ನವದೆಹಲಿ: ಈರುಳ್ಳಿ ಮತ್ತು ಟೊಮೇಟೊ ದರ ಏರಿಕೆಯ ಕಾವು ಇಳಿಯುವ ಮೊದಲೇ ರಾಷ್ಟ್ರ ರಾಜಧಾನಿ ದೆಹಲಿ ಮಾರುಕಟ್ಟೆಗಳಲ್ಲಿ ಮತ್ತೆ ಬೆಲೆ ಏರಿಕೆಯಾಗಿದೆ.
ದೆಹಲಿಯ ಪ್ರಮುಖ ಮಂಡಿಗಳಲ್ಲಿ ಕೆ.ಜಿ ಈರುಳ್ಳಿ ಮತ್ತು ಟೊಮ್ಯಾಟೊ ದರವು70 ರೂ. ಆಸುಪಾಸಿನಲ್ಲಿ ಮಾರಾಟ ಆಗುತ್ತಿದೆ. ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ (ಎನ್ಸಿಆರ್) ಈರುಳ್ಳಿ 55 ರೂ. ಹಾಗೂ ಟೊಮೇಟೊ 53 ರೂ.ಗೆ ಖರೀದಿ ಆಗುತ್ತಿದೆ ಎಂದು ಗ್ರಾಹಕರ ವ್ಯವಹಾರಗಳ ಸಚಿವಾಲಯ ತನ್ನ ಅಂಕಿ -ಅಂಶಗಳ ಮೂಲಕ ಹೇಳಿದೆ.
ಸರ್ಕಾರಿ ಸ್ವಾಮ್ಯದ ಮದರ್ ಡೈರಿಯ ಸಫಾಲ್ ಮಳಿಗೆಗಳು, ಸಹಕಾರಿ ಸಂಸ್ಥೆಗಳಾದ ನಾಫೆಡ್ ಮತ್ತು ಎನ್ಸಿಸಿಎಫ್ಗಳಿಗೆ ಸರ್ಕಾರ ದಾಸ್ತುನು ಹೆಚ್ಚಿಸಿದ್ದರೂ ಒಂದೇ ತಿಂಗಳಲ್ಲಿ ಮತ್ತೆ ದರ ಏರಿಕೆ ಆಗಿದೆ. ಕೇಂದ್ರವು ಈ ಹಿಂದೆ ಈರುಳ್ಳಿ ದಾಸ್ತಾನಿಗೆ ನಿಯಂತ್ರಣ ಹೇರಿ ರಫ್ತಿಗೆ ಕಡಿವಾಣ ಹಾಕಿತ್ತು. ಆದರೂ ಬೆಲೆಯಲ್ಲಿ ಇಳಿಕೆ ಕಂಡುಬಂದಿಲ್ಲ.
ಹೆಚ್ಚುತ್ತಿರುವ ಬೆಲೆಯಿಂದ ಗ್ರಾಹಕರ ಹಿತಕಾಪಾಡಲು ಸರ್ಕಾರಿ ಸ್ವಾಮ್ಯದ ಸಫಲ್ ತನ್ನ 400 ಮಳಿಗೆಗಳಲ್ಲಿ ಕೆ.ಜಿ ಈರುಳ್ಳಿ ಮತ್ತು ಟೊಮೇಟೊ ₹ 23.90 ಹಾಗೂ ₹ 55 ದರದಲ್ಲಿ ಮಾರಾಟ ಮಾಡುತ್ತಿದೆ