ಕರ್ನಾಟಕ

karnataka

ETV Bharat / business

ಅಗ್ಗದ ಬೆಲೆಯ ಒನ್‌ಪ್ಲಸ್ ನಾರ್ಡ್ ಸಿಇ 5ಜಿ ಸ್ಮಾರ್ಟ್​ಫೋನ್​​ ಬಿಡುಗಡೆ ದಿನಾಂಕ ನಿಗದಿ

ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸಿಸ್ಟಮ್ ಇದೆ. ಓಮ್ನಿ ದೃಷ್ಟಿಯಿಂದ 64 ಎಂಪಿ ಮುಖ್ಯ ಸಂವೇದಕ, 8 ಎಂಪಿ ಅಲ್ಟ್ರಾ-ವೈಡ್ ಮತ್ತು 2 ಎಂಪಿ ಡೆಪ್ತ್​ ಸಂವೇದಕವಿದೆ. ಮುಂಭಾಗದಲ್ಲಿ ಸೆಲ್ಫಿಗಾಗಿ 16 ಎಂಪಿ ಸ್ನ್ಯಾಪರ್ ಇರಲಿದೆ. ಎರಡು RAM/ಶೇಖರಣಾ ಆವೃತ್ತಿಗಳಿವೆ. 6GB + 64GB ಮತ್ತು 8GB +128GB, ಇದು UFS 2.1 ಸಂಗ್ರಹವಾಗಿದೆ..

oneplus
oneplus

By

Published : Jun 4, 2021, 3:27 PM IST

ನವದೆಹಲಿ :ಚೀನಾದ ಸ್ಮಾರ್ಟ್‌ಫೋನ್ ತಯಾರಕ ಒನ್‌ಪ್ಲಸ್ ತನ್ನ ಮುಂದಿನ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ನಾರ್ಡ್ ಸಿಇ 5ಜಿ ಬಿಡುಗಡೆ ಮಾಡಲು ಸಜ್ಜಾಗಿದೆ. ಸ್ನಾಪ್‌ಡ್ರಾಗನ್ 750ಜಿ ಚಿಪ್‌ಸೆಟ್‌ ಹೊಂದಿರಲಿದೆ.

ಈ ಸ್ಮಾರ್ಟ್‌ಫೋನ್ ಜೂನ್ 10ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಜಿಎಸ್​ಎಂಎರೆನಾ ಪ್ರಕಾರ, ಇದು ನಾರ್ಡ್ ಸಿಇ-ಕೋರ್ ಎಡಿಷನ್-ಮೂಲ ನಾರ್ಡ್ ಹೆಚ್ಚು ಆಧರಿಸಿದೆ. ಕಡಿಮೆ ಬೆಲೆಗೆ ಮಾರುಕಟ್ಟೆಗೆ ತರಬಹುದು. ಜೂನ್ 11ರಿಂದ ಭಾರತದಲ್ಲಿ ಮುಂಗಡ ಆರ್ಡರ್​ ಪ್ರಾರಂಭವಾಗಲಿವೆ ಎಂದಿದೆ.

ನಾರ್ಡ್ ಸಿಇ 5ಜಿ 6.43-ಇಂಚಿನ 90Hz ಅಮೋಲೆಡ್ ಟಚ್‌ಸ್ಕ್ರೀನ್, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಸ್ನಾಪ್‌ಡ್ರಾಗನ್ 750ಜಿ ಚಿಪ್‌ಸೆಟ್ ಮತ್ತು 30W ಫಾಸ್ಟ್ ಚಾರ್ಜಿಂಗ್ ಹೊಂದಿರುವ 4,500 mAh ಬ್ಯಾಟರಿ ಹೊಂದಿರುತ್ತದೆ.

ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸಿಸ್ಟಮ್ ಇದೆ. ಓಮ್ನಿ ದೃಷ್ಟಿಯಿಂದ 64 ಎಂಪಿ ಮುಖ್ಯ ಸಂವೇದಕ, 8 ಎಂಪಿ ಅಲ್ಟ್ರಾ-ವೈಡ್ ಮತ್ತು 2 ಎಂಪಿ ಡೆಪ್ತ್​ ಸಂವೇದಕವಿದೆ. ಮುಂಭಾಗದಲ್ಲಿ ಸೆಲ್ಫಿಗಾಗಿ 16 ಎಂಪಿ ಸ್ನ್ಯಾಪರ್ ಇರಲಿದೆ. ಎರಡು RAM/ಶೇಖರಣಾ ಆವೃತ್ತಿಗಳಿವೆ. 6GB + 64GB ಮತ್ತು 8GB +128GB, ಇದು UFS 2.1 ಸಂಗ್ರಹವಾಗಿದೆ.

ಒಂದೇ ಡೌನ್-ಫೈರಿಂಗ್ ಸ್ಪೀಕರ್ ಹೊಂದಿದ್ದು, ಆಂಡ್ರಾಯ್ಡ್ 11 ಆಧಾರಿತ ಆಕ್ಸಿಜನ್ಒಎಸ್‌ 11ಅನ್ನು ಚಾಲನೆ ಮಾಡುವ ನಿರೀಕ್ಷೆಯಿದೆ. ಇದು ಸಂಪೂರ್ಣವಾಗಿ ಪ್ಲಾಸ್ಟಿಕ್ ನಿರ್ಮಿತವಾಗಿದೆ (ಫ್ರೇಮ್ ಮತ್ತು ಹಿಂಭಾಗ ಎರಡೂ ಪ್ಲಾಸ್ಟಿಕ್. ಆದರೆ, ಪರದೆಯು ಗಾಜಿನಿಂದ ಮುಚ್ಚಲ್ಪಟ್ಟಿದೆ). ನಾರ್ಡ್ ಸಿಇ 5ಜಿ ಈಗಾಗಲೇ 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಹೊಂದಿದೆ.

ABOUT THE AUTHOR

...view details