ಕರ್ನಾಟಕ

karnataka

ETV Bharat / business

'ಈರುಳ್ಳಿ' ಬೆಳೆಗಾರರ ಏಟಿಗೆ ಬಿಜೆಪಿ, ಸೇನೆ ಕಂಗಾಲು... ಬೆಲೆ ಹೊಡೆತಕ್ಕೆ 3 ಸೀಟ್ ಖೋತಾ

ಈರುಳ್ಳಿ ಸಿಗಲಿಲ್ಲ ಎಂಬ ಕಾರಣಕ್ಕೆ ಸರ್ಕಾರಗಳೇ ಉರುಳಿರುವ ಭಾರತದಲ್ಲಿ ಈರುಳ್ಳಿ ಕೊರತೆ ಎದುರಾದ್ರೆ ಏನೆಲ್ಲ ಆಗಲಿದೆ ಎಂಬುದು 1998ರಲ್ಲಿ ನಡೆದಿತ್ತು. ಅಂದು ದೆಹಲಿ ಸಿಎಂ ಆಗಿದ್ದ ಸಾಹಿಬ್ ಸಿಂಗ್ ವರ್ವ ಅವರ ಬುಡವನ್ನೇ ಅಲುಗಾಡಿಸಿತ್ತು. ವರ್ವ ಜಾಗಕ್ಕೆ ಸಿಎಂ ಆಗಿ ಸುಷ್ಮಾ ಸ್ವರಾಜ್ ಬಂದರೂ ಕೂಡಾ ಅವರಿಗೂ ಈರುಳ್ಳಿ ಕೊರತೆಯ ಬಿಸಿ ತಟ್ಟಿ, ನಂತರ ನಡೆದ ಚುನಾವಣೆಯಲ್ಲಿ ಸೋಲಬೇಕಾಯ್ತು. ಅಂತಹದೇ ಪರಿಸ್ಥಿತಿ ಮಹಾರಾಷ್ಟ್ರ ಚುನಾವಣೆಯ ಕೆಲವು ಕ್ಷೇತ್ರಗಳಲ್ಲಿ ಕಂಡುಬಂದಿದೆ.

ಸಾಂದರ್ಭಿಕ ಚಿತ್ರ

By

Published : Oct 25, 2019, 5:46 PM IST

ಮುಂಬೈ: ಈರುಳ್ಳಿ ಬೆಲೆಯನ್ನು ನಿಯಂತ್ರಿಸುವ ಕೇಂದ್ರ ಸರ್ಕಾರದ ಕ್ರಮಗಳು ಈರುಳ್ಳಿ ಬೆಳೆಯ ಪ್ರಾಬಲ್ಯವಿರುವ ನಾಸಿಕ್‌ನ 11 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ- ಶಿವ ಸೇನಾ ಮೈತ್ರಿಕೂಟ ಬಲವಾದ ಪೆಟ್ಟು ತಿಂದಿದೆ.

ಈರುಳ್ಳಿ ಸಿಗಲಿಲ್ಲ ಎಂಬ ಕಾರಣಕ್ಕೆ ಸರ್ಕಾರಗಳೇ ಉರುಳಿರುವ ಭಾರತದಲ್ಲಿ ಈರುಳ್ಳಿ ಕೊರತೆ ಎದುರಾದ್ರೆ ಏನೆಲ್ಲ ಆಗುಲಿದೆ ಎಂಬುದಕ್ಕೆ 1998ರಲ್ಲಿ ನಡೆದಿದ್ದ ಒಂದು ಘಟನೆ ಸಾಕ್ಷಿಯಾಗುತ್ತೆ. ಅಂದು ದೆಹಲಿ ಸಿಎಂ ಆಗಿದ್ದ ಸಾಹಿಬ್ ಸಿಂಗ್ ವರ್ವ ಅವರ ಬುಡವನ್ನೇ ಅಲುಗಾಡಿಸಿತ್ತು. ವರ್ವ ಜಾಗಕ್ಕೆ ಸಿಎಂ ಆಗಿ ಸುಷ್ಮಾ ಸ್ವರಾಜ್ ಬಂದರೂ ಕೂಡಾ ಅವರಿಗೂ ಈರುಳ್ಳಿ ಕೊರತೆಯ ಬಿಸಿ ತಟ್ಟಿ, ನಂತರ ನಡೆದ ಚುನಾವಣೆಯಲ್ಲಿ ಸೋಲಬೇಕಾಯ್ತು. ಅಂತಹದೇ ಪರಿಸ್ಥಿತಿ ಮಹಾರಾಷ್ಟ್ರ ಚುನಾವಣೆಯ ಕೆಲವು ಕ್ಷೇತ್ರಗಳಲ್ಲಿ ಕಂಡುಬಂದಿದೆ.

2014ರ ವಿಧಾನಸಭೆ ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ದಿಂಡೋರಿ ಮತ್ತು ನಾಸಿಕ್​ ಪ್ರದೇಶದ ಕ್ಷೇತ್ರಗಳು ಬಿಜೆಪಿ-ಸೇನೆ ಪರವಾಗಿದ್ದವು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎನ್‌ಸಿಪಿ ಈ ಪ್ರದೇಶವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಂತೆ ತೋರುತ್ತಿದೆ.

2014ರ ವಿಧಾನಸಭಾ ಚುನಾವಣೆಯಲ್ಲಿ ಈ ಪ್ರದೇಶದಲ್ಲಿ ಕೇವಲ ಮೂರು ಸ್ಥಾನಗಳನ್ನು ಗೆದ್ದಿದ್ದ ಎನ್‌ಸಿಪಿ-ಕಾಂಗ್ರೆಸ್ ಮೈತ್ರಿ ತನ್ನ ಸಂಖ್ಯೆಯನ್ನು ದ್ವಿಗುಣಗೊಳಿಸುವ ಮೂಲಕ ಮತ್ತೆ ಪುಟಿದೆದ್ದಿದೆ. ಶಿವಸೇನೆ ಎರಡು ಸ್ಥಾನಗಳನ್ನು ಕಳೆದುಕೊಂಡರೆ, ಮಹಾರಾಷ್ಟ್ರದ ಏಕೈಕ ಸಿಪಿಎಂ ಶಾಸಕ ಜೀವ ಪಾಂಡು ಗವಿತ್ ಕೂಡ ತಮ್ಮ ಕ್ಷೇತ್ರ ಕಳೆದುಕೊಂಡು ಎನ್‌ಸಿಪಿಗೆ ಬಿಟ್ಟುಕೊಟ್ಟಿದ್ದಾರೆ. ಬಿಜೆಪಿ ತನ್ನ ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿ ಆದರೂ ಮತ ಗಳಿಕೆಯಲ್ಲಿ ಇಳಿಕೆ ಕಂಡುಬಂದಿದೆ.

ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ರಾಜ್ಯಗಳ ಚುನಾವಣೆಗೆ ಮುಂಚೆ, ಉತ್ಪಾದನೆ ಕಡಿಮೆಯಾದ ಕಾರಣ ಈರುಳ್ಳಿ ಬೆಲೆ ಏರಿಕೆ ಆಯಿತು. ದೇಶದಲ್ಲಿ ಈರುಳ್ಳಿ ಬೆಲೆಯ ನಿಗದಿಪಡಿಸುವ ಲಸಲ್‌ಗಾಂವ್‌ನ ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಈರುಳ್ಳಿ 4,000 ರೂ. ದಾಟಿತ್ತು. ದೇಶಾದ್ಯಂತ ಚಿಲ್ಲರೆ ಮಾರುಕಟ್ಟೆಗಳಲ್ಲಿ ಪ್ರತಿ ಕೆ.ಜಿ. ಈರುಳ್ಳಿ 50-60 ರೂ. ಮಾರಾಟ ಆಗಿತ್ತು.

ಬೆಲೆ ಏರಿಕೆ ನಿಯಂತ್ರಣ ದೃಷ್ಟಿಯಿಂದ ಕೇಂದ್ರ ಸರ್ಕಾರವು ಸೆಪ್ಟಂಬರ್​ 13ರಂದು ಪ್ರತಿ ಟನ್‌ಗೆ ₹ 850 ಕನಿಷ್ಠ ರಫ್ತು ಬೆಲೆ ವಿಧಿಸಿತ್ತು. ಇದಾದ ಬಳಿಕ ವ್ಯಾಪಾರಿಗಳ ಮೇಲೆ ದಾಸ್ತಾನು ಮಿತಿಯನ್ನು ನಿಗದಿಪಡಿಸಿತು. ಸೆಪ್ಟೆಂಬರ್ 30ರಂದು ಈರುಳ್ಳಿ ರಫ್ತುಗೆ ನಿಷೇಧ ವಿಧಿಸಿತು. ಈ ಎಲ್ಲ ಕ್ರಮಗಳ ಪರಿಣಾಮವಾಗಿ ಈರುಳ್ಳಿ ಬೆಲೆ ಕ್ವಿಂಟಲ್‌ಗೆ ಸುಮಾರು ₹ 2,500-2,600 ಕುಸಿಯಿತು. ಇದರಿಂದ ಕೋಪಗೊಂಡ ರೈತರು ಸರ್ಕಾರದ ವಿರುದ್ಧ ತಿರುಗಿಬಿದ್ದರು.

ABOUT THE AUTHOR

...view details