಸ್ಕೂಟರ್‌ನ ನೂತನ ಎಲೆಕ್ಟ್ರಾನಿಕ್​ ಆವೃತ್ತಿ ವಾಹನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಜಾಜ್ ಆಟೋ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್, ಅತಿಯಾದ ನಿಯಂತ್ರಿತ ಮಾರುಕಟ್ಟೆಯು ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಿಸಲಿದ್ದು, ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ ಶೇ 30ರಷ್ಟು ಹೆಚ್ಚಾಗಲಿದೆ ಎಂದರು.

Bik
ಬೈಕ್

By

Published : Jan 14, 2020, 10:10 PM IST

ಮುಂಬೈ: ಅತಿಯಾದ ನಿಯಂತ್ರಿತ ಮಾರುಕಟ್ಟೆಯು ದ್ವಿಚಕ್ರ ವಾಹನಗಳ ಬೆಲೆಯನ್ನು ಹೆಚ್ಚಿಸಲಿದ್ದು, ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ ಶೇ 30ರಷ್ಟು ಹೆಚ್ಚಾಗಲಿದೆ ಎಂದು ಬಜಾಜ್ ಆಟೋ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ಭವಿಷ್ಯ ನುಡಿದಿದ್ದಾರೆ.

ಚೇತಕ್ ಸ್ಕೂಟರ್‌ನ ನೂತನ ಎಲೆಕ್ಟ್ರಾನಿಕ್​ ಆವೃತ್ತಿ ವಾಹನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಜಾಜ್​ ಕೂಡ ಜಿಎಸ್‌ಟಿ ದರ ಕಡಿಮೆ ಮಾಡಲು ಸಹ ಮುಂದಾಗಿದೆ. ಮಾರುಕಟ್ಟೆಯು ಅತಿಯಾಗಿ ನಿಯಂತ್ರಿಸಲ್ಪಟ್ಟಿದ್ದು, ಇದು ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದರು.

ವಾಹನಗಳ ನೂತನ ಹೊಗೆ ಹೊರಸೂಸುವಿಕೆ ಮಾನದಂಡಗಳ ಅನುಷ್ಠಾನದ ಪರಿಣಾಮದ ಬಗ್ಗೆ ಮಾತನಾಡಿದ ಅವರು, ಬಿಎಸ್-VI ವಾಹನಗಳಿಗೆ ಹೋಲಿಸಿದರೆ ಬಿಎಸ್- IV ಮಾದರಿಗಳು ಹೆಚ್ಚಿನ ಬೆಲೆಯನ್ನು ಹೊಂದಿರಲಿವೆ ಎಂದರು.

ಎಲೆಕ್ಟ್ರಿಕ್ ವಾಹನಗಳ ಮೇಲೆ ಸರ್ಕಾರ ಶೇ 5ರಷ್ಟು ಜಿಎಸ್‌ಟಿ ಘೋಷಿಸಿದರೂ ಉಗಿ ಎಂಜಿನ್ ಹೊಂದಿರುವ ವಾಹನಗಳು ಶೇ 28ರಷ್ಟು ಆಕರ್ಷಣೆಯನ್ನು ಈಗಲೂ ಹೊಂದಿವೆ. ಭವಿಷ್ಯದಲ್ಲಿ ಅದನ್ನು ಶೇ 18ಕ್ಕೆ ಇಳಿಸಲಾಗುವುದು. ಉದ್ಯಮವು ಎದುರಿಸುತ್ತಿರುವ ಪ್ರಸ್ತುತ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಮುಂಬರುವ ಕೇಂದ್ರ ಬಜೆಟ್​ನಲ್ಲಿ ಹೆಚ್ಚಿನ ನಿರೀಕ್ಷೆ ಇಲ್ಲ ಎಂದು ಹೇಳಿದರು.

ABOUT THE AUTHOR

...view details