ನಾಸಿಕ್: ಮಹಾರಾಷ್ಟ್ರದ ನಾಸಿಕ್ನಲ್ಲಿರುವ ಕಲ್ವಾನ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಸಗಟು ಈರುಳ್ಳಿ ದರದಲ್ಲಿ ದಾಖಲೆಯ ಪ್ರಮಾಣದಲ್ಲಿ ಏರಿಕೆ ಆಗಿದೆ. ಕ್ವಿಂಟಲ್ ಈರುಳ್ಳಿಯು ₹11,000 ಮಾರಾಟ ಆಗುತ್ತಿದ್ದು, ಕಳೆದ ತಿಂಗಳಲ್ಲಿನ ₹9,000 ದಾಖಲೆಯನ್ನು ಅಳಿಸಿ ಹಾಕಿದೆ.
ಈರುಳ್ಳಿ ಬೆಲೆ ಏರುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೇಂದ್ರವು ವ್ಯಾಪಾರಿಗಳ ಮೇಲೆ ಸ್ಟಾಕ್ ಮಿತಿಗಳನ್ನು ಹೇರಲು ಮತ್ತು ಹೋರ್ಡಿಂಗ್ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಎಲ್ಲ ರಾಜ್ಯಗಳಿಗೆ ಸೂಚಿಸಿದೆ.
ತರಕಾರಿ ಉತ್ಪಾದಕ ಪ್ರಮುಖ ಪ್ರದೇಶವಾದ ನಾಸಿಕ್ ಜಿಲ್ಲೆಯ ಎಪಿಎಂಸಿಯಲ್ಲಿ ಡಿಸೆಂಬರ್ನ ಮೊದಲ ವ್ಯಾಪಾರ ದಿನ ಮತ್ತು ಬೇಸಿಗೆ ಋತುವಿನಲ್ಲಿನ ಈರುಳ್ಳಿ ಅತಿ ಹೆಚ್ಚು ಉತ್ಪಾದನೆ ಆಗಿದೆ ಎಂದು ಎಪಿಎಂಸಿ ಮೂಲಗಳು ಹೇಳಿವೆ.ಈರುಳ್ಳಿಯ ಸಗಟು ಹರಾಜು ಬೆಲೆ ಕಳೆದ ತಿಂಗಳು ಕಲ್ವಾನ್ ಎಪಿಎಂಸಿಯಲ್ಲಿ ಪ್ರತಿ ಕ್ವಿಂಟಲ್‌ಗೆ 9,000 ರೂ. ದಾಖಲಾಗಿತ್ತು. ಬೇಸಿಗೆ ಋತುವಿನಲ್ಲಿ ಪ್ರತಿ ಕ್ವಿಂಟಲ್ ಕನಿಷ್ಠ ₹4,000ದಿಂದ ಗರಿಷ್ಠ ₹11,000 ಜಿಗಿದಿದ್ದು ಈಗ ಸರಾಸರಿ ಮಾರಾಟವು ₹10,000-₹10,300ರಷ್ಟಿದೆ ಎಂದು ತಿಳಿಸಿದೆ.
ಮಾರುಕಟ್ಟೆಗೆ ಡಿಸೆಂಬರ್ 2ರಂದು (ಸೋಮವಾರ) 129 ವಾಹನಗಳಲ್ಲಿ ಈರುಳ್ಳಿ ಆವಕ ಆಗಿದೆ. ಸೆಪ್ಟೆಂಬರ್ನಲ್ಲಿ ಪ್ರತಿ ಕ್ವಿಂಟಲ್ ₹3,000- ₹4,000 ನಡುವೆ ಮಾರಾಟ ಆಗುತ್ತಿತ್ತು. ಅಕ್ಟೋಬರ್ನಲ್ಲಿ ₹ 4,500 ಹಾಗೂ ನವೆಂಬರ್ನಲ್ಲಿ ₹ 9,000 ಮಾರಾಟ ಆಗಿ, ಸರಾಸರಿ ₹ 4,900ರಷ್ಟು ಇತ್ತು. ಡಿಸೆಂಬರ್ 2ರ ಸೋಮವಾರದಂದು ದಾಖಲೆಯ ₹11,000 ದಾಟಿದೆ ಎಂದು ಹೇಳಿದೆ.