ಕರ್ನಾಟಕ

karnataka

ETV Bharat / business

ಪೆಟ್ರೋಲ್​, ಡೀಸೆಲ್​ ಏರಿಕೆ ಸಂಕಷ್ಟದಲ್ಲಿದ್ದ ಜನಸಾಮಾನ್ಯರಿಗೆ ಮತ್ತೊಂದು ಶಾಕ್​ ಕೊಟ್ಟ ಒಪೆಕ್​! - ತೈಲ ಉತ್ಪಾದನೆ ಕಡಿದ

ಅನೇಕ ವಿಶ್ಲೇಷಕರು ಸಣ್ಣ ಪ್ರಮಾಣ ಉತ್ಪಾದನಾ ಹೆಚ್ಚಳ ನಿರೀಕ್ಷಿಸಿದ್ದರು. ಉತ್ಪಾದನೆಯನ್ನು ಹೆಚ್ಚಿಸದಿರುವ ನಿರ್ಧಾರವು ಕಚ್ಚಾ ತೈಲ ಬೆಲೆಗಳನ್ನು ಶೀಘ್ರವಾಗಿ ಹೆಚ್ಚಾಗಲಿದೆ. ವ್ಯವಹಾರಗಳ ಮೇಲಿನ ಸಾಂಕ್ರಾಮಿಕ ನಿರ್ಬಂಧಗಳು ಬೇಡಿಕೆ ಸಾಮರ್ಥ್ಯವನ್ನು ಧ್ವಂಸಗೊಳಿಸಿತ್ತು. ಕಳೆದ ವರ್ಷ ಕುಸಿದಿದ್ದ ಯುಎಸ್ ಒಪ್ಪಂದವು ಗುರುವಾರದಂದು ಶೇ 5.6ರಷ್ಟು ಹೆಚ್ಚಳವಾಗಿ ಬ್ಯಾರೆಲ್‌ಗೆ 64.70 ಡಾಲರ್‌ಗೆ ತಲುಪಿದೆ.

oil production
oil production

By

Published : Mar 5, 2021, 7:53 AM IST

ಫ್ರಾಂಕ್‌ಫರ್ಟ್: ಕೊರೊನಾ ವೈರಸ್ ರೂಪಾಂತರ ಹಬ್ಬುವಿಕೆಯು ಆರ್ಥಿಕ ದೌರ್ಬಲ್ಯದ ಬಗ್ಗೆ ಕಳವಳ ಹೆಚ್ಚುತ್ತಿರುವುದರಿಂದ ತೈಲ ಉತ್ಪಾದನೆ ಮತ್ತು ರಫ್ತು ಮಾಡುವ ದೇಶಗಳ ಒಕ್ಕೂಟ (ಒಪೆಕ್‌) ಮತ್ತು ಮಿತ್ರ ರಾಷ್ಟ್ರಗಳ ಸದಸ್ಯರು ತಮ್ಮ ಈಗಿನ ಉತ್ಪಾದನಾ ಪ್ರಮಾಣದಲ್ಲೇ ಇರಿಸಿಕೊಳ್ಳಲು ನಿರ್ಧರಿಸಿವೆ.

ಸೌದಿ ಅರೇಬಿಯಾ ನೇತೃತ್ವದ ಒಪೆಕ್ ರಾಷ್ಟ್ರಗಳು ರಷ್ಯಾ ನೇತೃತ್ವದ ಸದಸ್ಯರಲ್ಲದವರೊಂದಿಗೆ ಗುರುವಾರ ಆನ್‌ಲೈನ್ ಸಭೆಯಲ್ಲಿ ಈ ಒಪ್ಪಂದ ಮಾಡಿಕೊಂಡವು. ಸೌದಿ ಅರೇಬಿಯಾದಿಂದ ಸ್ವಯಂಪ್ರೇರಿತ ಕಡಿತದಲ್ಲಿ ದಿನಕ್ಕೆ ಒಂದು ಮಿಲಿಯನ್ ಬ್ಯಾರೆಲ್‌ ಕನಿಷ್ಠ ಏಪ್ರಿಲ್ ವರೆಗೆ ಇರಲಿದೆ.

ಇದನ್ನೂ ಓದಿ: 'ನೀಲಿ ಆರ್ಥಿಕ ಕರಡು' ವಿರುದ್ಧ ಮೀನುಗಾರರ ಆಕ್ರೋಶ ಸ್ಫೋಟ!

ಅನೇಕ ವಿಶ್ಲೇಷಕರು ಸಣ್ಣ ಪ್ರಮಾಣ ಉತ್ಪಾದನಾ ಹೆಚ್ಚಳ ನಿರೀಕ್ಷಿಸಿದ್ದರು. ಉತ್ಪಾದನೆ ಹೆಚ್ಚಿಸದಿರುವ ನಿರ್ಧಾರವು ಕಚ್ಚಾ ತೈಲ ಬೆಲೆಗಳನ್ನು ಶೀಘ್ರವಾಗಿ ಹೆಚ್ಚಾಗಲಿದೆ. ವ್ಯವಹಾರಗಳ ಮೇಲಿನ ಸಾಂಕ್ರಾಮಿಕ ನಿರ್ಬಂಧಗಳು ಬೇಡಿಕೆ ಸಾಮರ್ಥ್ಯ ಧ್ವಂಸಗೊಳಿಸಿತ್ತು. ಕಳೆದ ವರ್ಷ ಕುಸಿದಿದ್ದ ಯುಎಸ್ ಒಪ್ಪಂದವು ಗುರುವಾರದಂದು ಶೇ 5.6ರಷ್ಟು ಹೆಚ್ಚಳವಾಗಿ ಬ್ಯಾರೆಲ್‌ಗೆ 64.70 ಡಾಲರ್‌ಗೆ ತಲುಪಿದೆ.

ABOUT THE AUTHOR

...view details