ಕರ್ನಾಟಕ

karnataka

ETV Bharat / business

ಕೋವಿಡ್ ಎಫೆಕ್ಟ್​​: ಇ-ಕಾಮರ್ಸ್​ನಲ್ಲಿ ಶೇಕಡಾ 30 - 40ರಷ್ಟು ಬೆಳವಣಿಗೆ - ಆನ್‌ಲೈನ್ ಶಾಪಿಂಗ್‌

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಶಾಪಿಂಗ್‌ ಕಡೆ ಗ್ರಾಹಕರು ಒಲವು ತೋರುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ವರ್ಷ ಇ - ಕಾಮರ್ಸ್​ನಲ್ಲಿ ಶೇಕಡಾ 30 - 40ರಷ್ಟು ಬೆಳವಣಿಗೆ ಕಂಡು ಬಂದಿದೆ.

Online sales growth
Online sales growth

By

Published : Nov 26, 2020, 3:30 PM IST

ನವದೆಹಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇ - ಕಾಮರ್ಸ್​ನಲ್ಲಿ ಶೇಕಡಾ 30-40ರಷ್ಟು ಬೆಳವಣಿಗೆ ಕಂಡು ಬಂದಿದೆ.

ಹಣಕಾಸು ಸೇವೆಗಳ ಮುಖ್ಯಸ್ಥ ಬರ್ನ್‌ಸ್ಟೈನ್ ನೀಡಿದ ವರದಿ ಪ್ರಕಾರ, ಕೋವಿಡ್ ಪ್ರಭಾವದಿಂದಾಗಿ ಆನ್‌ಲೈನ್ ಮಾರಾಟದಲ್ಲಿ ಹೆಚ್ಚಿನ ಬೆಳವಣಿಗೆಯನ್ನು ನಾವು ನಿರೀಕ್ಷಿಸಿದ್ದೆವು. ಈ ವರ್ಷ ಹಬ್ಬದ ವೇಳೆ ಇ - ಕಾಮರ್ಸ್​ನಲ್ಲಿ ಶೇಕಡಾ 30-40ರಷ್ಟು ಬೆಳವಣಿಗೆ ಕಂಡು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಿನ ಬದಲಾವಣೆ ಕಾಣಬಹುದು ಎಂದಿದ್ದಾರೆ.

ಇ - ಕಾಮರ್ಸ್‌ ಉಡುಪುಗಳು, ಪಾದರಕ್ಷೆಗಳು ಮತ್ತು ಕ್ರೀಡಾ ಉಡುಪುಗಳು ಸೇರಿದಂತೆ ಅತಿದೊಡ್ಡ ವಿಭಾಗವಾಗಿ ಮುಂದುವರೆದಿದೆ. ಈ ವರ್ಷ ಕೊರೊನಾ ವೈರಸ್ ಮತ್ತು ಲಾಕ್​ಡೌನ್​ ಹಿನ್ನೆಲೆ ಅರ್ಥಿಕ ಕ್ಷೇತ್ರದಲ್ಲಿ ಭಾರೀ ನಷ್ಟ ಉಂಟಾಗಿದೆ. ಆದ್ರೆ ಇ - ಕಾಮರ್ಸ್​ನಲ್ಲಿ ದೀಪವಾಳಿ ಹಬ್ಬದ ವೇಳೆ ಬಹುತೇಕ ಗೃಹಬಳಕೆ ವಸ್ತುಗಳಾದ (ಟಿವಿ, ಎಸಿ, ವಾಷಿಂಗ್ ಮಷಿನ್) ಖರೀದಿ ಪ್ರಮಾಣದಲ್ಲಿ ಏರಿಕೆಯಾಗಿದೆ.

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಶಾಪಿಂಗ್‌ ಕಡೆ ಗ್ರಾಹಕರು ಒಲವು ತೋರುತ್ತಿದ್ದಾರೆ. ಜೊತೆಗೆ ಇ - ಕಾಮರ್ಸ್​ ಕಂಪನಿಗಳು ಸಹ ಉತ್ತಮ ಆಫರ್​ಗಳನ್ನು ನೀಡುತ್ತಿದ್ದು ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ.

ABOUT THE AUTHOR

...view details